ಕೊರೋನಾ ಸೋಂಕಿತರಿಗಾಗಿ ತಾವೇ ಇಂಜಕ್ಷನ್ ಸಾಗಾಟಕ್ಕೆ ಮುಂದಾದ ಸಂಸದ…! ಡಾ.ಜಾಧವ್ ನಡೆಗೆ ಮೆಚ್ಚುಗೆ..!!


ಬೆಂಗಳೂರು: ರಾಜ್ಯದ ಎಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರು ಹಾಗೂ ಕೊರೋನಾ ಸೋಂಕಿತರು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದಾರೆ. ಕಲಬುರಗಿಯಲ್ಲೂ ರೆಮ್ಡಿಸಿವರ್ ಇಂಜಕ್ಷನ್ ಕೊರತೆ ಉಂಟಾಗಿದ್ದು, ರೋಗಿಗಳಿಗೆ ನೆರವಾಗಲು ಸಂಸದರೇ ವಿಮಾನದ ಮೂಲಕ ಲಸಿಕೆ ತಂದು ಮಾದರಿ ಎನ್ನಿಸಿದ್ದಾರೆ.

ಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!

ಕಲಬುರಗಿಯಲ್ಲಿ ಕೊರೋನಾ ರೋಗಿಗಳಿಗೆ ರೆಮ್ಡಿಸಿವಿರ್ ಇಂಜಕ್ಷನ್ ಕೊರತೆ ತೀವ್ರವಾಗಿತ್ತು. ಈ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಸಂಸದ ಡಾ.ಉಮೇಶ್ ಜಾಧವ್ ಇಂಜಕ್ಷನ್ ತರಲು ಜಿಲ್ಲಾಢಳಿತವನ್ನು ನೆಚ್ಚಿಕೊಂಡಿಲ್ಲ. ಬದಲಾಗಿ ತಾವೇ ಸ್ವತಃ ಬೆಂಗಳೂರಿಗೆ ಆಗಮಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾಗೆ ಬಲಿ

ಅಷ್ಟೇ ಅಲ್ಲ ಸ್ವತಃ ತಾವೇ ಕೊರೋನಾ ವಾರ್ ರೂಂಗೆ ತೆರಳಿ, ರೋಗಿಗಳ ಅಗತ್ಯವನ್ನು ವಿವರಿಸಿ ತುರ್ತಾಗಿ ಇಂಜಕ್ಷನ್ ಪಡೆದುಕೊಂಡಿದ್ದಾರೆ. ಈ ಇಂಜಕ್ಷನ್ ಗಳನ್ನು ಜಿಲ್ಲಾಢಳಿತ ತರಿಸಿಕೊಳ್ಳುವುದಾದರೆ ಇನ್ನು ಒಂದು ದಿನ ವಿಳಂಬವಾಗುತ್ತಿತ್ತು. ಹೀಗಾಗಿ ಸ್ವತಃ ಡಾ.ಜಾಧವ್ ಈ ಇಂಜಕ್ಷನ್ ಗಳನ್ನು ತೆಗೆದುಕೊಂಡು ವಿಮಾನದಲ್ಲಿ ಕಲಬುರಗಿಗೆ ತೆರಳಿದ್ದಾರೆ.

https://kannada.newsnext.live/cinema/sandalwood-actor-komal-covid-positive-confirm-jaggesh/ಒಟ್ಟು 350 ರೆಮ್ಡಿಸಿವಿರ್ ಇಂಜಕ್ಷನ್ ಗಳನ್ನು ಡಾ.ಉಮೇಶ್ ಜಾಧವ್  ಕಲಬುರಗಿಗೆ ತಂದಿದ್ದು, ಇದರಿಂದ ತೀರಾ ಅಸ್ವಸ್ಥ ಸ್ಥಿತಿಯಲ್ಲಿರುವ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಜೀವದಾನ ಸಿಕ್ಕಂತಾಗಿದೆ ಎಂಬ ಮಾತು ಕೇಳಿಬಂದಿದೆ.  

Comments are closed.