ಕೊರೋನಾದ ಹೊತ್ತಿನಲ್ಲಿ ಮನೆಯಲ್ಲಿರಲೇ ಬೇಕು ಈ ಎರಡು ವಸ್ತು…! ಗಿಣಿರಾಮ ಸೀರಿಯಲ್ ನಟಿ ನಯನಾ ಕೊಟ್ರು ಮಹತ್ವದ ಮಾಹಿತಿ…!!

ಸ್ಯಾಂಡಲ್ ವುಡ್ ಜೊತೆಗೆ ಕನ್ನಡ ಕಿರುತೆರೆ ನಟಿಯರೂ ಕೂಡ  ಕೊರೋನಾಗೆ ಬಲಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕರೋನಾಗೆ ಸೋಂಕಿಗೆ ತುತ್ತಾಗಿದ್ದ ಗಿಣಿರಾಮ ಸೀರಿಯಲ್ ನ ನಟಿ ನಯನಾ ನಾಗರಾಜ್ ಸದ್ಯ ಚೇತರಿಸಿಕೊಂಡಿದ್ದು, ಅತ್ಯಂತ ಮಹತ್ವದ ಮಾಹಿತಿಯ ಜೊತೆಗೆ ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!

ಗಿಣಿರಾಮ ಸೀರಿಯಲ್ ನ ಮಹತಿ ಪಾತ್ರಧಾರಿ ನಟಿ ನಯನಾ ನಾಗರಾಜ್ ಒಂದು ವಾರದ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ತನಗೆ ಸೋಂಕು ತಗುಲಿರುವ ಸಂಗತಿ ಹಂಚಿಕೊಂಡಿದ್ದ ನಯನಾ ಕ್ವಾರಂಟೈನ್ ನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದರು.

https://www.facebook.com/watch/?v=1473906906287108

ಕೊರೋನಾ ಸೋಂಕಿತರಿಗಾಗಿ ತಾವೇ ಇಂಜಕ್ಷನ್ ಸಾಗಾಟಕ್ಕೆ ಮುಂದಾದ ಸಂಸದ…! ಡಾ.ಜಾಧವ್ ನಡೆಗೆ ಮೆಚ್ಚುಗೆ..!!

ನೀವೆಲ್ಲರೂ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತೀರಿ. ಆದರೆ ಆರೋಗ್ಯದ ದೃಷ್ಟಿಯಿಂದ ಅತಿ ಅಗತ್ಯವಾದ ವಸ್ತುಗಳನ್ನು ನೀವು ಖರೀದಿಸಿರುವುದಿಲ್ಲ. ಆದರೆ ಈಗ ಖಂಡಿತಾ ಹೀಗೆ ಮಾಡಬೇಡಿ. ಕೊರೋನಾದಂತಹ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಥರ್ಮಾಮೀಟರ್ ಮತ್ತು ಪಲ್ಸ್ ಆಕ್ಸಿಮೀಟರ್ ಎರಡು ಮೆಶಿನ್ ಗಳನ್ನು ಖಂಡಿತಾ ಖರೀದಿಸಿ ಇಟ್ಟುಕೊಳ್ಳಿ ಎಂದು ನಯನಾ ಮನವಿ ಮಾಡಿದ್ದಾರೆ.

ಥರ್ಮಾಮೀಟರ್ ನಲ್ಲಿ ನಿಮ್ಮ ಜ್ವರವನ್ನು ಮಾನಿಟರ್ ಮಾಡಿಕೊಳ್ಳಿ, ದೇಹದ ತಾಪಮಾನ ಸದಾ 98 ಕ್ಕಿಂತ ಹೆಚ್ಚಿದ್ದರೇ, ಖಂಡಿತಾ ಅದನ್ನು ಗಂಭೀರವಾಗಿ ಪರಿಗಣಿಸಿ. ಅಷ್ಟೇ ಅಲ್ಲ ಪಲ್ಸ್ ಆಕ್ಸಿಮೀಟರ್ ಖರೀದಿಸಿದ ಮೇಲೆ ಅದರಲ್ಲಿ ನಿಮ್ಮ ಆಕ್ಸಿಜನ್ ಪ್ರಮಾಣವನ್ನು ಮಾನಿಟರ್ ಮಾಡಿಕೊಳ್ಳಿ.

ಆಕ್ಸಿಜನ್ ಲೆವೆಲ್ 95 ಕ್ಕಿಂತ ಕೆಳಕ್ಕೆ ಬಂದು 90 ಗಡಿ ತಲುಪಿದರೇ ಖಂಡಿತಾ ನಿಮಗೆ ಚಿಕಿತ್ಸೆಯ ಅಗತ್ಯವಿದೆ. ಇದು ನಿಮ್ಮ ಗಮನದಲ್ಲಿರಲಿ. 90 ಕ್ಕಿಂತ ಕಡಿಮೆಯಾದರೇ ನೀವು ಜೀವವನ್ನೇ ಕಳೆದುಕೊಳ್ಳಬಹುದು. ಹೀಗಾಗಿ ದಯವಿಟ್ಟು ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಾಮೀಟರ್ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಕೊರೋನಾದಿಂದ ಐಸಿಯು ಸೇರಿದ್ದ ಕೋಮಲ್…! ರಾಯರ ಪವಾಡದಿಂದ ತಮ್ಮ ಚೇತರಿಸಿಕೊಂಡ ಎಂದ ನಟ ಜಗ್ಗೇಶ್…!!

ಇದೀಗ ಕೊರೋನಾದಿಂದ ಚೇತರಿಸಿಕೊಂಡಿರುವ ನಯನಾ, ಅತ್ಯಂತ ಮಹತ್ವದ ಸಂದೇಶ ಉಳ್ಳ ವಿಡಿಯೋದ ಜೊತೆ ಅಭಿಮಾನಿಗಳ ಮುಂದೇ ಬಂದಿದ್ದು, ಯಾರೂ ಕೊರೋನಾವನ್ನು ಕಡೆಗಣಿಸಬೇಡಿ. ಅತ್ಯಂತ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ವರ್ತಿಸಿ. ನಿಮ್ಮ ಕುಟುಂಬದ ಹಿರಿಯರ ಬಗ್ಗೆ ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ.

Comments are closed.