- ರಕ್ಷಾ ಬಡಾಮನೆ
ತಂಪಿನ ಬೀಜ ಎಂದೇ ಕರೆಸಿಕೊಳ್ಳುವ ಕಾಮ ಕಸ್ತೂರಿ ಅಥವಾ ಸಬ್ಜಿ ತನ್ನ ಔಷದೀಯ ಗುಣಗಳಿಂದ ಪುರಾತನ ಕಾಲದಿಂದಲೂ ಆಯುರ್ವೇದ ಹಾಗೂ ಚೈನೀಸ್ ಔಷಧೀಯ ಪದ್ದತಿಯ ಒಂದು ಭಾಗವಾಗಿದೆ.

ತುಳಸಿ ಗಿಡದ ಹತ್ತಿರ ಸಂಬಂಧಿಯಾದ ಕಾಮಕಸ್ತೂರಿ ಪರಿಮಳಯುಕ್ತವಾಗಿದೆ. ಮಧ್ಯ ಏಷ್ಯಾ ಮತ್ತು ವಾಯವ್ಯ ಭಾರತ ಕಾಮಕಸ್ತೂರಿಯ ಮೂಲವೆಂದು ಹೇಳಲಾಗುತ್ತಿದೆ.

ಆದ್ರೀಗ ಈ ಅಪರೂಪದ ಬೆಳೆಯನ್ನು ಭಾರತದಲ್ಲಿಯೂ ಬೆಳೆಯಲಾಗುತ್ತಿದೆ. ಸುಗಂಧಪೂರಿತ ಎಣ್ಣೆಗಾಗಿ ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ.

ಕಾಮಕಸ್ತೂರಿಯಲ್ಲಿ ಪ್ರೋಟಿನ್, ನಾರಿನ ಅಂಶ, ಕಾರ್ಬೋಹಡ್ರೇಟ್ ಗಳಿದ್ದು, ಈ ಅಂಶಗಳು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಮಾತ್ರವಲ್ಲ ಕಾಮಕಸ್ತೂರಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ.

ಕಾಮಕಸ್ತೂರಿಯಲ್ಲಿ ಫ್ಲೇವನಾಯ್ಡ್ ಅಂಶವೂ ಕೂ ಹೇರಳವಾಗಿದೆ. ಇದರ ಬೀಜದಲ್ಲಿ ಅಡಗಿರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೀರ್ಣ ಕ್ರಿಯೆಯಲ್ಲಿ ತೊಂದರೆ ಇರುವವರಿಗೆ ಇದು ಬಹಳ ಉಪಯೋಗವನ್ನು ನೀಡುತ್ತದೆ. ಈ ಬೀಜದ ಸೇವನೆಯಿಂದ ಮಲಬದ್ಧತೆ, ಭೇದಿ ನಿಯಂತ್ರಣ ಕೂಡಾ ಸಮರ್ಪಕವಾಗಿ ನಡೆಯುತ್ತದೆ.

ಬಾಯಲ್ಲಿ ಆಗುವ ಹುಣ್ಣು ಗಳಿಗೆ ಕಾಮ ಕಸ್ತೂರಿ ಬೀಜಗಳು ರಾಮಬಾಣದಂತೆ ಕೆಲಸ ಮಾಡುತ್ತದೆ. ಆಗಾಗ ಕಾಣಿಸಿಕೊಳ್ಳುವ ಉರಿಯೂತ ಶಮನ ಮಾಡುವ ಗುಣವನ್ನೂ ಕೂಡ ಹೊಂದಿದೆ.

ಕಾಮಕಸ್ತೂರಿಯು ದೇಹದಲ್ಲಿರುವ ಕೊಲೆಸ್ಟರಾಲ್ ಪ್ರಮಾಣವನ್ನು ನಿಯಂತ್ರಿಸಿ, ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ರಕ್ತದೊತ್ತಡ ಕಡಿಮೆ ಮಾಡುವಲ್ಲಿಯೂ ಹೆಚ್ಚು ಸಹಕಾರಿಯಾಗಿದೆ. ಕಾಮಕಸ್ತೂರಿಯ ಎಲೆಯ ರಸವನ್ನು ಚೆನ್ನಾಗಿ ಹಿಂಡಿ ಆ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ನೆಗಡಿಯ ಅಂಶವನ್ನು ತೆಗೆದು ಹಾಕಬಹುದು ಹಾಗೂ ನಿಮಗೆ ಬರುವಂತಹ ಚಿಕ್ಕ ಜ್ವರವನ್ನು ಕೂಡ ಕಡಿಮೆ ಮಾಡುತ್ತದೆ.

ಕಾಮಕಸ್ತೂರಿಯು ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿರುವುದರಿಂದಾಗಿ ಇದನ್ನು ತಂಪಿನ ಬೀಜವೆಂದು ಕರೆಯಲಾಗುತ್ತಿದ್ದು, ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿರುವ ಉಷ್ಣತೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ಕಾಮಕಸ್ತೂರಿ ಗಿಡದ ಎಲೆಯಿಂದ ರಸ ತೆಗೆದು ಅದನ್ನು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಕಾಮ ಕಸ್ತೂರಿ ಬೀಜವನ್ನು ದಿನ ಸೇವಿಸುವುದರಿಂದ ದೇಹದ ಹೆಚ್ಚುವರಿ ಬೊಜ್ಜು ಕರಗಿಸಲು ಸಹಕಾರಿಯಾಗಿದೆ.

ದೇಹದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುವ ಕಾಮಕಸ್ತೂರಿ ಮಧುಮೇಹಿ ಗಳಿಗೂ ಕೂಡ ಬಹಳ ಉಪಯೋಗಕಾರಿ. ಅಲ್ಲದೇ ಕಾಮಕಸ್ತೂರಿ ಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.
(Cancer Prevents Obesity Kama kasturi )