ಕೊರೋನಾ ಎರಡನೇ ಅಲೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ. ಆದರೆ ಆರಂಭದಲ್ಲೇ ಬಿಗ್ ಬಾಸ್ ಮನೆ ರಣರಂಗವಾಗಿದ್ದು, ಕಿಚ್ಚನ ಎದುರಿನಲ್ಲಿ ನಡೆದ ವಾರದ ಕತೆ ಆಕ್ರೋಶದ ಮಾತುಗಳಿಗೆ ವೇದಿಕೆಯಾಗಿದೆ.

ಬುಧವಾರದಿಂದ ಆರಂಭಗೊಂಡ ಬಿಗ್ ಬಾಸ್ ಶೋದ ಆರಂಭದಲ್ಲೇ ನೇರ ನಾಮಿನೇಷನ್ ಬೆಂಕಿ ಹಚ್ಚಿತ್ತು. ಇದರ ಮಧ್ಯದಲ್ಲಿ ವಿಕೆಂಡ್ ನಲ್ಲಿ ಕಿಚ್ಚ ಸುದೀಪ್ ಎದುರು ನಡೆದ ವಾರದ ಕತೆಯಲ್ಲೂ ಈ ಮುನಿಸು, ಆಕ್ರೋಶ ಮುಂದುವರೆದಿದ್ದು, ಚಕ್ರವರ್ತಿ ಚಂದ್ರಚೂಡ್ ಹಾಗೂ ಮಂಜುಪಾವಗಡ್ ನಡುವೆ ವಾಕ್ಸಮರವೇ ನಡೆದು ಹೋಗಿದೆ.

ಶೋ ಆರಂಭದಲ್ಲಿ ಕೊಂಚ ಮಂಕಾಗಿದ್ದ ಚಂದ್ರಚೂಡ್ ರನ್ನು ಸುದೀಪ್ ಮಾತನಾಡಿಸಿ ಮೌನಕ್ಕೆ ಕಾರಣ ಕೇಳುತ್ತಿದ್ದಂತೆ ಚಂದ್ರಚೂಡ್ ತಮಗೆ ಮಂಜು ಬಗ್ಗೆ ಇದ್ದ ಎಲ್ಲ ಅಸಮಧಾನವನ್ನು ಹೊರಹಾಕಿದ್ದಾರೆ. ಇದಕ್ಕೆ ಮಂಜು ಪಾವಗಡ ಕೂಡ ಸರಿಯಾಗಿ ತಿರುಗುತ್ತರ ನೀಡಿದ್ದಾರೆ.

ಮಂಜು ಪಾವಗಡ್ ಹಾಗೂ ದಿವ್ಯಾ ಸುರೇಶ್ ಅವರನ್ನು ಫೇಕ್ ಲವ್ ಸ್ಟೋರಿ ಎಂದಿರುವ ಚಂದ್ರಚೂಡ, ಬೇಲಿ ಬದಿಯ ಕಾಮ ಎಂಬರ್ಥದಲ್ಲಿ ಟೀಕಿಸಿದ್ದು, ಇದು ಎಲ್ಲರನ್ನು ಅಚ್ಚರಿಗೆ ದೂಡಿತು. ಚಂದ್ರಚೂಡ ದಿವ್ಯಾ ಹಾಗೂ ಮಂಜು ನಡುವಿನ ಆತ್ಮೀಯತೆಯ ಬಗ್ಗೆ ಕಟುವಾಗಿ ಟೀಕಿಸಿದ್ದು, ಆಕ್ರೋಶದಿಂದ ಮಾತುಗಳ್ಳನ್ನಾಡಿದ್ದಾರೆ.

ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ಮಂಜುಪಾವಗಡ ಇಷ್ಟೆಲ್ಲ ಮಾತನಾಡಿದ ಚಂದ್ರಚೂಡ ಎಲ್ಲಿಂದ ಬಂದವರು ಎಂಬುದು ನಮಗೆ ಗೊತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ ನಟಿ ಶೃತಿಯವರನ್ನು ಚಂದ್ರಚೂಡ ಮದುವೆಯಾದ ವಿಚಾರವನ್ನು ಪ್ರಸ್ತಾಪಿಸಿ ವಿವಾದಕ್ಕೆ ಸಿಲುಕಿದ್ದಾರೆ. ಇನ್ನು ಈ ಎಲ್ಲ ಮಾತುಗಳಿಗೆ ದಿವ್ಯಾ ಸುರೇಶ್ ಕಣ್ಣೀರು ಸುರಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಿನಲ್ಲಿ ಬಹುದಿನಗಳ ನಂತರ ಆರಂಭಗೊಂಡ ಬಿಗ್ ಬಾಸ್ ಹಾಗೂ ವಾರದ ಕತೆ ಕಿಚ್ಚನ ಜೊತೆಯಲ್ಲಿ ಸ್ಪರ್ಧಿಗಳ ಹೈಡ್ರಾಮಾ ನಡೆದಿದ್ದು, ಕಿಚ್ಚ ಸುದೀಪ್ ಎಲ್ಲವನ್ನು ಸರಿತೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ.