ಹಾಟ್ ಪೋಟೋಸ್ ನಲ್ಲಿ ಕಿರುತೆರೆ ಬೆಡಗಿ….! ಶ್ವೇತವಸ್ತ್ರದಲ್ಲಿ ಮನಸೆಳೆದ ಮೇಘಾ ಶೆಟ್ಟಿ…!!

ನಟಿಸಿದ ಮೊದಲ ಧಾರಾವಾಹಿಯಲ್ಲೇ ಕಿರುತೆರೆಯಲ್ಲಿ ಗುರುತಿಸಿಕೊಂಡು ವೀಕ್ಷಕರ ಮನೆಮಾತಾದ ಬೆಡಗಿ‌ಮೇಘಾ ಶೆಟ್ಟಿ ಹಾಟ್ ಪೋಟೋಸ್ ನಲ್ಲಿ ಮಿಂಚಿದ್ದಾರೆ.

ಸೀರಿಯಲ್ ನಲ್ಲಿ ಅಪ್ಪಟ ಮಿಡ್ಲ್ ಕ್ಲಾಸ್ ಗರ್ಲ್ ಗೆಟಪ್ ನಲ್ಲಿ ಕಾಣಿಸಿಕೊಳ್ಳೋ ಮೇಘಾ, ಇದೀಗ ವೈಟ್ ಆ್ಯಂಡ್ ವೈಟ್ ಔಟ್ ಫಿಟ್ ನಲ್ಲಿ ಬೋಲ್ಡ್ ಪೋಟೋಸ್ ಮೂಲಕ ನೋಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ.

ಬಿಳಿಬಣ್ಣದ ಗೌನ್, ಅದಕ್ಕೊಪ್ಪುವ ಜ್ಯುವೆಲ್ಲರಿ ತೊಟ್ಟು ಸ್ವಿಮ್ಮಿಂಗ್‌ಫೂಲ್ ನಲ್ಲಿ ಮೇಘಾ ನೀಡಿರೋ ಪೋಸ್ ಗೆ ಅಭಿಮಾನಿಗಳು ಫಿದಾ ಆದಂತಿದೆ.‌

ಸದ್ಯ ಜೊತೆ ಜೊತೆಯಲಿ ಸೀರಿಯಲ್ ಹಾಗೂ ಗೋಲ್ಡ್ ನ ಸ್ಟಾರ್ ಗಣೇಶ್ ಜೊತೆ ಸಿನಿಮಾದಲ್ಲಿ ಬ್ಯುಸಿಯಾಗಿರೋ ಮೇಘಾ ಆಗಾಗ ಪೋಟೋಶೂಟ್ ಗಳ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಲಾರಂಭಿಸಿದ್ದಾರೆ.

ಮೇಘಾ ಜೊತೆ ಜೊತೆ ಸೀರಿಯಲ್ ನಲ್ಲಿ ಮಿಂಚಿ ಜನಪ್ರಿಯರಾಗುತ್ತಿದ್ದಂತೆ ಬೆಳ್ಳಿ ತೆರೆಯಿಂದ ಅವರಿಗೆ ಸಾಕಷ್ಟು ಆಫರ್ ಬರಲಾರಂಭಿಸಿದ್ದು ಮೇಘಾ ಕಿರು ತೆರೆ ಹಾಗೂ ಹಿರಿತೆರೆಯಲ್ಲೂ ಬಹುಬೇಡಿಕೆಯ ನಟಿಯಾಗೋ ಲಕ್ಷಣ ಇದೆ.

Comments are closed.