ಕನ್ನಡ ಕಿರುತೆರೆ ಲೋಕದಲ್ಲಿ ವಿಭಿನ್ನ ಕಥಾಹಂದರದಿಂದ ಮನಸೆಳೆದ ಧಾರಾವಾಹಿ ಜೊತೆ ಜೊತೆಯಲಿ. ಆರಂಭದಿಂದಲೂ ಒಳ್ಳೆಯ ಟಿಆರ್ಪಿ ಕಾಯ್ದುಕೊಂಡ ಬಂದ ಧಾರಾವಾಹಿ ಇದೀಗ ಹೊಸ ದಾಖಲೆ ಬರೆದಿದೆ.

ಜೊತೆ ಜೊತೆಯಲಿ ಟ್ರ್ಯಾಕ್ ಟೈಟಲ್ ಸಾಂಗ್ ಎಲ್ಲರ ಮನಗೆದ್ದಿದ್ದು ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಈಗ ಈ ಸಾಂಗ್ ವೀಕ್ಷಣೆ ೨೫ ಮಿಲಿಯನ್ ದಾಟಿದ್ದು ಸೀರಿಯಲ್ ತಂಡ ಸಿಹಿ ಸುದ್ದಿ ಹಂಚಿಕೊಂಡಿದೆ.

ಕನ್ನಡ ಸೀರಿಯಲ್ ಇತಿಹಾಸದಲ್ಲೇ ಇಂತಹದೊಂದು ದಾಖಲೆ ಬರೆದ ಮೊದಲ ಸೀರಿಯಲ್ ಖ್ಯಾತಿಗೆ ಜೊತೆ ಜೊತೆಯಲಿ ಭಾಜನವಾಗಿದೆ.
ಕಳೆದ ಒಂದು ವರ್ಷದ ಹಿಂದೆ ಝೀ ಕನ್ನಡದ ಯೂಟ್ಯೂಬ್ ಚಾನೆಲ್ ನಲ್ಲಿ ಜೊತೆ ಜೊತೆ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು. ಈಗ ಹೊಸ ದಾಖಲೆ ಬರೆದಿದೆ.
https://www.instagram.com/p/CPP8SFnHhLl/?utm_medium=copy_link
ಈ ವಿಚಾರವನ್ನು ಸ್ವತಃ ನಟ ಅನಿರುದ್ಧ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಧಾರಾವಾಹಿ ಟ್ರ್ಯಾಕ್ ನ್ನು ಹರ್ಷಪ್ರಿಯ ಭದ್ರಾವತಿ ಬರೆದಿದ್ದು,ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದರು.ನಿನಾದ್ ನಾಯಕ್,ನಿಹಾಲ್ ಹಾಗೂ ರಜತ್ ಹೆಗಡೆ ಹಾಡಿಗೆ ಧ್ವನಿಯಾಗಿದ್ದರು.

40 ವರ್ಷ ದಾಟಿದ ಶ್ರೀಮಂತ ಉದ್ಯಮಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಮಧ್ಯಮವರ್ಗದ ಹುಡುಗಿಯನ್ನು ಪ್ರೀತಿಸುವ ಕತೆಯನ್ನು ಹೊಂದಿದ ಈ ಧಾರಾವಾಗಿ ಹೆಂಗಳೆಯರ ಮನಗೆದ್ದಿದ್ದು, ಹಿರಿತೆರೆಯಲ್ಲಿ ನಟಿಸಿದ ಅನುಭವ ಹೊಂದಿರುವ ನಟ ಅನಿರುದ್ಧ ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸಿ ಗೆದ್ದಿದ್ದಾರೆ.