Divya Suresh :ಲಿಪ್ ಲಾಕ್ ನಿಂದ ಸುದ್ದಿಯಾದ ಕನ್ನಡ ಬಿಗ್ ಬಾಸ್ ಸ್ಪರ್ಧಿ….!!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಎಷ್ಟು ಸುದ್ದಿ‌ ಮಾಡುತ್ತೋ ಅದಕ್ಕಿಂತ ಹೆಚ್ಚು ಸದ್ದು ಮಾಡೋದು ಅಭ್ಯರ್ಥಿ ಗಳು. ಇದೀಗ ಬಿಗ್ ಬಾಸ್ ಸ್ಪರ್ಧಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಕೊರೋನಾ ಎರಡನೆ ಅಲೆಯ ಕಾರಣಕ್ಕೆ ಮೊಟಕುಗೊಂಡ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳೆಲ್ಲ ಮನೆಗೆ ಮರಳಿದ್ದಾರೆ. ಈ ಸ್ಪರ್ಧಿಗಳ ಪೈಕಿ ಮನೆಯೊಳಗೆ ಸಖತ್ ಹವಾ ಸೃಷ್ಟಿಸಿದ್ದ ನಟಿ ದಿವ್ಯಾ ಸುರೇಶ್ ಬಿಗ್ ಬಾಸ್ ಅಂಗಳದಿಂದ ಹೊರ ಬರುತ್ತಿದ್ದಂತೆ ತುಟಿಗೆ ತುಟಿ ಬೆಸೆದು ಸದ್ದು ಮಾಡಿದ್ದಾರೆ.

ಇಷ್ಟಕ್ಕೂ ದಿವ್ಯ ಸುರೇಶ್ ಲಿಪ್ ಲಾಕ್ ಮಾಡಿರೋದು ಯಾರ ಜೊತೆಗೆ ಅನ್ನೋ ಕುತೂಹಲನಾ ? ದಿವ್ಯ ಸುರೇಶ್ ತುಟಿಗೆ ತುಟಿ ಬೆಸೆದಿರೋದು ರಿಯಲ್ ಲೈಫ್ ಅಲ್ಲ. ಬದಲಾಗಿ ರೀಲ್ ನಲ್ಲಿ. ಹೌದು ಬಿಗ್ ಬಾಸ್ ಗೆ ಹೋಗೋ ಮುನ್ನವೇ ದಿವ್ಯಾ ಸುರೇಶ್ ರೌಡಿ ಬೇಬಿ ಅನ್ನೋ ಸಿನಿಮಾ ದಲ್ಲಿ‌ ನಟಿಸಿದ್ದರು. ಈ ಸಿನಿಮಾದ ಹಾಟ್ ದೃಶ್ಯ ಈಗ ಸಖತ್ ವೈರಲ್ ಆಗಿದೆ.

ರೌಡಿ ಬೇಬಿ ಸಿನಿಮಾದ ಹಾಡೊಂದ ರಲ್ಲಿ ದಿವ್ಯ ಸುರೇಶ್ ಹಾಟ್ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿ ದ್ದಾರೆ. ಅದೇ ಪೋಟೋ ಗಳು ಇದೀಗ ಸಖತ್ ವೈರಲ್ ಆಗಿದೆ.

https://kannada.newsnext.live/sandalwood-bollywood-rashmikamandnna-video-troll-english-kannada/

ಇನ್ನೂ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಾಗ ವೇದಿಕೆ ಮೇಲೆ ತಮ್ಮ ನೋವು ತೋಡಿಕೊಂಡಿದ್ದ ದಿವ್ಯ ಸುರೇಶ್ ನಾನು ಏನೇ ಮಾಡಲು ಹೋದರೂ ಅದು ಅರ್ಧದಲ್ಲೇ ನಿಂತು ಹೋಗುತ್ತದೆ. ಸಿನಿಮಾ, ಸೀರಿಯಲ್ ಏನಾದ್ರು ಅಷ್ಟೇ ಎಂದಿದ್ದರು. ಅವರ ಮಾತಿನಂತೆ ಅವರು ಸ್ಪರ್ಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಕರೋನಾ ಕಾರಣ ದಿಂದ ಅರ್ಧದಲ್ಲೇ ನಿಂತು ಹೋಗಿದ್ದು ಮಾತ್ರ ದುರದೃಷ್ಟವೇ ಸರಿ.

Comments are closed.