ಕಾರ್ಕಳ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಕರೆದೊಯ್ದು ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿ ನಂತರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿವಾಸಿ ಪ್ರಾಣೇಶ್ (38 ವರ್ಷ) ಎಂಬಾತನೇ ಬಂಧಿತ ಆರೋಪಿ. ಯುವತಿ ಕಾಲೇಜಿ ಗೆಂದು ತೆರಳಲು ಬಸ್ಸಿಗೆ ಕಾಯುತ್ತಿದ್ದ ವೇಳೆ ಕಾರಿನಲ್ಲಿ ಬಂದ ಪ್ರಾಣೇಶ್ ಡ್ರಾಪ್ ಕೊಡುವುದಾಗಿ ಹೇಳಿದ್ದಾನೆ. ದೊಡ್ಡಪ್ಪನ ಪರಿಚಯ ದವನಾಗಿರುವ ಕಾರಣಕ್ಕೆ ಯುವತಿ ಕಾರಿನಲ್ಲಿ ಕುಳಿತುಕೊಂಡಿದ್ದಾಳೆ. ಆದರೆ ಆಕೆಯನ್ನು ಕಾಲೇಜಿಗೆ ಬಿಡದೆ ಬೇರೆ ಮಾರ್ಗದಲ್ಲಿ ಕಾರನ್ನು ಚಲಾಯಿಸಿದ್ದಾನೆ.
ನಂತರ ಆಕೆಗೆ ಅಮಲು ಬರುವ ಪದಾರ್ಥವನ್ನು ಜ್ಯೂಸ್ ನಲ್ಲಿ ಮಿಕ್ಸ್ ಮಾಡಿಕೊಟ್ಟು ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ವೆಸಗಿದ್ದಾನೆ. ಬಳಿಕ ಅತ್ಯಾಚಾರದ ವಿಡಿಯೋ ತೆಗೆದು ಯಾರಿಗಾದರೂ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ನಂತರ ರ ಜನವರಿ 12 ರಂದು ಯುವತಿ ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆಂದು ತೆರಳಿದ ವೇಳೆ ಈಕೆಯನ್ನು ಬೈಲೂರಿಗೆ ಕರೆಸಿ, ಗುಡ್ಡೆಯಂಗಡಿ ಎಂಬಲ್ಲಿ ಮತ್ತೊಮ್ಮೆ ಅತ್ಯಾಚಾರ ನಡೆಸಿರುತ್ತಾನೆಂದು ಯುವತಿ ಆರೋಪಿಸಿದ್ದಾಳೆ. ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.