ಒಂಟಿ ಮನೆ ಆಟಕ್ಕೆ ಕೌಂಟ್ ಡೌನ್…! ಶೋ ಬಗ್ಗೆ ಕಿಚ್ಚ್ ಸುದೀಪ್ ಹೇಳಿದ್ದೇನು ಗೊತ್ತಾ?!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ಶೋ  ಬಿಗ್ ಬಾಸ್ ಸೀಸನ್-8 ಕೊರೋನಾ ಕಾರಣಕ್ಕೆ ಮುಂದೂಡಿಕೆಯಾಗುತ್ತಲೇ ಇತ್ತು. ಆದರೆ ಈಗ ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಮಾರ್ಚ್ ವೇಳೆಗೆ ಕನ್ನಡಿಗರಿಗೆ ಒಂಟಿಮನೆ ಆಟ ನೋಡೋಕೆ ಅವಕಾಶ ಸಿಗಲಿದೆ.

ಬಿಗ್ ಬಾಸ್ ಶೋದ ಪ್ರಮುಖ ಆಕರ್ಷಣೆ ಕಿಚ್ಚ್ ಸುದೀಪ್. ಹೀಗಾಗಿ ಬಿಗ್ ಬಾಸ್ ಶೋ ಗೂ ಮುನ್ನ ಕಿಚ್ಚ್ ಸುದೀಪ್ ಆಂಕ್ಯರಿಂಗ್ ಪ್ರೋಮೋ ಸಿದ್ಧವಾಗುತ್ತಿದೆ. ಈ ವಿಚಾರವನ್ನು ಸ್ವತಃ ಶೋದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ  ಸುದೀಪ್ ಜೊತೆ ಶೂಟಿಂಗ್ ನಡೆಸುತ್ತಿರೋ ಪೋಟೋ ಹಂಚಿಕೊಂಡಿರೋ ಪರಮೇಶ್ವರ್ ಬಿಗ್ ಬಾಸ್ ಶೋ ಪ್ರೋಮೋ ಶೂಟಿಂಗ್ ಎಂದು ಟೈಟಲ್ ನೀಡಿದ್ದಾರೆ. ಅಷ್ಟೇ ನಟ ಕಿಚ್ಚ್ ಸುದೀಪ್ ಕೂಡ ತಮ್ಮ ಟ್ವೀಟರ್ ನಲ್ಲಿ  ಪ್ರೋಮೋ ಶೂಟಿಂಗ್ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಅಕ್ಟೋಬರ್ ವೇಳೆಗೆ ಆರಂಭವಾಗಿ ಡಿಸೆಂಬರ್ ,ಜನವರಿ ವೇಳೆಗೆ ಮುಕ್ತಾಯಗೊಳ್ಳುತ್ತಿದ್ದ ಬಿಗ್ ಬಾಸ್ ಶೋ ಈ ಭಾರಿ ಕೊರೋನಾ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಈಗ ಮಾರ್ಚ್ ವೇಳೆಗೆ ಶೋ ಆರಂಭವಾಗಲಿದೆ. ಕೊರೋನಾ ಮಾರ್ಗಸೂಚಿ ಅನ್ವಯ  ಶೂಟಿಂಗ್ ಹಾಗೂ ಬಿಗ್ ಬಾಸ್ ಶೋ ನಡೆಸಲು ವಾಹಿನಿ ಸಿದ್ಧವಾಗಿದೆ.

ಈ ಭಾರಿಯೂ ವಿವಿಧ ಕ್ಷೇತ್ರದ ಸಾಧಕರು ಬಿಗ್ ಬಾಸ್ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದ್ದು, ಡ್ರೋನ್ ಕತೆಕಟ್ಟಿದ ಡ್ರೋನ್ ಪ್ರತಾಪ್, ಜೊತೆ ಜೊತೆಯಲಿ ಅನಿರುದ್ಧ, ಗಾಯಕ ಸಂಚಿತ್ ಹೆಗ್ಡೆ, ನಟ ಹಾಗೂ ಗಾಯಕ ಸುನೀಲ್, ಪ್ರಸಿದ್ಧ ರಾಜಕಾರಣಿ ಎಚ್.ವಿಶ್ವನಾಥ್ ಸೇರಿ ಹಲವರ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ಕೇಳಿಬಂದಿದೆ.

Comments are closed.