ಭಾನುವಾರ, ಏಪ್ರಿಲ್ 27, 2025
Homeagricultureರಸಗೊಬ್ಬರಕ್ಕೆ ದರ ನಿಗದಿ ಪಡಿಸಿದ ಸರ್ಕಾರ….! ಕಾಳಸಂತೆಕೋರರಿಗೆ ಕಾನೂನು ಕ್ರಮದ ಎಚ್ಚರಿಕೆ….!!

ರಸಗೊಬ್ಬರಕ್ಕೆ ದರ ನಿಗದಿ ಪಡಿಸಿದ ಸರ್ಕಾರ….! ಕಾಳಸಂತೆಕೋರರಿಗೆ ಕಾನೂನು ಕ್ರಮದ ಎಚ್ಚರಿಕೆ….!!

- Advertisement -

ಕೊರೋನಾ ಸಂಕಷ್ಟದ ನಡುವೆಯೂ ರೈತರ ಸಹಾಯಕ್ಕೆ ಧಾವಿಸಿರುವ ಸರ್ಕಾರ, ಕೃಷಿಗೆ ಹೆಚ್ಚಿನ ಸಾಲ ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಮುಂಗಾರು ಬಿತ್ತನೆ ಸೇರಿದಂತೆ ವಿವಿಧ ಕಾರಣಕ್ಕೆ ಅಗತ್ಯವಾಗಿರುವ ರಸಗೊಬ್ಬರ ಪೊರೈಕೆಗೆ ಬದ್ಧ ಎಂದಿರುವ ಸರ್ಕಾರ, ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ಸಚಿವ ಬಿ.ಸಿ.ಪಾಟೀಲ್ ಮಾತನಾಡಿದ್ದು, . ಸಹಕಾರ ಸಂಘಗಳ ಮೂಲಕ ರೈತರಿಗೆ ರಸಗೊಬ್ಬರ ಪೊರೈಕೆಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ಗ್ರೇಡ್ ನ ರಸಗೊಬ್ಬರಳು ಲಭ್ಯವಿದೆ. ಈ ರಸಗೊಬ್ಬರಗಳನ್ನು ಸರ್ಕಾರ ನಿಗದಿ ಪಡಿಸಿದ ದರಕ್ಕೆ ಮಾರಲು ಈಗಾಗಲೇ ಸೂಚಿಸಲಾಗಿದೆ.

ಒಂದೊಮ್ಮೆ ಖಾಸಗಿ ಮಾರಾಟಗಾರರು ಅಥವಾ ಸಹಕಾರ ಸಂಘಗಳು ಈ ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದಲ್ಲದೇ ಅಗತ್ಯವಿರುವಷ್ಟು ರಸಗೊಬ್ಬರ ಪೊರೈಕೆಗೆ ಸರ್ಕಾರ ಕ್ರಮಕೈಗೊಂಡಿದ್ದು, ಹೀಗಿದ್ದೂ ಜಿಲ್ಲೆಗಳಲ್ಲಿ ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಿದರೇ ಅಂತಹವರ ವಿರುದ್ಧ ಅಗತ್ಯ ವಸ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಯೂರಿಯಾ ಗೊಬ್ಬರ 266 ರೂಪಾಯಿ, ಡಿಎಪಿ 1200,ಪೊಟ್ಯಾಷ್ 850 ರಿಂದ 1000,ಮದ್ರಾಸ್ ಫರ್ಟಿಲೈಸನ್ 1750 ಹೀಗೆ ವಿವಿಧ ಗೊಬ್ಬರಗಳಿಗೆ ಸರ್ಕಾರ ಬೆಲೆ ನಿಗದಿಪಡಿಸಿದೆ.

RELATED ARTICLES

Most Popular