Bhagavad Gita teaching in school : ಶಾಲೆಯಲ್ಲಿ ಭಗವದ್ಘಿತೆ ಬೋಧನೆ: ಸಚಿವ ಬಿ.ಸಿ.ನಾಗೇಶ್ ಸಮ್ಮುಖದಲ್ಲಿ ಮಹತ್ವದ ಸಭೆ

ಬೆಂಗಳೂರು : Bhagavad Gita teaching in school : ಶಾಲಾ‌ಮಕ್ಕಳಿಗೆ ನೈತಿಕ ಶಿಕ್ಷಣ ಬೋಧಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಭಗವದ್ಘಿತೆ ಬೋಧಿಸಲು ಮುಂದಾಗಿದೆ. ಈ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಧಾರ್ಮಿಕ ಮುಖಂಡರ ಅಭಿಪ್ರಾಯ ಪಡೆಯಲು ನಾಳೆ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಆದರೆ ಈ ಸಭೆಯಲ್ಲೂ ಹೊಸ ವಿವಾದ ವೊಂದು ತಲೆದೋರಿದ್ದು, ಶಿಕ್ಷಣ ಇಲಾಖೆಯ ಈ ಸಭೆಯಲ್ಲಿ ಕೇವಲ ಒಂದು ಧರ್ಮದವರಿಗೆ ಮಾತ್ರ ಮಣೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಭಗವದ್ಘಿತೆ ಬೋಧಿಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಚರ್ಚಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಮವಾರ ವಿಧಾನಸೌಧದಲ್ಲಿ ಸಭೆ ಕರೆದಿದ್ದಾರೆ.

ಈ ಸಭೆಗೆ ಜೆಎಸ್ಎಸ್ ಸ್ವಾಮೀಜಿ, ಆದಿ ಚುಂಚನಗರಿ ಮಠದ ಸ್ವಾಮಿಜಿ, ಸಿರಿಗೆರೆ ಮಠದ ಸ್ವಾಮೀಜಿ,ರಾಮಕೃಷ್ಣ ಮಠದ ಸ್ವಾಮೀಜಿ, ಆರ್ಟ್ ಆಫ್ ಲಿಂವಿಂಗ್ ರವಿಶಂಕರ ಗೂರುಜಿ, ಜಗ್ಗಿ ವಾಸದೇವ ಗೂರುಜಿ, ಕಸ್ತೂರಿ ರಂಗನ,ಗುರುರಾಜ್ ಕರ್ಜಗಿ, ಹಾಗೂ ಡಾ ಪರಮೇಶ್ವರ್ , ಎಂಬಿ ಪಾಟೀಲ್ ಹಾಗೂ ಕೃಷ್ಣ ಭೈರೇಗೌಡರಿಗೆ ಅಹ್ವಾನ ನೀಡಲಾಗಿದೆಯಂತೆ.

ಆದರೆ ಈ ಸಭೆಗೆ ವಕ್ಫ್ ಬೋರ್ಡ್, ಮುಸ್ಲಿಂ ಸಂಘಟನೆ, ಜೈನ್, ಕ್ರಿಶ್ಚಿಯನ್ ಧರ್ಮದ ಮುಖಂಡರನ್ನಾಗಲಿ ಅಥವಾ ನಾಯಕರನ್ನಾಗಲಿ ಆಹ್ವಾನಿಸಿಲ್ಲ ಎನ್ನಲಾಗಿದೆ.ಈ ವಿಚಾರ ಈಗ ವಿಚಾರಕ್ಕೆ ಕಾರಣವಾಗಿದೆ. ನಾಳೆ ಸಭೆಯಲ್ಲಿ ಪ್ರಮುಖವಾಗಿ ನೈತಿಕ ಶಿಕ್ಷಣದ ಅಡಿಯಲ್ಲಿ ಮಕ್ಕಳಿಗೆ ಯಾವೆಲ್ಲ ಅಂಶಗಳನ್ನು ಬೋಧಿಸಬೇಕು?, ಯಾವೆಲ್ಲ ವಿಚಾರಗಳ ಪಠ್ಯ ಬೇಕು? ಯಾವ ಮಾದರಿಯಲ್ಲಿ ನೈತಿಕ ಶಿಕ್ಷಣ ನೀಡಬೇಕು..? ಎಷ್ಟು ಅವಧಿಗೆ ಯಾವ ತರಗತಿಗೆ ಯಾವ ಮಟ್ಟದಲ್ಲಿ ನೈತಿಕ ಶಿಕ್ಷಣ ನೀಡಬೇಕು ಅಂತಾ ಚರ್ಚೆ ನಡೆಸಲು ಹಾಗೂ ತಜ್ಞರ ಅಭಿಪ್ರಾಯ ಪಡೆಯಲಿದ್ದಾರಂತೆ.

ಆದರೆ ಈಗಾಗಲೇ ಶಿಕ್ಷಣ ಇಲಾಖೆಯನ್ನು ಕೇಸರಿಕರಣ ಮಾಡುತ್ತಿದೆ ಎಂಬ ಆರೋಪ ಎದುರಿಸುತ್ತಿದೆ ಬಿಜೆಪಿ ಸರ್ಕಾರ.‌ ಇದರ ಬೆನ್ನಲ್ಲೆ ನೈತಿಕ ಶಿಕ್ಷಣದ ಪಠ್ಯ ವಿಚಾರವಾಗಿ ನಡೆಯುತ್ತಿರೋ ಸರ್ವ ಧರ್ಮ ಗುರುಗಳ ಸಭೆಗೆ ಹಿಂದು ಧರ್ಮ ಹೊರತುಪಡಿಸಿ‌ ಇನ್ಯಾವುದೇ ಧರ್ಮಗುರುಗಳಿಗೆ ಅಥವಾ ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡದೇ ಇರೋದು ಈಗ ವಿವಾದಕ್ಕೆ ಕಾರಣವಾಗಿದೆ. ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು ಶಿಕ್ಷಣ ಇಲಾಖೆಯ ಈ ಮಹತ್ವದ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ : Age limit for 1st class enrollment: ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್ : 1ನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿ

ಇದನ್ನೂ ಓದಿ : Midday meals Chicken : ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಚಿಕನ್, ಮೊಟ್ಟೆ, ಹಣ್ಣು

Bhagavad Gita teaching in school Important meeting in presence of Minister BC Nagesh

Comments are closed.