ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಟ್ವಿಸ್ಟ್….! ದೆಹಲಿಗೆ ದೌಡಾಯಿಸಿದ ಸಿಎಂ ಪುತ್ರ ವಿಜಯೇಂದ್ರ….!!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೊಳಗಾಗುತ್ತಿರುವ ಬೆನ್ನಲ್ಲೇ ಸಿಎಂ ಪುತ್ರ ವಿಜಯೇಂದ್ರ್ ದೆಹಲಿಗೆ ಪ್ರಯಾಣಿಸಿದ್ದು, ಹಲವು ಚರ್ಚೆ ಹುಟ್ಟುಹಾಕಿದೆ.

ಬೆಳಗಿನ ಜಾವ 5.30 ರ ಫ್ಲೈಟ್ ನಲ್ಲಿ ಸಿಎಂ  ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ್ ತಮ್ಮ ಆಪ್ತರೊಂದಿಗೆ  ದೆಹಲಿಗೆ ತೆರಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲಿದೆ, ಬಿಜೆಪಿಯ 7 ಪ್ರಭಾವಿ ಶಾಸಕರು ಸಿಎಂ ರೇಸ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ವಿಜಯೇಂದ್ರ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ವಿಜಯೇಂದ್ರ ಸಂಜೆ ಹೈಕಮಾಂಡ್ ಭೇಟಿ ಮಾಡಲಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗಳು ಮುನ್ನಲೆಗೆ ಬಂದಿರುವ ವಿಚಾರ ಸೇರಿದಂತೆ ಹಲವು ಸಂಗತಿಯನ್ನು ಸಿಎಂ ಬಿಎಸ್ವೈ ಪರವಾಗಿ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ ಎನ್ನಲಾಗುತ್ತಿದೆ. ‘

https://kannada.newsnext.live/honnali-mla-renukacharya-driving-ambulence-shifting-deadbody/

ಮಾಜಿಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ನಾಯಕತ್ವ ಬದಲಾವಣೆ ನಡೆಯಲಿದೆ ಎಂದ ಗಾಸಿಪ್ ಗಳು ಕೇಳಿಬಂದಿದ್ದು, ಅದರ ಬೆನ್ನಲ್ಲೇ ಸಿ.ಪಿ.ಯೋಗೇಶ್ವರ್ ಕೂಡ ದೆಹಲಿಗೆ ತೆರಳಿದ್ದರು.ಯೋಗೇಶ್ವರ್ ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ವಿಜಯೇಂದ್ರ ಭೇಟಿ ಬಿಜೆಪಿಯಲ್ಲಿ ಏನೋ ಕಸರತ್ತು ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ.

https://kannada.newsnext.live/world-milk-day-nandini-extra-milk-offers-kmf/

ಈಗಾಗಲೇ ಬಿಜೆಪಿಯಲ್ಲಿ ಸಿಎಂ ಬಿಎಸ್ವೈ ಪರ ಬಣ ಹಾಗೂ ವಿರೋಧಿ ಬಣ  ಹುಟ್ಟಿಕೊಂಡಿದ್ದು, ಸಿಎಂ ಪರ ಮತ್ತು ವಿರುದ್ಧ ಬ್ಯಾಟಿಂಗ್ ನಡೆದಿದೆ. ಈ ಮಧ್ಯೆ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವನ್ನು ಕಾಂಗ್ರೆಸ್ ಕೂಡ ಟೀಕಿಸಿದ್ದು ಕೊರೋನಾ ಇಲ್ಲದಿದ್ದರೇ ಬಿಜೆಪಿ ಶಾಸಕರು ಈಗಾಗಲೇ ರೆಸಾರ್ಟ್ ಗೆ ಹಾರಿರುತ್ತಿದ್ದರು ಎಂದು ಟೀಕಿಸಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೋನಾ ಲಾಕ್ಡೌನ್, ವೈದ್ಯಕೀಯ ಸೌಲಭ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಬಿಜೆಪಿಯಲ್ಲಿನ ರಾಜಕೀಯ ಮೇಲಾಟ ಮಾತ್ರ ದಿನಕ್ಕೊಂದು ತಿರುವು ಪಡೆಯುತ್ತಿದೆ.

Comments are closed.