ವಿಶ್ವ ಹಾಲು ದಿನಾಚರಣೆ : ಗ್ರಾಹಕರಿಗೆ ಹೆಚ್ಚುವರಿ ಹಾಲು ಕೊಡುತ್ತೆ ನಂದಿನಿ

ಬೆಂಗಳೂರು : ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಅದೇ ಬೆಲೆಯಲ್ಲಿ ಗ್ರಾಹಕರದಿಗೆ ಒಂದು ತಿಂಗಳು ಹೆಚ್ಚುವರಿಯಾಗಿ ನಂದಿನಿ ಹಾಲು ಲಭಿಸುತ್ತದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿ ಮಾಡಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದೆ. ಇದರಿಂದ ಕೆಎಂಎಫ್ ವ್ಯಾಪ್ತಿಯ 14 ಹಾಲು ಒಕ್ಕೂಟ ಮತ್ತು 5 ಘಟಕಗಳಿಂದ ನಂದಿನಿ ಹಾಲಿನ ಪ್ರತಿ ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕ್ ಗಳಲ್ಲಿ ಹೆಚ್ಚುವರಿ ಹಾಲು ಪೂರೈಕೆ ಮಾಡಲಾಗುತ್ತದೆ.

ವಿಶ್ವ ಹಾಲು ದಿನಾಚರಣೆಯ ಹಿನ್ನೆಲೆಯಲ್ಲಿ ಒಂದು ಲೀಟರ್ ಗೆ 40 ಮಿ.ಲೀ. ಹಾಗೂ ಅರ್ಧ ಲೀಟರಿಗೆ ಹಾಲಿಗೆ  20 ಎಂ.ಲೀ. ಹೆಚ್ಚುವರಿ ಯಾಗಿ ನೀಡಲಾಗುತ್ತದೆ. ಎಲ್ಲ ಶ್ರೇಣಿಯ ನಂದಿನಿ ಹಾಲಿನ ಗ್ರಾಹಕರಿಗೆ ಹೆಚ್ಚುವರಿ ಹಾಲು ಒಂದು ತಿಂಗಳ ಕಾಲ ಪೂರೈಕೆಯಾಗಲಿದೆ. ಆದರೆ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಎಂಎಫ್ ತಿಳಿಸಿದೆ.

Comments are closed.