ಸೋಮವಾರ, ಏಪ್ರಿಲ್ 28, 2025
HomeBreakingದಿಢೀರ್ ದೆಹಲಿಗೆ ಸಿಎಂ ಬಿಎಸ್ವೈ…! ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಯಾಗುತ್ತಾ ಸಂಕ್ರಾಂತಿ…!?

ದಿಢೀರ್ ದೆಹಲಿಗೆ ಸಿಎಂ ಬಿಎಸ್ವೈ…! ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಯಾಗುತ್ತಾ ಸಂಕ್ರಾಂತಿ…!?

- Advertisement -

ಬೆಂಗಳೂರು: ಸಂಕ್ರಾಂತಿಗೆ ಸಿಹಿಸುದ್ದಿ ಕೇಳೋ ಖುಷಿಯಲ್ಲಿದ್ದ ಸಚಿವ ಸ್ಥಾನಾಕಾಂಕ್ಷಿಗಳಿಗೆ ನಾಳೆಯೇ ಸಿಹಿಸುದ್ದಿ ಸಿಗೋ ಲಕ್ಷಣವಿದ್ದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ನಾಳೆ ದೆಹಲಿಗೆ ದೌಡಾಯಿಸಲಿದ್ದಾರೆ.

ನಾಳೆ ಬೆಳಗ್ಗೆ ಸಿಎಂ ಬಿಎಸ್ವೈ 8.20 ರ ಪ್ಲೈಟ್ ನಲ್ಲಿ ದೆಹಲಿಗೆ ತೆರಳಲಿದ್ದು 11 ಗಂಟೆ ವೇಳೆಗೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾ ರನ್ನು ಭೇಟಿ ಮಾಡಲಿದ್ದಾರೆ.

ರಾಜ್ಯದ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಂಕ್ರಾಂತಿ ವೇಳೆಗೆ ಸಿಹಿಸುದ್ದಿ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಸಧ್ಯ ವಿಸ್ತರಣೆ ಅನುಮಾನ ಎನ್ನುವ ಮಾತು ಕೇಳಿಬಂದಿದೆ.

ಈ‌ ಮಧ್ಯೆ ನಾಳೆ ಸಿಎಂ ಬಿಎಸ್ವೈ ದೆಹಲಿಗೆ ಬುಲಾವ್ ಬಂದಿರೋದರಿಂದ ಮತ್ತೆ ಸಚಿವ ಸ್ಥಾನದ ಮೇಲೆ‌ ಕಣ್ಣಿಟ್ಟ ಶಾಸಕರಿಗೆ ಖುಷಿಯಾಗಿದ್ದು ಮತ್ತೆ ಸಿಹಿಸುದ್ದಿ ಸಿಗಬಹುದು ಎಂಬ ನೀರಿಕ್ಷೆ ಮೂಡಿದೆ. ಒಟ್ಟು 12 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದ್ದು, ಈ ಪೈಕಿ 3 ಹಾಲಿ ಸಚಿವರಿಗೆ ಕೋಕ್ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು.

ಈಗ ಬಿಎಸ್ವೈ ಗೆ ಬಂದಿರೋ ಬುಲಾವ್ ವಿಸ್ತರಣೆ ಕುರಿತು ಚರ್ಚೆಗೆ ಎಂಬುದು ಖಚಿತವಾಗಿಲ್ಲ. ಆದರೆ ಕೆಲದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆ ಕುರಿತ ಚರ್ಚೆ ಹಾಗೂ ನಾಯಕತ್ವ ಬದಲಾಣೆಯ ಚರ್ಚೆಯ ಹಿನ್ನೆಲೆಯಲ್ಲಿ ಒಂದು ಸ್ಪಷ್ಟ ಸಂದೇಶ ರವಾನಿಸುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ಬಿಎಸ್ವೈರನ್ನು ದೆಹಲಿಗೆ ಆಹ್ವಾನಿಸಿದೆ ಎನ್ನಲಾಗುತ್ತಿದೆ.

ಸಿಎಂ ದೆಹಲಿ ಭೇಟಿ ಹಿನ್ನೆಲೆಯಲ್ಲಿ ನಾಳೆ ಸಂಜೆ ವೇಳೆಗೆ ಸಂಪುಟ ವಿಸ್ತರಣೆ ಹಾಗೂ ಪುನರಚನೆಯ ಕುರಿತು ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದ್ದು, ಆ ಬಳಿಕ ಕರ್ನಾಟಕದ ರಾಜಕೀಯ ಚಿತ್ರಣ ಬದಲಾದರೂ ಅಚ್ಚರಿ ಏನಿಲ್ಲ.

RELATED ARTICLES

Most Popular