ಮತ್ತೆ ರೂಪಾಂತರಿ ಕೊರೊನಾ ವೈರಸ್ ಭೀತಿ : ರಾಜ್ಯಕ್ಕೆ ಬಂದಿಳಿದ 243 ಬ್ರಿಟನ್ ಪ್ರಯಾಣಿಕರು

ಬೆಂಗಳೂರು : ರಾಜ್ಯಕ್ಕೆ ಮತ್ತೆ ರೂಪಾಂತರಿ ಕೊರೊನಾ ವೈರಸ್ ಭೀತಿ ಎದುರಾಗಿದೆ. ಇಂಗ್ಲೆಂಡ್ ನಿಂದ ಬರೋಬ್ಬರಿ 243 ಮಂದಿ ಪ್ರಯಾಣಿಕರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಕೊರೊನಾ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಈಗಾಗಲೇ 10ಕ್ಕೂ ಅಧಿಕ ಮಂದಿಗೆ ಹೊಸ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ರಾಜ್ಯ ಸರಕಾರ ರೂಪಾಂತರಿ ಕೊರೊನಾ ವೈರಸ್ ಸೋಂಕನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ವಿಫಲವಾಗಿದೆ. ಈ ನಡುವಲ್ಲೇ ಇಂಗ್ಲೆಂಡ್ ನಿಂದ ರಾಜ್ಯಕ್ಕೆ ಬರೋಬ್ಬರಿ 243 ಮಂದಿ ಆಗಮಿಸಿದ್ದಾರೆ. ಇಂದು ಬೆಳಗ್ಗೆ 4 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಇಗ್ಲೆಂಡ್‌ನಿಂದ ಪ್ರಯಾಣಿಕರನ್ನು ಟರ್ಮಿನಲ್ ಒಳ ಭಾಗದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ಸಂಜೆ 4 ಗಂಟೆಗೆ ಪರರೀಕ್ಷಾ ವರದಿ ಬರಲಿದೆ. ಈ ಹಿನ್ನೆಲೆಯಲ್ಲಿ ಸಂಜೆ 4 ಗಂಟೆವರೆಗೂ ಎಲ್ಲಾ ಪ್ರಯಾಣಿಕರು ಟರ್ಮಿನಲ್ ಒಳಗೆ ಇರಬೇಕಿದೆ. ಇನ್ನು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಪ್ರಯಾಣಿಕರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಷಪ್ಟಪಡಿಸಿದ್ದಾರೆ.

ಪರೀಕ್ಷೆಯ ವರದಿಯಲ್ಲಿ ನೆಗೆಟಟಿವ್ ಬಂದ ಪ್ರಯಾಣಿಕರಿಗೆ ಮನೆಗೆ ತೆರಳಲು ಅವಕಾಶವನ್ನು ಕಲ್ಪಿಸಲಾಗುತ್ತಿದ್ದು, ಅಂತಹ ಪ್ರಯಾಣಿಕರು ಮನೆಯಲ್ಲಿಯೇ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗ ಬೇಕಾಗಿದೆ.

Comments are closed.