ರಾಜ್ಯದಲ್ಲಿ ರದ್ದಾಗುತ್ತಾ ಸಿಇಟಿ…?! ಸಚಿವ ಅಶ್ವತ್ಥನಾರಾಯಣ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್…!!

ಬೆಂಗಳೂರು: ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಎರಡನೇ ಅಲೆಯ ಎಫೆಕ್ಟ್ ನಿಂದ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ದೊರಕಿಸುವ ಸಿಇಟಿ ಪರೀಕ್ಷೆ ಕತೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಇದಕ್ಕೆ ವಿವರವಾದ ಉತ್ತರ ನೀಡಿದ್ದಾರೆ ಸಚಿವ ಅಶ್ವತ್ಥ ನಾರಾಯಣ್.

ವಿದ್ಯಾರ್ಥಿಗಳಿಗೆ ಮೆಡಿಕಲ್ ಮತ್ತು ಇಂಜೀನಿಯರಿಂಗ್ ಸೀಟು ಪಡೆಯಲು ಪ್ರವೇಶ ಪರೀಕ್ಷೆಯ ಅಂಕ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದು ಸಚಿವ  ಅಶ್ವತ್ಥ ನಾರಾಯಣ ಹೇಳಿದ್ದಾರೆ. ಆದರೆ ಪರೀಕ್ಷೆ ಯಾವಾಗ ಎಂಬುದನ್ನು ಸಭೆ ನಡೆಸಿದ ಬಳಿಕ ಪ್ರಕಟಿಸಲಾಗುವುದು ಎಂದಿದ್ದಾರೆ.

ಪರೀಕ್ಷೆ ಇಲ್ಲದೇ ಪಾಸ್ ಮಾಡೋದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಸಿಇಟಿ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿದ್ದೇವೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪರೀಕ್ಷೆಯ ಬಗ್ಗೆ ಹೆಚ್ಚಿನ ವಿವರ ಸಿಗಲಿದೆ ಎಂದರು.

https://kannada.newsnext.live/delhi-unlock-cm-kejriwal/

ಇದುವರೆಗೂ ದ್ವಿತೀಯ ಪಿಯುಸಿ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕದ ಆಧಾರದ ಮೇಲೆ ಇಂಜೀನಿಯರಿಂಗ್ ಹಾಗೂ ಮೆಡಿಕಲ್ ಪ್ರವೇಶಾವಕಾಶ ಸಿಗುತ್ತಿತ್ತು, ಆದರೆ ಈ ಭಾರಿ ಕೇವಲ ಸಿಇಟಿ ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.

https://kannada.newsnext.live/sandalwood-star-darshan-request-addopt-animals-from-zoo/

ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೈಬಿಟ್ಟಿರುವುದರಿಂದ ವೃತ್ತಿಪರ ಕೋರ್ಸ್ ಗಳ ಪ್ರವೇಶದ ವೇಳೆ ದ್ವಿತೀಯ ಪಿಯುಸಿ ಮಾರ್ಕ್ಸ್ ಪರಿಗಣನೆ ಕೈಬಿಟ್ಟು ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ಅದರ  ಆಧಾರದ ಮೇಲೆ ಸೀಟು ಹಂಚಿಕೆ ಮಾಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರಂತೆ.

https://kannada.newsnext.live/india-diseirableman-timesgroup-yash-vijayadevrukonda-ranadaggubati/

ಒಟ್ಟಿನಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದರಿಂದ ಸಿಇಟಿ ಪರೀಕ್ಷೆಯೂ ರದ್ದಾಲಿದೆ ಎಂಬ ಉಹಾಪೋಹ ಸೃಷ್ಟಿಯಾಗಿದ್ದಕ್ಕೆ ಶಿಕ್ಷಣ ಸಚಿವರೇ ಸ್ವತಃ ಸ್ಪಷ್ಟನೆ ನೀಡಿ ಪರೀಕ್ಷೆ ಖಂಡಿತಾ ನಡೆಯುತ್ತೇ ಎಂದಿದ್ದಾರೆ.

Comments are closed.