ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣದಲ್ಲಿ ತೀವ್ರ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ ಗುರುವಾರದ ಸಂಜೆ ವೇಳೆಗೆ 30 ಸಾವಿರ ಕೊರೋನಾ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ನಗರದಲ್ಲಿ ಹಾಗೂ ರಾಜ್ಯದಲ್ಲಿ ಜಾರಿಯಾಗಿರುವ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಗೆ ಸ್ವಪಕ್ಷಿಯ ಶಾಸಕರು, ಸಚಿವರಿಂದಲೇ ವಿರೋಧ ಎದುರಾಗಿರೋದು ಸಿಎಂ ಬೊಮ್ಮಾಯಿ ( trouble CM Basavaraj Bommai ) ನಿದ್ದೆಗೆಡಿಸಿದೆ. ಹೀಗಾಗಿ ಶುಕ್ರವಾರದ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.
ಕೊರೋನಾ ಒಂದನೇ ಹಾಗೂ ಎರಡನೇ ಅಲೆಯಿಂದ ಅಕ್ಷರಷಃ ಭುವಿಗಿಳಿದು ಹೋಗಿದ್ದ ಉದ್ಯಮಗಳು, ವ್ಯಾಪಾರಸ್ಥರು,ಮದುವೆಮುಂಜಿ ಸಮಾರಂಭಗಳು, ಹಬ್ಬಹರಿದಿನ, ಜಾತ್ರೆ ಉತ್ಸವಗಳು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳಲಾರಂಭಿಸಿದ್ದವು. ಆಗಲೇ ಮೂರನೇ ಅಲೆಯ ಗುಮ್ಮ ನಮ್ಮೆದುರು ನಿಂತಿದೆ. ಹೀಗಾಗಿ ರಾಜ್ಯ ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತೆ ಕಠಿಣ ನಿಯಮಗಳನ್ನು ರೂಪಿಸಿದೆ. ಆದರೆ ಈಗ ಉದ್ದಿಮೆಗಳು, ಬಾರ್, ರೆಸ್ಟೋರೆಂಟ್, ಹೊಟೇಲ್, ಸಿನೆಮಾ ಥಿಯೇಟರ್ ಸೇರಿದಂತೆ ಎಲ್ಲ ಜೀವನಾವಶ್ಯಕ ವ್ಯವಸ್ಥೆಗಳ ಮೇಲೆ ಹೇರಿರುವ ನಿರ್ಬಂಧವೇ ಸರ್ಕಾರಕ್ಕೆಕಂಟಕವಾಗುವ ಸ್ಥಿತಿ ಇದೆ.
ಸರ್ಕಾರದ ನಿಯಮದಿಂದಾಗಿ ಮದ್ಯ ಮಾರಾಟಗಾರರು,ಹೊಟೇಲ್ ಉದ್ಯಮಿಗಳು, ವ್ಯಾಪಾರಸ್ಥರು ವ್ಯವಹಾರವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಾತ್ರವಲ್ಲ ನಷ್ಟದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ವರ್ಕ್ ಫ್ರಂ ಹೋಂನಿಂದಾಗಿ ಜನರು ಮನೆ ಬಿಟ್ಟು ಕದಲುತ್ತಿಲ್ಲ. ಅದರಲ್ಲೂ ವೀಕೆಂಡ್ ಗಾಗಿ ಆಚೆ ಬರುತ್ತಿರುವ ಜನರ ಮೇಲೂ ಸರ್ಕಾರ ನಿರ್ಭಂದದ ಬರೆ ಹಾಕಿದೆ. ಇದರಿಂದ ಜನರು ಹಾಗೂ ಉದ್ದಿಮೆಗಳು ಸಹಜವಾಗಿಯೇ ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ. ಇದನ್ನು ಮನಗಂಡ ಶಾಸಕರು ಹಾಗೂ ಸಚಿವರು ಕೊರೋನಾ ನಿಯಮಗಳು ಹಾಗೂ ಸರ್ಕಾರದ ಬಿಗಿ ನಿಯಮಗಳೇ ಸರ್ಕಾರಕ್ಕೆ ಮುಳುವಾಗಲಿದೆ ಎಂಬುದನ್ನು ಸಿಎಂಗೆ ಮನವರಿಕೆ ಮಾಡಿಸಲಾರಂಭಿಸಿದ್ದಾರೆ.
ನಿಧಾನವಾಗಿ ಉದ್ದಿಮೆಗಳು,ವ್ಯಾಪಾರಸ್ಥರು,ಹೊಟೇಲ್,ಥಿಯೇಟರ್ ಮಾಲೀಕರು ಹೀಗೆ ಎಲ್ಲರೂ ಬಿಜೆಪಿ ವಿರೋಧಿಯಾಗುತ್ತಿದ್ದಾರೆ. ಇದರಿಂದ ಮುಂಬರುವ ಜಿ.ಪಂ ಸೇರಿದಂತೆ ವಿಧಾನಸಭೆ ಚುನಾವಣೆಗೂ ಸಮಸ್ಯೆಯಾಗಲಿದೆ. ಜನರು ಹಾಗೂ ವ್ಯಾಪಾರಸ್ಥರು ಕರೋನಾ ನಿಯಮಗಳನ್ನು ಬಿಜೆಪಿಯ ಜನವಿರೋಧಿ ನೀತಿ ಎಂದು ಭಾವಿಸುತ್ತಿದ್ದಾರೆ.ಇದರಿಂದ ಮುಂಬರುವ ಎಲೆಕ್ಷನ್ ಗೆ ತೊಂದರೆ ಉಂಟಾಗಲಿದೆ. ಹೀಗಾಗಿ ಕೆಲವಾದರೂ ಕಠಿಣ ನಿಯಮಗಳನ್ನು ಸಡಿಲಿಸುವುದು ಉತ್ತಮ ಎಂದು ಹಲವು ಶಾಸಕರು ಹಾಗೂ ಸಚಿವರು ಸಿಎಂಗೆ ಮನವಿ ಮಾಡಿದ್ದಾರಂತೆ . ಹೀಗಾಗಿ ಶುಕ್ರವಾರದ ಮೀಟಿಂಗ್ ಜನರ ಹಿತ ಕ್ಕಿಂತ ರಾಜಕೀಯದ ಲೆಕ್ಕಾಚಾರಗಳನ್ನು ಆದರಿಸಿ ನಡೆಸುವ ಮುನ್ಸೂಚನೆ ಸಿಕ್ಕಿದ್ದು ಸಿಎಂ ಕೊವೀಡ್ ತಾಂತ್ರಿಕ ಸಮಿತಿ ಹಾಗೂ ಸಚಿವ ಸಂಪುಟ ಇಬ್ಬರಲ್ಲಿ ಯಾರ ಮಾತಿಗೆ ಬೆಲೆ ಕೊಡ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ
ಇದನ್ನೂ ಓದಿ : ಶಾಲೆ ಕಾಲೇಜು 15-20 ದಿನ ಬಂದ್ ಮಾಡಿ : ನೈಟ್ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ
( Corona stringent law enforcement, Cabinmate expansion, trouble CM Basavaraj Bommai)