weekend curfew relax: ವೀಕೆಂಡ್ ಕರ್ಪ್ಯೂ ಸಡಿಲಿಸಿ, ನಮ್ಮನ್ನು ಬದುಕಿಸಿ : ಸರ್ಕಾರಕ್ಕೆ ಉದ್ದಿಮೆ, ರುಪ್ಸಾ ಹಾಗೂ ಮದ್ಯ ಮಾರಾಟಗಾರರ ಬೇಡಿಕೆ

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇದೆ.‌ ಇನ್ನೊಂದೆಡೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಜಾರಿಯಾಗಿರೋ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ತೆರವಿಗೂ (weekend curfew relax) ಒತ್ತಡ ಹೆಚ್ಚುತ್ತಲೇ ಇದೆ. ಮದ್ಯ ಮಾರಾಟಗಾರರು, ಖಾಸಗಿ ಶಿಕ್ಷಣ ಸಂಸ್ಥೆಯ ಒಕ್ಕೂಟದವರು, ಸ್ವಿಮ್ಮಿಂಗ್ ಫೂಲ್ ಮಾಲೀಕರು, ಜಿಮ್‌ ಮಾಲೀಕರು ಸೇರಿದಂತೆ ಎಲ್ಲರೂ ನಾಳೆ ನಿಯಮ ಸಡಿಲಿಕೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದು, ಸರ್ಕಾರ ಕೈಗೊಳ್ಳುವ ತೀರ್ಮಾನ ಕುತೂಹಲ ಕ್ಕೆ ಕಾರಣವಾಗಿದೆ.

ರಾಜ್ಯ ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಸಾವಿರ ಪ್ರಮಾಣ ಶೇ 0.03 ರಷ್ಟಿದೆ. 10ನೇ ತರಗತಿಗೆ ಪರೀಕ್ಷೆಗಳಿಗೆ ಇನ್ನು 2 ತಿಂಗಳು ಬಾಕಿ ಇದೆ.ಈ ಮಕ್ಕಳಿಗೆ ಈವರೆಗೆ ಕೇವಲ 4 ತಿಂಗಳಷ್ಟೇ ಪಾಠ ನಡೆದಿದೆ ಎಂಬ ಕಾರಣಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಪತ್ರ ಬರೆದಿರುವ ರುಪ್ಸಾ ಆಫ್ ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವಂತೆ ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದೆ.

ಬಡ ಕೂಲಿ ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ. ಈ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗುವುದು ದೊಡ್ಡ ಸಮಸ್ಯೆ ನಾಳೆ ನಡೆಯುವ ಸಭೆಯಲ್ಲಿ ಭೌತಿಕ ತರಗತಿಗೆ ಅನುಮತಿ ನೀಡಿ.ಇಲ್ಲವಾದ್ರೆ ಮುಂದಿನ ಶೈಕ್ಷಣಿಕ ವರ್ಷಕ್ಕೂ ಸಮಸ್ಯೆಯಾಗುತ್ತೆ ಎಂದು ರುಪ್ಸಾ ಸಂಘಟನೆ ವಿವರವಾಗಿ ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದು, ನಮ್ಮ ಬೇಡಿಕೆಯನ್ನು ಸಿಎಂ ಗಮನಿಸಿ ಸೂಕ್ತ ನಿರ್ಣಯಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ.

ಇದರೊಂದಿಗೆ ನಾಳೆ ವೀಕೆಂಡ್ ಕರ್ಪ್ಯೂ ಭವಿಷ್ಯ ನಿರ್ಧಾರ ಹಿನ್ನೆಲೆ ಸರ್ಕಾರಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಮನವಿ ಮಾಡಿದ್ದು, ವೀಕೆಂಡ್ ಕರ್ಪ್ಯೂ ಕಾರಣ ಚಿತ್ರರಂಗಕ್ಕೆ ತುಂಬಾ ತೊಂದರೆ ಆಗ್ತಿದೆ.ಶನಿವಾರ.ಭಾನುವಾರು ಥಿಯೇಟರ್ ಗಳಲ್ಲಿ ಉತ್ತಮ ಕಲೆಕ್ಷನ್ ಆಗುತ್ತೆ . ಈಗ ಕರ್ಪ್ಯೂ ಕಾರಣ ನಿರ್ಮಾಪಕರಿಗೆ ತುಂಭಾ ನಷ್ಟ ಆಗ್ತಿದೆ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಪರಿಗಣಿಸ್ತಾರೆ ಅನ್ನೋ ಭರವಸೆ ಇದೆ ಎಂದು ಮಾಧ್ಯಮಗಳ ಎದುರು ಜೈರಾಜ್ ಕಷ್ಟ ಹಂಚಿಕೊಂಡಿದ್ದಾರೆ.

ಅಲ್ಲದೆ ಪ್ರದರ್ಶಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.ನಾವು ಕೂಡ ಕಳೆದ ವಾರ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವು ನಾಳೆ ಸಚಿವ ಸಂಪುಟ ಸಭೆಯಲ್ಲಿ ವೀಕೆಂಡ್ ಕರ್ಪ್ಯೂಬಗ್ಗೆ ಚರ್ಚೆ ಆಗಲಿದೆ. ವೀಕೆಂಡ್ ನಲ್ಲಿ ಚಿತ್ರಮಂದಿರಗಳ ಒಪನ್ ಗೆ ಸರ್ಕಾರ ಅನುಮತಿ ನೀಡುತ್ತೆ ಅನ್ನೋ ಭರವಸೆ ಇದೆ ಎಂದು ಜೈರಾಜ್ ಹೇಳಿಕೆ ನೀಡಿದ್ದಾರೆ. ಇನ್ನು ಕೇವಲ ಶಿಕ್ಷಣ ಸಂಸ್ಥೆ ಮಾತ್ರವಲ್ಲದೇ ಹೊಟೇಲ್ ಮಾಲೀಕರು, ಮದ್ಯ ಮಾರಾಟಗಾರರು, ಸ್ವಿಮ್ಮಿಂಗ್ ಪೂಲ್ ಮಾಲೀಕರು, ಜಿಮ್ ಮಾಲೀಕರು ಸೇರಿದಂತೆ ಹಲವರು ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿರೋಧಗಳಿಗೆ ರಾಜ್ಯ ಸರ್ಕಾರ ಯಾವ ರೀತಿ ಸ್ಪಂದಿಸುತ್ತೇ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : Karnataka covid-19 : ಕರ್ನಾಟಕದಲ್ಲಿಂದು 47 ಸಾವಿರ ಕೋವಿಡ್‌-19 ಪ್ರಕರಣ : 2.93 ಲಕ್ಷ ಸಕ್ರೀಯ ಪ್ರಕರಣ ದಾಖಲು

ಇದನ್ನೂ ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

( Rupsa and liquor vendors demand Karnataka government for weekend curfew relax)

Comments are closed.