Vaastu tips : ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ನಿಮಗೆ ಸಿಗಲಿದೆ ಶುಭ ಲಾಭ

Vaastu tips : ವಾಸ್ತು ಎನ್ನುವುದು ಕೇವಲ ಮನೆ ಹಾಗೂ ಕಚೇರಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಆಚಾರ ವಿಚಾರಗಳಲ್ಲಿಯೂ ವಾಸ್ತು ನಿಯಮವಿರುತ್ತದೆ. ಈ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು .ಅಷ್ಟೇ ಅಲ್ಲದೇ ಆರ್ಥಿಕ ಸಂಕಷ್ಟಕ್ಕೂ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯ ಅನಾರೋಗ್ಯಕ್ಕೆ ವಾಸ್ತು ದೋಷ ಕಾರಣವಾಗುತ್ತದೆ. ನೀವು ಮಲಗುವ ದಿಕ್ಕು ಕೂಡ ವಾಸ್ತುಗೆ ಸಂಬಂಧಿಸಿದ್ದಾಗಿದೆ. ಸರಿಯಾದ ದಿಕ್ಕಿನಲ್ಲಿ ನಿದ್ರೆ ಮಾಡಿದರೆ ವ್ಯಕ್ತಿಯು ಆರ್ಥಿಕವಾಗಿ ಸಮೃದ್ಧನಾಗುತ್ತಾನೆ ಎಂದು ನಂಬಲಾಗಿದೆ.

ದಕ್ಷಿಣ ದಿಕ್ಕಿನಲ್ಲಿ ಮಲಗಿದರೆ ಆಗುವ ಲಾಭಗಳು :
ವಾಸ್ತುಶಾಸ್ತ್ರದ ಪ್ರಕಾರ ಈ ದಿಕ್ಕಿಗೆ ತಲೆ ಇಟ್ಟು ಮಲಗುವುದು ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಮಾನಸಿಕ ಸಮಸ್ಯೆಗಳು ದೂರಾಗಿ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ದಕ್ಷಿಣ ದಿಕ್ಕಿಗೆ ಪಾದಗಳನ್ನು ಇಟ್ಟು ಮಲಗಬಾರದು. ಇದು ಅಶುಭವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.


ಪೂರ್ವ ದಿಕ್ಕು ಕೂಡ ಉತ್ತಮವಾಗಿದೆ
ನಿಮ್ಮ ತಲೆಯನ್ನು ದಕ್ಷಿಣಕ್ಕೆ ಇಟ್ಟು ಮಲಗಲು ಸಾಧ್ಯವಾಗದಿದ್ದರೆ, ಪೂರ್ವಕ್ಕೆ ನಿಮ್ಮ ತಲೆಯನ್ನು ಮಲಗಲು ಪ್ರಯತ್ನಿಸಿ. ದಕ್ಷಿಣದ ನಂತರ ಪೂರ್ವ ದಿಕ್ಕಿನಲ್ಲಿ ಮಲಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಸೂರ್ಯದೇವನ ಆಶೀರ್ವಾದ ಸಿಗುತ್ತದೆ ಮತ್ತು ಇತರ ದೇವತೆಗಳ ಆಶೀರ್ವಾದವೂ ಇರುತ್ತದೆ ಎಂದು ನಂಬಲಾಗಿದೆ.

ದೇವರ ಕೋಣೆ ಇರುವ ಕಡೆ ಪಾದ ಇಡಬೇಡಿ :
ಅನೇಕರು ಮನೆಯ ದೇವರ ಕೋಣೆ ಇರುವ ಕಡೆಗೆ ತಮ್ಮ ಪಾದವನ್ನಿಟ್ಟು ಮಲಗುತ್ತಾರೆ . ಇದು ವಾಸ್ತುಶಾಸ್ತ್ರದ ಪ್ರಕಾರ ದುರಾದೃಷ್ಟ ಎಂದು ಪರಿಗಣಿಸಲಾಗಿದೆ. ಇದರಿಂದ ದೇವರಿಗೆ ಕೋಪ ಬರಬಹುದು. ಹೀಗಾಗಿ ಎಂದಿಗೂ ದೇವರ ಕೋಣೆಯ ಕಡೆಗೆ ಪಾದವನ್ನು ಇಡಬೇಡಿ.

ಆರ್ಥಿಕವಾಗಿ ಸಧೃಡರಾಗಲು ನಿಮ್ಮ ಸಹಿಯಲ್ಲಿ ಮಾಡಿ ಈ ಬದಲಾವಣೆ

ಜೀವನದಲ್ಲಿ ಯಶಸ್ಸು ಸಿಗಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಅದರಲ್ಲೂ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲ ಲಕ್ಷ್ಮೀ ಒಲಿದು ಬರ್ತಾಳೆ (Vaastu tips) ಅಂದರೆ ಅದಕ್ಕಿಂತ ಸಂತೋಷ ಬೇರೊಂದು ಇರೋಕೆ ಸಾಧ್ಯವಿದೆಯೇ..? ಆದರೆ ಇವೆಲ್ಲವೂ ಹೇಳಿದಷ್ಟು ಸುಲಭವಂತೂ ಅಲ್ಲವೇ ಅಲ್ಲ. ನಾವು ಅಂದಕೊಂಡ ಮಾತ್ರ ಹಣದ ಹೊಳೆ ಹರಿಯುವುದೂ ಇಲ್ಲ. ಆದರೆ ವಾಸ್ತುಶಾಸ್ತ್ರದಲ್ಲಿ ಇದಕ್ಕೊಂದು ಉಪಾಯವಿದೆ.


ಹೌದು..! ಕೇವಲ ನಿಮ್ಮದೊಂದು ಹಸ್ತಾಕ್ಷರವು ನಿಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತೆ ಎಂದು ಹೇಳುತ್ತೆ ವಾಸ್ತುಶಾಸ್ತ್ರ. ನಿಮ್ಮ ಎಲ್ಲಾ ಕೆಲಸಗಳು ಒಂದು ಸಹಿಯ ಮೇಲೆ ನಿಂತಿರುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಸಹಿಯು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಹಿ ನಿಮ್ಮ ಭವಿಷ್ಯವನ್ನು ಬಲಗೊಳಿಸುತ್ತದೆ.
ನೀವು ಸಹ ಹಣಕಾಸಿನ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಸಹಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನೀವು ಸುಲಭವಾಗಿ ತೊಡೆದುಹಾಕಬಹುದಾಗಿದೆ.

ವಾಸ್ತು ಪ್ರಕಾರ, ನೀವು ಸಾಕಷ್ಟು ಹಣವನ್ನು ಗಳಿಸಿದರೂ ಒಂದು ರೂಪಾಯಿಯನ್ನೂ ಉಳಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದಾದರೆ ನೀವು ನಿಮ್ಮ ಸಹಿಯ ಕೆಳಗೆ ಒಂದು ನೇರ ಗೆರೆಯನ್ನು ಎಳೆಯಬೇಕು. ಮತ್ತು ಅದರ ಕೆಳಗೆ ಎರಡು ಚುಕ್ಕೆಗಳನ್ನು ಇಡಲು ಆರಂಭಿಸಿ. ನಿಮ್ಮ ಉಳಿತಾಯ ಹೆಚ್ಚಾಗುತ್ತಿದ್ದಂತೆಯೇ ಒಂದೊಂದೆ ಚುಕ್ಕಿಯನ್ನು ಹೆಚ್ಚಿಸುತ್ತಾ ಹೋಗಿ. ನೆನಪಿರಲಿ ಈ ಚುಕ್ಕಿಯಲ್ಲಿ ನಾಲ್ಕಕ್ಕಿಂತ ಹೆಚ್ಚಿರಬಾರದು. ಈ ರೀತಿ ಮಾಡುವುದರಿಂದ ನೀವು ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಆರ್ಥಿಕವಾಗಿ ಸದೃಢರಾಗಲಿದ್ದೀರಿ.

ಇದನ್ನು ಓದಿ : Kitchen Vaastu Tips : ಮನೆಯ ಯಾವ ದಿಕ್ಕಿನಲ್ಲಿ ಅಡುಗೆಕೋಣೆ ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Vaastu tips for bedroom : ಮಲಗುವ ಕೋಣೆಯ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು

know which direction is best to sleep according to vaastu shastra tips

Comments are closed.