ಸೋಮವಾರ, ಏಪ್ರಿಲ್ 28, 2025
HomeBreakingಐದು ತಿಂಗಳಲ್ಲಿ ಮೂರನೇ ಸಲ ಬೆಲೆ ಏರಿಕೆ…! ರಾಜ್ಯದ ಜನತೆಗೆ ಮತ್ತೆ ಕಾದಿದೆ ಕರೆಂಟ್...

ಐದು ತಿಂಗಳಲ್ಲಿ ಮೂರನೇ ಸಲ ಬೆಲೆ ಏರಿಕೆ…! ರಾಜ್ಯದ ಜನತೆಗೆ ಮತ್ತೆ ಕಾದಿದೆ ಕರೆಂಟ್ ಶಾಕ್…!!

- Advertisement -

ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಜನರಿಗೆ ಮತ್ತೊಮ್ಮೆ ಶಾಕ್ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಏಪ್ರಿಲ್ ವೇಳೆಗೆ ರಾಜ್ಯದಲ್ಲಿ ಮತ್ತೊಮ್ಮೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ.

ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ಶಕ್ತಿ ನಿಗಮ ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮೋದನೆಯಾದಲ್ಲಿ ಏಪ್ರಿಲ್ ನಲ್ಲಿ ಕರೆಂಟ್ ಶಾಕ್ ಗ್ಯಾರಂಟಿ ಎಂಬಂತಾಗಿದೆ.

ಕಳೆದ ಐದು ತಿಂಗಳಿನಲ್ಲಿ ಇದು ಮೂರನೇ ಬಾರಿ ವಿದ್ಯುತ್ ಬೆಲೆ ಏರಿಕೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದ್ದು, ಬೆಸ್ಕಾಂನಲ್ಲಿ 1 ಯೂನಿಟ್ ಗೆ 1.39 ರೂಪಾಯಿ, ಮೆಸ್ಕಾ 1.69 ರೂಪಾಯಿ,ಹೆಸ್ಕಾಂ 83 ಪೈಸೆ,ಸೆಸ್ಕ್ 1.56 ರೂಪಾಯಿ ಹಾಗೂ ಜೆಸ್ಕಾಂ 1.31 ರೂಪಾಯಿ ಹೆಚ್ಚಳಕ್ಕೆ ಪ್ರಸ್ತಾವನೆಯಲ್ಲಿ ಮನವಿ ಸಲ್ಲಿಸಲಾಗಿದೆ.

ಕಳೆದ ಆರು ತಿಂಗಳಿನಲ್ಲಿ ಕರ್ನಾಟಕ ವಿದ್ಯಚ್ಛಕ್ತಿ ನಿಗಮ ಒಟ್ಟು 3,556 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ಈ ಹಣದ ಮರುಪಾವತಿಗಾಗಿ ಮತ್ತೊಮ್ಮೆ ಬೆಲೆ ಏರಿಕೆಗೆ ಮುಂದಾಗಿದೆ ಎನ್ನಲಾಗಿದೆ.

ದರ ಏರಿಕೆಯ ವಿರುದ್ಧ ಅಹವಾಲು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಬೇಸಿಗೆಯ ಆರಂಭದಲ್ಲೇ  ವಿದ್ಯುತ್ ಗ್ರಾಹಕರಿಗೆ ಮತ್ತಷ್ಟು ಬಿಸಿ ಮುಟ್ಟಿಸುವ ಸಾಧ್ಯತೆ ದಟ್ಟವಾಗಿದೆ.  

RELATED ARTICLES

Most Popular