ಕೊರೋನಾ ವಾಕ್ಸಿನ್ ಭಾಗ್ಯ…!! ರಾಜ್ಯದ 16 ಲಕ್ಷ ಜನರಿಗೆ ಸಿಗಲಿದೆ ಲಸಿಕೆ…!!

ಬೆಂಗಳೂರು: ಕೊರೋನಾದಿಂದ ಕಂಗೆಟ್ಟ ರಾಜ್ಯದ ಜನತೆಗೆ ಸಿಎಂ ಬಿಎಸ್ವೈ ಸಿಹಿಸುದ್ದಿ ನೀಡಿದ್ದಾರೆ. ರಾಜ್ಯದ ಆಯ್ದ ೧೬ ಲಕ್ಷ ಜನರಿಗೆ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ಸಿಗಲಿದೆ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಡೆಸಿದ ಹಲವು ರಾಜ್ಯಗಳ ಸಿಎಂ ಜೊತೆಗಿನ ಸಭೆ ಬಳಿಕ ಬಿಎಸ್ವೈ ಮಾಧ್ಯಮಗಳಿಗೆ ಮಾಹಿತಿ‌ ನೀಡಿದರು. ದೇಶದಲ್ಲಿ ಒಟ್ಟು 3 ಕೋಟಿ ಜನರಿಗೆ ಹಾಗೂ ರಾಜ್ಯದ 16 ಲಕ್ಷ ಜನರಿಗೆ ಲಸಿಕೆ ಉಚಿತವಾಗಿ ಸಿಗಲಿದೆ.

ದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 3 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ ರಾಜ್ಯದ 16 ಲಕ್ಷ ಜನರಿಗೆ ಲಸಿಕೆ‌ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಲಸಿಕೆ ಫಲಾನುಭವಿಗಳ ಆಯ್ಕೆ ಈಗಾಗಲೇ ನಡೆದಿದೆ. ರಾಜ್ಯ ಲಸಿಕೆ ವಿತರಣೆಗೆ ಸಜ್ಜಾಗಿದೆ ಎಂದಿದ್ದಾರೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಅವರು ವಿವರಣೆ ನೀಡಿದ್ದಾರೆ .

ರಾಜ್ಯದಾದ್ಯಂತ ಲಸಿಕೆ ವಿತರಣೆಗೆ ಸಂಪೂರ್ಣ ಸಿದ್ಧತೆ ನಡೆದಿದ್ದು, 253  ಕ್ಷೇತ್ರದಲ್ಲಿ ವಾಕ್ಸಿನೇಶನ್ ವಿತರಣಾ ಕೇಂದ್ರ ಸಿದ್ಧಗೊಳಿಸಲಾಗಿದೆ. ಆರೋಗ್ಯ ಇಲಾಖೆ ಕೇಂದ್ರದ ಸೂಚನೆಯಂತೆ ಎಲ್ಲವನ್ನು ನೋಡಿಕೊಳ್ಳಲಿದೆ ಎಂದಿದ್ದಾರೆ.

Comments are closed.