ನಂ 1 ಪಟ್ಟಕ್ಕೇರಿದ ನೂತನ ಸಂಸದೆ….! ರಾಜ್ಯದ ಹಿರಿಯ ಎಂಪಿಗಳನ್ನು ಹಿಂದಿಕ್ಕಿದ ಸುಮಲತಾ ಅಂಬರೀಶ್…!!

ಬೆಂಗಳೂರು: ರಾಜಕಾರಣವನ್ನು‌ ನೋಡುತ್ತ ಬೆಳೆದ ನಟಿ‌ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರೂ‌ ರಾಜ್ಯದ ಹಿರಿಯ ಸಂಸದರನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ್ದಾರೆ.

ಕೇಂದ್ರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ, ಜಿಲ್ಲಾ‌ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆ (ದಿಶಾ)ಯನ್ನು ಅತಿ ಹೆಚ್ಚು ಭಾರಿ ನಡೆಸಿದ ಕೀರ್ತಿಗೆ ಭಾಜನವಾಗಿರುವ ಸುಮಲತಾ ಅಂಬರೀಶ್, ನಂ.1 ಪಟ್ಟ ಪಡೆದುಕೊಂಡಿದ್ದಾರೆ.

ಕೊರೋನಾ ಭೀತಿಯ‌ ನಡುವೆಯೂ ಸುಮಲತಾ ‌ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ರಾಜ್ಯದಲ್ಲಿ ಅತಿ‌ಹೆಚ್ಚು ದಿಶಾ ಸಭೆ ನಡೆಸಿದ ಖ್ಯಾತಿಯೊಂದಿಗೆ ಸುಮಲತಾ ಹೆಸರು ಕೇಂದ್ರದ ಸಂಸದರ ಸಾಧನೆಯ ವೆಬ್ ಸೈಟ್ ನಲ್ಲೂ ದಾಖಲಾಗಿದೆ.

ಪ್ರತಿ ಮೂರು ತಿಂಗಳಿಗೆ ಒಂದರಂತೆ ವಾರ್ಷಿಕವಾಗಿ ನಾಲ್ಕು ದಿಶಾ ಸಭೆಗಳನ್ನು ಸಂಸದರು ನಡೆಸಬೇಕು. ಈ ಪ್ರಗತಿ ಪರಿಶೀಲನಾ ಸಭೆಯನ್ನು ನಿಯನ ಬದ್ಧವಾಗಿ ನಡೆಸಿದ ರಾಜ್ಯದ ಸಂಸದರ ಪಟ್ಟಿಯಲ್ಲಿ ಸುಮಲತಾ ಮೊದಲ ಸ್ಥಾನದಲ್ಲಿದ್ದಾರೆ.

2020-21 ನೇ ಸಾಲಿನ ನಾಲ್ಕು ಸಭೆಗಳನ್ನು ಯಶಸ್ವಿಯಾಗಿ ನಡೆಸಿದ ಸುಮಲತಾ ಈ ಗೌರವಕ್ಕೆ ಪಾತ್ರವಾಗಿದ್ದಾರೆ‌. ರಾಜ್ಯದ ಚಿತ್ರದುರ್ಗ, ತುಮಕೂರು,ಕೊಡಗು ಸಂಸದರು ಎರಡು ಸಭೆ ನಡೆಸಿದ್ರೇ, ಇನ್ನು ಕೆಲವರು ಒಂದು ಸಭೆಯನ್ನು ಮಾತ್ರ‌ ನಡೆಸಿದ್ದಾರೆ.

ಅನಂತಕುಮಾರ್ ಹೆಗಡೆ ಸೇರಿದಂತೆ ಸಾಕಷ್ಟು ಹಿರಿಯ ಸಂಸದರಿದ್ದು ಒಂದು ಸಭೆ ನಡೆಸಿ‌ ಕೈತೊಳೆದುಕೊಂಡಿದ್ದಾರೆ. ಆದರೆ ಸುಮಲತಾ ಮೊದಲ ಬಾರಿಗೆ ಸಂಸದೆಯಾಗಿಯೂ ಎಲ್ಲವನ್ನು ಸಮರ್ಥವಾಗಿ ನಡೆಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಸಂಸದರ‌ ಅನುದಾನ ಬಳಕೆಯಲ್ಲೂ‌ ಸುಮಲತಾ ಎರಡನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿ ಕೊಡಗು ಸಂಸದ ಪ್ರತಾಪ್ ಸಿಂಹ ಇದ್ದಾರೆ

Comments are closed.