ಕೆಲ ವರ್ಷಗಳ ಹಿಂದೆ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ ಸದನದಲ್ಲಿ ಬ್ಲೂಫಿಲ್ಮ್ ವೀಕ್ಷಣೆ ಪ್ರಕರಣ ಮರೆಯುವ ಮುನ್ನವೇ ಮತ್ತೊಮ್ಮೆ ರಾಜ್ಯದಲ್ಲಿ ನೀಲಿಚಿತ್ರ ವೀಕ್ಷಣೆ ವಿಚಾರ ಸದ್ದು ಮಾಡಿದೆ.

ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್‌ನಲ್ಲಿ ನೀಲಿಚಿತ್ರ ವೀಕ್ಷಿಸುತ್ತಿದ್ದರು ಎನ್ನಲಾಗಿದ್ದು, ಮೊಬೈಲ್ ವೀಕ್ಷಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಸದನದ ಕಾರ್ಯಕಲಾಪದ ವೇಳೆಯೇ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್ ನಲ್ಲಿದ್ದ ಅಶ್ಲೀಲ ದೃಶ್ಯ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ನನ್ನ ಮೊಬೈಲ್ ಗ್ಯಾಲರಿಯಲ್ಲಿ ಇದ್ದ ಪೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ. ಅದಕ್ಕೆ ತಪ್ಪು ಅರ್ಥ ಕಲ್ಪಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಪರಿಷತ್ ನಲ್ಲಿ ಪ್ರಶ್ನೆ ಕೇಳುವುದಿತ್ತು.ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಅಗತ್ಯ ದಾಖಲೆಗೆ ಹುಡುಕಾಡುತ್ತಿದ್ದಾಗ ಗ್ಯಾಲರಿ ಫುಲ್ ಆಗಿದ್ದು ಗಮನಕ್ಕೆ ಬಂತು. ಅದನ್ನು ಡಿಲೀಟ್ ಮಾಡ್ತಿದ್ದೆ ಅಷ್ಟೇ. ಇದಕ್ಕೆ ವಿಪರೀತ ಅರ್ಥ ಕಲ್ಪಿಸಬೇಡಿ ಎಂದಿದ್ದಾರೆ.

ಆದರೆ ಸೋಷಿಯಲ್ ಮೀಡಿಯಾ ದಲ್ಲಿ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ಪೋಟೋ ವೈರಲ್ ಆಗಿದ್ದು ಜನರು ಪ್ರಕಾಶ್ ರಾಥೋಡ್ ವಿರುದ್ಧ ಕಮೆಂಟ್ ಮಾಡ್ತಿದ್ದಾರೆ.

ಕೆಲವರ್ಷದ ಹಿಂದೆ ಹಾಲಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಸಿಸಿ ಪಾಟೀಲ್ ವಿರುದ್ಧ ಸದನದಲ್ಲಿ ಬ್ಲೂಫಿಲಂ ವೀಕ್ಷಣೆಯ ಆರೋಪ ಕೇಳಿಬಂದಿತ್ತು.