ಮೇಜರ್ ರಿಲೀಸ್ ಡೇಟ್ ಫಿಕ್ಸ್ : ತೆರೆಗೆ ಬರ್ತಿದೆ ಉನ್ನಿಕೃಷ್ಣನ್ ಜೀವನ ಚರಿತ್ರೆ

ದೇಶವನ್ನೇ ನಡುಗಿಸಿದ್ದ ಮುಂಬೈ ದಾಳಿ ಪ್ರಕರಣದ ರಿಯಲ್ ಹೀರೋ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರ ಬಿಡುಗಡೆ ಡೇಟ್ ಫೈನಲ್ ಆಗಿದೆ. ಚಿತ್ರ ಬಿಡುಗಡೆಗೆ ಕಾದಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಪ್ರೈಸ್ ನೀಡಿದೆ.

ಮುಂಬೈ ಭಯೋತ್ಪಾದಕ ದಾಳಿ ಹಾಗೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಾಧನೆ ಆಧಾರಿತ ಈ ಸಿನಿಮಾ ಜುಲೈ 2 ರಂದು ತೆರೆಗೆ ಬರಲಿದೆ. ಚಿತ್ರದ ನಿರ್ಮಾಪಕ ಮಹೇಶ್ ಬಾಬು ಈ ಸಂಗತಿ ಹಂಚಿಕೊಂಡಿದ್ದು, ಜುಲೈ 2 ಮೇಜರ್ ಡೇ ಎಂದು ಬರೆದುಕೊಂಡಿದ್ದಾರೆ.

ಉನ್ನಿಕೃಷ್ಣನ್ ಪಾತ್ರದಲ್ಲಿ ನಟ ಆದ್ವಿಶೇಷ ನಟಿಸಿದ್ದು ಸಿನಿಮಾ ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ. ಚಿತ್ರಕ್ಕೆ ಶಶಿಕಿರಣ್ ಆಕ್ಷ್ಯನ್ ಕಟ್ ಹೇಳಿದ್ದಾರೆ.

ಸಂದೀಪ್ ಉನ್ನಿಕೃಷ್ಣನ್ ಕತೆಯ ಆಧಾರಿತ ಸಿನಿಮಾದಲ್ಲಿ ಸಾಯಿ ಮಾಂಜ್ರೇಕರ್,ಪ್ರಕಾಶ್ ರಾಜ್,ರೇವತಿ,ಮುರುಳಿ ಶರ್ಮಾ ಪ್ರಮುಖ ಪಾತ್ರದಲ್ಲಿ ಇದ್ದಾರೆ.ಈಗಾಗಲೇ ಮೇಜರ್ ಎಂದು ಹೆಸರಿಡಲಾದ ಈ ಚಿತ್ರದ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳು ಸಿನಿಮಾ ರಿಲೀಸ್ ಗೆ ಕಾದಿದ್ದಾರೆ.

ಅಪ್ಪಟ ದೇಶಪ್ರೇಮಿಯಾಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು.

Comments are closed.