ಯೂಟ್ಯೂಬ್ ಟಿಪ್ಸ್ ಪಡೆದು 10 ಕೋಟಿಗೆ ತಂದೆಯನ್ನೇ ಬ್ಲ್ಯಾಕ್ ಮೇಲ್ ಮಾಡಿದ 11ರ ಪೋರ…!

ಲಕ್ನೋ : ಇತ್ತೀಚಿನ ದಿನಗಳಲ್ಲಿ ಹ್ಯಾಕರ್ಸ್ ಗಳ ಹಾವಳಿ ಮಿತಿಮೀರುತ್ತಿದೆ. ಇನ್ನೊಂದೆಡೆ ಹನಿಟ್ರ್ಯಾಪ್ ದಂಧೆಯೂ ಹೆಚ್ಚುತ್ತಿದೆ. ಈ ನಡುವಲ್ಲೇ 11 ವರ್ಷದ ಪುಟ್ಟ ಪೋರ ತನ್ನ ತಂದೆಯ ಅಶ್ಲೀಲ ವಿಡಿಯೋ ಹಾಗೂ ಕುಟುಂಬದ ವೈಯಕ್ತಿಕ ವಿವರಗಳನ್ನು ಆನ್ ಲೈನ್ ನಲ್ಲಿ ಶೇರ್ ಮಾಡುವ ಬೆದರಿಕೆಯೊಡ್ಡಿದ್ದು, 10 ಕೋಟಿ ರೂಪಾಯಿ ಬೇಡಿಕೆಯಿಟ್ಟು ಬ್ಲಾಕ್ ಮಾಡಿದ್ದಾನೆ.

ಹೌದು, ಘಾಜಿಯಾ ಬಾದ್ ನಲ್ಲಿ ನಡೆದಿರುವ ಘಟನೆ ನಿಜಕ್ಕೂ ಪೋಷಕರನ್ನು ಬೆಚ್ಚಿಬೀಳಿಸಿದೆ. ಜನವರಿ 1ರಂದು ವ್ಯಕ್ತಿಯೋರ್ವರ ಈ ಮೇಲ್ ಹ್ಯಾಕ್ ಆಗಿತ್ತು. ಈ ಮೇಲ್ ಐಡಿಯ ಪಾಸ್ ವರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಕ್ರಿಮಿನಲ್ಸ್ ಬದಲಾಯಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ 10 ಕೋಟಿ ರೂಪಾಯಿ ಹಣವನ್ನು ನೀಡುವಂತೆ ಮೇಲ್ ಮಾಡಿದ್ದರು. ಹಣ ಕೊಡದೇ ಇದ್ರೆ ನಿಮ್ಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇವೆ. ಅಲ್ಲದೇ ಕುಟುಂಬಸ್ಥರಿಗೆ ಕಿರುಕುಳ ನೀಡುವುದಾಗಿಯೂ ಬೆದರಿಕೆಯೊಡ್ಡಲಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿದ್ದ ಗಾಜಿಯಾಬಾದ್ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಲಭ್ಯವಾಗಿತ್ತು. ದೂರುದಾರನ ಕುಟುಂಬಸ್ಥರೇ ಈ ಮೇಲ್ ಹ್ಯಾಕ್ ಮಾಡಿ, ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಅನ್ನೋದು ಬಯಲಾಗಿತ್ತು. ಆದರೆ ಯಾರೂ ಅನ್ನೋ ಕುರಿತು ತನಿಖೆಗೆ ಇಳಿದ ಪೊಲೀಸರು ಅರೆಕ್ಷಣ ಬೆಚ್ಚಿಬಿದ್ದಿದ್ದರು. ಯಾಕೆಂದ್ರ ವ್ಯಕ್ತಿಗೆ 10 ಕೋಟಿ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದು ಬೇರಾರೂ ಅಲ್ಲಾ, ಅವರದೇ11 ವರ್ಷದ ಮಗ.

5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 11ರ ಪೋರ ಆನ್ ಲೈನ್ ಹಾಗೂ ಯೂಟ್ಯೂಬ್ ವಿಡಿಯೋ ಮೂಲಕ ಹ್ಯಾಕಿಂಗ್ ಮಾಡೋ ಕಲೆಯನ್ನು ಕಲಿತುಕೊಂಡಿದ್ದಾನೆ. ಈ ಮೇಲ್ ಹ್ಯಾಕ್ ಮಾಡೋದು, ಹೇಗೆಲ್ಲಾ ಬೆದರಿಕೆ ಹಾಕಬಹುದು ಅನ್ನೋದ್ರ ಮಾಹಿತಿಯನ್ನೂ ಪಡೆದುಕೊಂಡಿದ್ದಾನೆ. ನಂತರ ಸ್ವತಃ ತನ್ನ ತಂದೆಯನ್ನೇ ಬ್ಲ್ಯಾಕ್ ಮೇಲ್ ಮಾಡೋಕೆ ಹೋಗಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಬಾಲಕನ ವಿರುದ್ದ ಇದೀಗ ಐಟಿ ಸೆಕ್ಷನ್ 66ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ದಾಖಲಿಸಿಕೊಂಡಿರುವ ಗಾಜಿಯಾಬಾದ್ ಪೊಲೀಸರು ಪ್ರಕರಣದ ಕುರಿತು ತನಿಖೆಯನ್ನೂ ನಡೆಸುತ್ತಿದ್ದಾರೆ. ಇನ್ನಾದ್ರೂ ಪೋಷಕರಿಗೆ ಮಕ್ಕಳ ಕೈಗೆ ಮೊಬೈಲ್, ಯೂಟ್ಯೂಬ್ ನೀಡೋ ಮುನ್ನ ಹುಷಾರಾಗಿರಿ.

Comments are closed.