ಭಾನುವಾರ, ಏಪ್ರಿಲ್ 27, 2025
HomeBreakingMurugesh Nirani: ಸಿಎಂ ರೇಸ್ ನಲ್ಲಿರೋ ನಿರಾಣಿಗೂ ಸಿಡಿಶಾಕ್….! ಸಚಿವರ ಬಳಿ 500 ಸಿಡಿ ...

Murugesh Nirani: ಸಿಎಂ ರೇಸ್ ನಲ್ಲಿರೋ ನಿರಾಣಿಗೂ ಸಿಡಿಶಾಕ್….! ಸಚಿವರ ಬಳಿ 500 ಸಿಡಿ ಇದೆ ಎಂದ ಅಲಂಪಾಷಾ…!!

- Advertisement -

ರಾಜ್ಯದಲ್ಲಿ ಸಂಚಲನ ಮೂಡಿಸಿರುವ  ಸಿಎಂ ಬದಲಾವಣೆ ಸರ್ಕಸ್ ನಡುವೆಯೇ ಬಿಜೆಪಿ ಪಾಳಯದಲ್ಲಿ ಸಿಎಂ ರೇಸ್ ನಲ್ಲಿ ಪ್ರಬಲ ಆಕಾಂಕ್ಷಿಯಾಗಿರೋ  ಮುರುಗೇಶ್ ನಿರಾಣಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮುರುಗೇಶ್ ನಿರಾಣಿ ಬಳಿ 500 ಸಿಡಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಅಲಂ ಪಾಷಾ  ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಲಂಪಾಷಾ, ರಾಜಕೀಯದಲ್ಲಿ ಮಹಾತ್ವಾಕಾಂಕ್ಷಿಯಾಗಿರುವ ಮುರುಗೇಶ್ ನಿರಾಣಿ ಬಳಿ 500 ಸಿಡಿಗಳಿವೆ. ಈಗಲೇ 500 ಸಿಡಿಗಳಿವೆ. ಇನ್ನು ಅವರಿಗೆ ರಾಜ್ಯದ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೇ ಈ ಸಿಡಿಗಳ ಸಂಖ್ಯೆ 50 ಲಕ್ಷ ವೂ ಆಗಬಹುದು ಎನ್ನುವ ಮೂಲಕ ಮುರಾಣಿ ಸಿಎಂ ಆಗಬಾರದು ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ. ಆತನ ಬಳಿ ಸಾಕಷ್ಟು ಸೆಕ್ಸ್ ಸಿಡಿಗಳಿವೆ. ರಾಜಕಾರಣಿಗಳು ಮತ್ತು ಪ್ರಮುಖ ನಾಯಕರ ಅಶ್ಲೀಲ ಸಿಡಿಗಳಿರೋದರಿಂದ, ಇದನ್ನು  ಮುರುಗೇಶ್ ನಿರಾಣಿ ರಾಜಕೀಯದ  ದಾಳವಾಗಿ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ರೈತರ ಹೆಸರಿನಲ್ಲಿ ಸಾಲ ಮಾಡಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದ ಶಹಾಪುರ ಶಾಖೆಯಲ್ಲಿ ನಕಲಿ ಹೆಸರಿನಲ್ಲಿ ಸಾಲ ಪಡೆದಿದ್ದಾರೆ. ಸಣ್ಣ ರೈತರ ಬೆಳೆಸಾಲ ಪಡೆದು ಮೋಸ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ರೈತರಿಗೆ ಸಿಗುವ ಸಾಲವನ್ನು ಇವರು ದುರ್ಬಳಕೆ ಮಾಡಿಕೊಂಡಿದ್ದಾರೆ.

ನಿರಾಣಿ ಶುಗರ್ಸ್ ಕಂಪನಿ ಮೂಲಕ  ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ವಿಜಯ್ ಸೌಹಾರ್ದ ಕ್ರೆಡಿಟ್ ಲಿಮಿಟೆಡ್ ಗೆ 8 ಕೋಟಿ ವಂಚಿಸಿದ್ದಾರೆ. ಅವರಿಗೆ ಸೇರಿದ ಶುಗರ್ಸ್ ಕಂಪನಿಯಲ್ಲಿ ಬಾಯ್ಲರ್ ಸಿಡಿದು ನಾಲ್ವರು ಸಾವನ್ನಪ್ಪಿದರು. ಆದರೆ ತನಿಖೆಯೇ ಆಗದೇ ಪ್ರಕರಣ ಮುಚ್ಚಲಾಯಿತು. ಇಂತವರು ಸಿಎಂ ಆಗೋದು ಸರಿಯೇ ಎಂದು ಅಲಂಪಾಷಾ ಪ್ರಶ್ನಿಸಿದ್ದಾರೆ.

 ಈ ಮಧ್ಯೆ ಮುರುಗೇಶ್ ನಿರಾಣಿ ವಿರುದ್ಧ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೂಡ ಕಿಡಿಕಾರಿದ್ದು, ಅವರಿಗೆ ಹತ್ಯೆಯಾದ ಕಾಂಗ್ರೆಸ್ ನಾಯಕಿ ರೇಷ್ಮಾ ಜೊತೆ ಆತ್ಮೀಯ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ.

RELATED ARTICLES

Most Popular