Vishala Ganiga Murder Case : ವಿಶಾಲ ಗಾಣಿಗ ಕೊಲೆ ಪತಿ, ಸೇರಿ ಸುಫಾರಿ ಕಿಲ್ಲರ್‌ ಬಂಧನ : ದುಬೈನಲ್ಲೇ ಕುಳಿತು ಕೊಲೆಗೆ ಸ್ಕೆಚ್‌

ಬ್ರಹ್ಮಾವರ : ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿ ದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ ಸುಫಾರಿ ಕೊಟ್ಟು ಕೃತ್ಯವೆಸಗಿರೋದು ತನಿಖೆಯಿಂದ ಬಯಲಾಗಿದೆ. ವಿಶಾಲ ಗಾಣಿಗ ಪತಿ ಹಾಗೂ ಸುಫಾರಿ ಕಿಲ್ಲರ್‌ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿ ವಿಶಾಲ ಗಾಣಿಗ ಹತ್ಯೆ ನಡೆದಿತ್ತು. ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ನೇಣಿಗೆ ಹಾಕಲಾಗಿದ್ದು. ಈ ಪ್ರಕರಣ ಕರಾವಳಿಯನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಅನುಮಾನಾಸ್ಪದ ಸಾವು ಕೊಲೆ ಅನ್ನೋದನ್ನು ಪೊಲೀಸರು ದೃಢಪಡಿಸಿದ್ದಾರೆ. ವಿಶಾಲ ಗಾಣಿಗ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಸುಫಾರಿ ಕೊಟ್ಟು ಈ ಹತ್ಯೆ ಮಾಡಿಸಿರೋದು ತನಿಖೆಯಿಂದ ಬಯಲಾಗಿದೆ.

ವಿಶಾಲ ಗಾಣಿಗ ಹಾಗೂ ರಾಮಕೃಷ್ಣ ಗಾಣಿಗ ನಡುವೆ ವೈಮನಸ್ಸು ಮೂಡಿತ್ತು. ಇದೇ ದ್ವೇಷದ ಹಿನ್ನೆಲೆ ಯಲ್ಲಿ ಪತಿ ದುಬೈನಲ್ಲಿಯೇ ಕುಳಿತು ಪತ್ನಿಯ ಹೆತ್ಯೆಗೆ ಸ್ಕೆಚ್‌ ಹಾಕಿದ್ದ. ಉತ್ತರ ಪ್ರದೇಶದ ಕಿಲ್ಲರ್‌ಗಳಿಗೂ ಸುಫಾರಿಯನ್ನು ಕೊಟ್ಟಿದ್ದ. ಪತ್ನಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಾರ್ಯದ ಹಿನ್ನೆಲೆಯಲ್ಲಿ ಪತ್ನಿಊರಿಗೆ ತೆರಳುತ್ತಿದ್ದಂತೆಯೇ ಕೊಲೆಗೆ ಸ್ಕೆಚ್‌ ಹಾಕಿದ್ದಾನೆ. ಆದ್ರೆ ಇದ್ಯಾವುದೂ ವಿಶಾಲ ಗಾಣಿಗ ಅರಿವಿಗೆ ಬಾರದಾಗಿತ್ತು.

ಪತ್ನಿ ಹಾಗೂ ಮಗಳನ್ನು ಜುಲೈ 2 ರಂದು ಊರಿಗೆ ಕಳುಹಿಸಿಕೊಟ್ಟಿದ್ದ ರಾಮಕೃಷ್ಣ ಗಾಣಿಗ ಉಪ್ಪಿನ ಕೋಟೆಯ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದಾನೆ. ಹೀಗಾಗಿಯೇ ವಿಶಾಲ ಗಾಣಿಗ ತನ್ನ ಮಗಳೊಂದಿಗೆ ದುಬೈನಿಂದ ಬಂದು ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡಿದ್ದರು. ಆದರೆ ಜುಲೈ 12ರಂದು ಮಗಳು, ತಂದೆ ತಾಯಿಯ ಜೊತೆಗೆ ತವರು ಮನೆಯಾಗಿರುವ ಗುಜ್ಜಾಡಿಗೆ ತೆರಳಿದ್ದರು. ಆದರೆ ಅದೇ ರಿಕ್ಷಾದಲ್ಲಿಯೇ ಮರಳಿ ಉಪ್ಪಿನಕೋಟೆಯ ಅಪಾರ್ಟ್‌ಮೆಂಟ್‌ಗೆ ಬಂದು ಒಬ್ಬರೇ ಉಳಿದುಕೊಂಡಿ ದ್ದರು. ಈ ವೇಳೆಯಲ್ಲಿ ಇಬ್ಬರು ಸುಫಾರಿ ಕಿಲ್ಲರ್‌ಗಳು ಫ್ಲ್ಯಾಟ್‌ಗೆ ನುಗ್ಗಿ ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣದ ಧಿಕ್ಕು ತಪ್ಪಿಸೋ ಸಲುವಾಗಿಯೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ : ಇಬ್ಬರು ಹಂತಕರು ಅರೆಸ್ಟ್‌ ? ಪತಿಯೇ ಕೊಟ್ರಾ ಸುಫಾರಿ ..!

4 ದಿನಗಳ ಪೊಲೀಸ್ಟ್‌ ಕಸ್ಟಡಿ
ಜುಲೈ 18 ರಂದು ಪೊಲೀಸರು ವಿಚಾರಣೆಗೆ ಕರೆದಿದ್ದ ವೇಳೆಯಲ್ಲಿ ಆರೋಪಿ ರಾಮಕೃಷ್ಣ ಕೊಲೆ ವಿಚಾರ ವನ್ನು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಯನ್ನು ನಡೆಸಿದ ಪೊಲೀಸರು ಜುಲೈ 20ರಂದು ಬಂಧಿಸಿದ್ದಾರೆ. ಅಲ್ಲದೇ ಪತ್ನಿ ವಿಶಾಲ ಗಾಣಿಗ ಕೊಲೆ ಪ್ರಕರಣದ ಆರೋಪದ ಹಿನ್ನೆಲೆ ಯಲ್ಲಿ ರಾಮಕೃಷ್ಣನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 4 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. ಅಲ್ಲದೇ ಮತ್ತೋರ್ವ ಆರೋಪಿಯನ್ನೂ ಪೊಲೀಸರು ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ ತನಿಖೆ ಚುರುಕು, ಪೊಲೀಸರ 5 ತಂಡ ರಚನೆ

ಪತ್ನಿಯನ್ನು ಕೊಂದು ಅಂತ್ಯಕ್ರೀಯೆ ..!
ವಿಶಾಲ ಗಾಣಿಗ ಕೊಲೆಯಾಗಿರೋ ವಿಚಾರ ತಿಳಿಯುತ್ತಲೇ ಅಂತ್ಯಕ್ರಿಯೆಗಾಗಿ ಊರಿಗೆ ಬಂದಿದ್ದ ರಾಮಕೃಷ್ಣ ಗಾಣಿಗ ಅಂತ್ಯಕ್ರಿಯೆಯನ್ನು ನಡೆಸಿದ್ದಾನೆ. ಮಾತ್ರವಲ್ಲ ಎಲ್ಲಾ ಕಾರ್ಯಗಳನ್ನೂ ನೆರವೇರಿಸಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಆದ್ರೆ ಪೊಲೀಸರಿಗೆ ರಾಮಕೃಷ್ಣ ಗಾಣಿಗ ಮೇಲೆ ಅನುಮಾನದ ಹಿನ್ನೆಲೆಯಲ್ಲಿ ಮೂರು ಬಾರಿ ವಿಚಾರಣೆಗೆ ಕರೆದಿದ್ದರು. ಕೊನೆಯ ಬಾರಿಗೆ ವಿಚಾರಣೆಗೆ ಕರೆದ ವೇಳೆಯಲ್ಲಿ ಕೊಲೆ ಪ್ರಕರಣ ಮಾಹಿತಿಯನ್ನು ರಾಮಕೃಷ್ಣ ಗಾಣಿಗ ಬಾಯ್ಬಿಟ್ಟಿದ್ದಾನೆ. ಇದೇ ಹೊತ್ತಲೇ ಪೊಲೀಸರು ಸುಫಾರಿ ಕಿಲ್ಲರ್‌ ಓರ್ವನನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ಮತ್ತೆ ಚರ್ಚೆಗೆ ಬಂತು ಪವಿತ್ರಾ ಗೌಡ ಹೆಸರು….! ಏನಿದು ದಚ್ಚು-ಪವಿ ಅಸಲಿ ಕಹಾನಿ…!!

ಕೊಲೆಯ ಬಗ್ಗೆ ಹಲವು ಅನುಮಾನ
ವಿಶಾಲ ಗಾಣಿಗ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರೂ ಕೂಡ ಇದೊಂದು ಕೊಲೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ ಯಾವ ಕಾರಣಕ್ಕೆ ಕೊಲೆ ನಡೆದಿದೆ ಅನ್ನೋದು ತಿಳಿಯದಾಗಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಇರೋದು ಪೊಲೀಸರ ತನಿಖೆಗೆ ಹಿನ್ನಡೆಯಾಗಿಯತ್ತು. ಆದ್ರೂ ಆಸ್ತಿ ವಿಚಾರಕ್ಕೆ ಕೊಲೆ ನಡೆದಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇನ್ನೊಂದೆಡೆ ಪೊಲೀಸರು ಕೌಟುಂಬಿಕ ವಿಚಾರದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಒಂದೆಡೆ ಕಳವು, ಆಸ್ತಿ ವಿವಾದ ಜೊತೆಗೆ ಕೌಟುಂಬಿಕ ವಿಚಾರದ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆಯನ್ನು ನಡೆಸಿದ್ದರು.

Comments are closed.