ಸೋಮವಾರ, ಏಪ್ರಿಲ್ 28, 2025
HomeBreakingVidyagama Scheme : ರಾಜ್ಯದಾದ್ಯಂತ ಶಾಲೆಗಳು ಬಂದ್‌ ! ಕೊರೊನಾ ನಡುವೆ ಮತ್ತೆ ಜಾರಿಯಾಗಲಿದೆ ವಿದ್ಯಾಗಮ

Vidyagama Scheme : ರಾಜ್ಯದಾದ್ಯಂತ ಶಾಲೆಗಳು ಬಂದ್‌ ! ಕೊರೊನಾ ನಡುವೆ ಮತ್ತೆ ಜಾರಿಯಾಗಲಿದೆ ವಿದ್ಯಾಗಮ

- Advertisement -

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ಹಾಗೂ ಓಮೈಕ್ರಾನ್ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಎರಡು ವಾರಗಳ ಕಾಲ ಕಠಿಣ ನಿಯಮ ಜಾರಿಗೊಳಿಸಿದೆ. ಅಲ್ಲದೇ 1 ರಿಂದ 9 ನೇ ತರಗತಿಯವರೆಗೆ ಶಾಲೆಗಳನ್ನು ಬಂದ್ ಮಾಡಿದೆ. ಇನ್ನೂ ಕೂಡಾ ರಾಜ್ಯದಲ್ಲಿ ಕೊರೊನಾ, ಒಮಿ ಕ್ರಾನ್ ಕೇಸ್ ಹೆಚ್ಚಳವಾಗೋ ಸಾಧ್ಯತೆ ಇದ್ದು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮತ್ತೆ ವಿದ್ಯಾಗಮ ( Vidyagama Scheme ) ಜಾರಿಗೆ ತಂದಿದೆ. ಮೂರು ಮಾದರಿಯಲ್ಲಿ ಮಕ್ಕಳಿಗೆ ಪರ್ಯಾಯ ಶಿಕ್ಷಣ ನೀಡಲು ಚಿಂತನೆ ನಡೆದಿದೆ.

  • ಮೊಬೈಲ್ ರಹಿತ ತರಗತಿ/ಆಫ್ ಲೈನ್ ತರಗತಿ
  • ಇಂಟರ್ ನೆಟ್ ರಹಿತ ಮೊಬೈಲ್ ಪೋನ್ ಹೊಂದಿರುವ ತರಗತಿ
  • ಇಂಟರ್ ನೆಟ್ ಸಹಿತ ಮೊಬೈಲ್ ಟ್ಯಾಬ್ ತರಗತಿಯನ್ನು ನಡೆಸಲು ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ ಮೂರು ವಿಧಾನಗಳಲ್ಲಿ ವಿದ್ಯಾಗಮ ಜಾರಿ ಗೆ ತರಲು ಚಿಂತನೆ ನಡೆದಿದ್ದು, ಶಿಕ್ಷಕರು 20 ರಿಂದ 25. ಮಕ್ಕಳಿಗೆ ಗುಂಪು ರಚನೆ ಮಾಡಿ ತರಗತಿ ನಿರ್ವಹಣೆ ಮಾಡಬೇಕು. ಪೋಷಕರ ಮೊಬೈಲ್ ನಂಬರ್ ಗೆ ಪೋನ್ ಮಾಡಿ ಶಿಕ್ಷಣ ಚಟುವಟಿಕೆ ‌ಮುಂದುವರಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಲಾಗಿದೆ. ತರಗತಿಯ ಮಕ್ಕಳನ್ನು ಪಾಳಿ ಪದ್ಧತಿಯಲ್ಲಿ ಕರೆದು ತರಗತಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಅಯಾ ಶಾಲೆ ಶಿಕ್ಷಕರಿಗೆ ನೀಡಲಾಗಿದೆ. ಅಲ್ಲದೇ ಮೂರು ವಿಧದಲ್ಲೂ ಶಿಕ್ಷಣ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಶಾಲಾ ಮುಖ್ಯಸ್ಥರಿಗೆ ಆದೇಶಿಸಲಾಗಿದೆ. ರೆಡಿಯೋ, ದೂರದರ್ಶನ, ವಿಡಿಯೋ, ವಾಟ್ಸಪ್ ಮೂಲಕ ಕಲಿಕಾ ನಿರ್ವಹಣೆ ಮಾಡಲು ಹೇಳಲಾಗಿದ್ದು, 1 ರಿಂದ ‌3 ನೇ ತರಗತಿ ಬೆಳಿಗ್ಗೆ 10 ರಿಂದ 12:30 ರವರೆಗೆ ತಂಡಗಳಾಗಿ ಸಲಹಾತ್ಮಾಕ ವೇಳಾಪಟ್ಟಿ ಸಿದ್ದ ಪಡಿಸಲಾಗಿದೆ. ದಿನ ಬಿಟ್ಟು ತರಗತಿ ನಡೆಸಬೇಕು.

  • 4 ರಿಂದ 5ನೇ ತರಗತಿವರೆಗೆ ದಿನ ಬಿಟ್ಟು ದಿನ ಬೆಳಿಗ್ಗೆ 10 ರಿಂದ 12:30 ರವರೆಗೆ
  • 6 ನೇ ತರಗತಿ 10 ರಿಂದ 1:15 ರವರೆಗೆ
  • 7 ಹಾಗೂ 8ನೇ ತರಗತಿ ಮಂಗಳವಾರ, ಗುರುವಾರ
  • ಬೆಳಿಗ್ಗೆ 10 ರಿಂದ 1:15 ರವರೆಗೆ ತರಗತಿ ನಡೆಯಲಿದೆ
  • 9 ನೇ ತರಗತಿ ದಿನಬಿಟ್ಟು ದಿನ ತರಗತಿ
  • ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:15 ರವರೆಗೆ ತರಗತಿ ನಡೆಯಬೇಕು.

ಇದರೊಂದಿಗೆ ಕೊರೋನಾ ಮಾರ್ಗಸೂಚಿ ಅನುಸರಿಸಿ ಶಾಲಾ ಅವರಣದಲ್ಲಿ ತಂಡಗಳೊಂದಿಗೆ ತರಗತಿ ಆಫ್ ಲೈನ್ ನಡೆಸಲು ಸೂಚನೆ ನೀಡಲಾಗಿದ್ದು, ಇದರ ನಿರ್ವಹಣೆಯನ್ನು ಡಿಡಿಪಿಐ, ಅಧ್ಯಾಪಕರು,‌ ಮುಖ್ಯೋಪಾಧ್ಯಾಯರು, ಬಿಇಒಗಳಿಗೆ ವಹಿಸಲಾಗಿದೆ. ಈಗಾಗಲೇ ವಿದ್ಯಾಗಮ ಯೋಜನೆಗೆ ರೂಪುರೇಷೆಗಳು ಸಿದ್ದವಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ಉಳಿದೆ.

ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದೆ ಎಂದು ಅಂಕಿ ಅಂಶಗಳನ್ನು ನೀಡುತ್ತಿರುವ ಸರಕಾರ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಬೋಧಿಸಬಹುದಾಗಿದೆ. ಶಾಲೆಗಳನ್ನು ಬಂದ್‌ ಮಾಡುವುದಾಗಿ ಹೇಳುವ ಶಿಕ್ಷಣ ಇಲಾಖೆ ಮತ್ತೆ ಶಾಲೆಯ ಆವರಣದಲ್ಲೇ ವಿದ್ಯಾಗಮ ಯೋಜನೆ ನಡೆಸುವುದು ಎಷ್ಟು ಸರಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮಕ್ಕಳನ್ನು ಶಾಲೆಗೆ ಕರೆಯುವುದೇ ಆದ್ರೆ ಕೊಠಡಿಯೊಳಗೆ ಕುಳಿಸಿಯೇ ಪಾಠ ಬೋಧನೆ ಮಾಡಬಹುದು. ಸರಕಾರ ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸುತ್ತಿದ್ದರೂ ಕೂಡ ಅದು ದಾಖಲೆಯ ಸಲುವಾಗಿ ಮಾತ್ರವೇ ಉಳಿಯುತ್ತಿದೆ ಹೊರತು, ಯಾವುದು ಅನುಷ್ಟಾನಕ್ಕೆ ಬರುತ್ತಿದೆ. ಈ ಹಿಂದೆಯೂ ವಿದ್ಯಾಗಮ ಯೋಜನೆಯನ್ನು ಮಾಡುವ ಮೂಲಕ ಶಿಕ್ಷಣ ಇಲಾಖೆ ಕೈಸುಟ್ಟುಕೊಂಡಿತ್ತು. ಪ್ರತಿಪಕ್ಷಗಳ ವಿರೋಧಕ್ಕೆ ಮಣಿದು ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟಿತ್ತು. ಇದೀಗ ಮತ್ತೆ ಅಂತಹದ್ದೇ ದುಸ್ಸಾಹಕ್ಕೆ ಇಳಿಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ : SSLC : ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : ವೀಕೆಂಡ್‌ ಕರ್ಪ್ಯೂ : ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ ಶಿಕ್ಷಣ ಇಲಾಖೆ

( Karnataka schools close for corona virus, Education Department ready to implement Vidyagama Scheme )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular