most-liked image on Instagram : ಇನ್​ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್​ ಪಡೆದ ಫೋಟೋ ಯಾವುದು ಗೊತ್ತಾ?

most-liked image on Instagram :ಇನ್​ಸ್ಟಾಗ್ರಾಂನಲ್ಲಿ ಫೋಟೋಗಳಿಗೆ ಲೈಕ್​ ಪಡೆಯಬೇಕು ಅಂತಾ ಅನೇಕರು ಹಲವು ರೀತಿಯ ಸಾಹಸಗಳನ್ನೇ ಮಾಡುತ್ತಾರೆ. ಇಲ್ಲಿ ನೀವು ಎಷ್ಟೇ ತಯಾರಾಗಿ ಕ್ಯಾಮಾರದ ಎದುರು ಪೋಸ್​ ನೀಡಿದರೂ ಸಹ ಕೆಲವೊಮ್ಮೆ ಲೈಕ್​ಗಳು ಬರೋದೇ ಇಲ್ಲ. ಸೆಲೆಬ್ರಿಟಿಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಇರುವುದರಿಂದ ಅವರ ಪೋಸ್ಟ್​ಗಳಿಗೆ ಲಕ್ಷಗಟ್ಟಲೇ ಲೈಕ್ಸ್​ ಬರುವುದುಂಟು. ಆದರೆ ಇನ್​ಸ್ಟಾಗ್ರಾಂನಲ್ಲಿ ಈವರೆಗೆ ಅತೀ ಹೆಚ್ಚು ಲೈಕ್​ ಪಡೆದ ಫೋಟೋ ಯಾವುದಿರಬಹುದೆಂದು ಎಂದಾದರೂ ಯೋಚನೆ ಮಾಡಿದ್ದೀರಾ..? ಹೌದು ಎಂದಾದರೆ ಈ ಪ್ರಶ್ನೆಗೆ ಸಿಗುವ ಉತ್ತರ ನಿಜಕ್ಕೂ ನಿಮ್ಮನ್ನು ಹುಬ್ಬೇರಿಸುವಂತೆ ಮಾಡಲಿದೆ.

ಮೂರು ವರ್ಷಗಳಿಂದ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾದ ಮೊಟ್ಟೆಯ ಫೋಟೋವೊಂದು ಇಲ್ಲಿಯವರೆಗೆ ಅತೀ ಹೆಚ್ಚು ಲೈಕ್ಸ್​ ಪಡೆದ ಫೋಟೋವಾಗಿದೆ ಎಂದು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಮಾಹಿತಿ ನೀಡಿದೆ. ಈ ಮೊಟ್ಟೆಯ ಫೋಟೋಗೆ ಬರೋಬ್ಬರಿ 5.5 ಮಿಲಿಯನ್​ ಲೈಕ್​ಗಳು ಹಾಗೂ 3.4 ಮಿಲಿಯನ್​ ಕಮೆಂಟ್​ಗಳು ಬಂದಿವೆ.

ವಿಶ್ವ ದಾಖಲೆ ನಿರ್ಮಿಸಿರುವ ಈ ಮೊಟ್ಟೆಯ ಫೋಟೋವನ್ನು ಮೂರು ವರ್ಷಗಳ ಹಿಂದೆ ಪೋಸ್ಟ್​ ಮಾಡಲಾಗಿತ್ತು. ಆದರೆ ಇಂದಿಗೂ ಕೂಡ 55.5 ಮಿಲಿಯನ್​ ಲೈಕ್​ಗಳನ್ನು ಸಂಪಾದಿಸುವ ಮೂಲಕ ಇನ್​ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್​ ಪಡೆದ ಫೋಟೋ ಎನಿಸಿಕೊಂಡಿದೆ ಎಂದು ಟ್ವಿಟರ್​ನಲ್ಲಿ ಗಿನ್ನೆಸ್​ ವಿಶ್ವ ದಾಖಲೆ ಬರೆದುಕೊಂಡಿದೆ.


ಕುತೂಹಲಕಾರಿ ವಿಚಾರ ಏನಪ್ಪ ಅಂದರೆ, ಈ ವಿಶ್ವ ದಾಖಲೆ ನಿರ್ಮಿಸಿರುವ ಮೊಟ್ಟೆಯ ಫೋಟೋವನ್ನು ಹೊಂದಿರುವ ಇನ್​ಸ್ಟಾಗ್ರಾಂ ಖಾತೆಯು ಕೇವಲ ಒಂದೇ ಪೋಸ್ಟ್​ನ್ನು ಹೊಂದಿದೆ. ಅದೇ ಈ ಮೊಟ್ಟೆಯ ಫೋಟೋ..! ಈ ಮೊಟ್ಟೆಯ ಫೋಟೋವೊಂದನ್ನು ಹೊರತುಪಡಿಸಿ ಈ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇನ್ಯಾವುದೇ ಫೋಟೋಗಳನ್ನು ಪೋಸ್ಟ್​ ಮಾಡಲಾಗಿಲ್ಲ. ವಿಡಿಯೋ ಸೆಕ್ಷನ್​ನಲ್ಲಿ ನಿಮಗೆ 2 ವಿಡಿಯೋಗಳು ಕಾಣಸಿಗುತ್ತದೆ. ಈ ಎರಡೂ ವಿಡಿಯೋಗಳನ್ನು 2020ರಲ್ಲಿ ಪೋಸ್ಟ್​ ಮಾಡಲಾಗಿದೆ . ಈ ಇನ್​ಸ್ಟಾಗ್ರಾಂ ಖಾತೆಯು 4.8 ಮಿಲಿಯನ್​ ಫಾಲೋವರ್ಸ್ ಹೊಂದಿದೆ.

ಕೋಳಿಯ ಮೊಟ್ಟೆಯ ಫೋಟೋವನ್ನು 2019ರ ಜನವರಿ 4ನೇ ತಾರೀಖಿನಂದು ಪೋಸ್ಟ್​ ಮಾಡಲಾಗಿದೆ. ಈ ಫೋಟೋಗೆ ಎಲ್ಲರೂ ಸೇರಿ ವಿಶ್ವದಾಖಲೆ ನಿರ್ಮಿಸೋಣ ಹಾಗೂ ಇದನ್ನು ಇನ್​ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ಸ್​ ಪಡೆದ ಪೋಸ್ಟ್​ ಎಂದು ದಾಖಲೆ ಮಾಡೋಣ. ಈ ಮೂಲಕ ಕೆಲಿ ಜೆನ್ನರ್​ನ ಪ್ರಸ್ತುತ ವಿಶ್ವದಾಖಲೆಯನ್ನು ಮುರಿಯೋಣ ಎಂದು ಶೀರ್ಷಿಕೆ ನೀಡಲಾಗಿದೆ.

2019ರ ಜನವರಿ 14ರಂದು ಕೈಲಿ ಜೆನ್ನರ್​ರ ದಾಖಲೆಯನ್ನು ಮುರಿದ ಈ ಪೋಸ್ಟ್​ 30.5 ಮಿಲಿಯನ್ ಲೈಕ್ಸ್ ಸಂಪಾದಿಸಿತ್ತು. 2018ರ ಫೆಬ್ರವರಿ ತಿಂಗಳಲ್ಲಿ ಕೈಲಿ ಜೆನ್ನರ್​ ತನ್ನ ನವಜಾತ ಶಿಶುವಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಇದಕ್ಕೆ ಅತೀ ಹೆಚ್ಚು ಅಂದರೆ 18 ಮಿಲಿಯನ್ ಲೈಕ್​ಗಳು ಬಂದಿದ್ದವು. ಈ ದಾಖಲೆಯನ್ನು ಮೊಟ್ಟೆಯ ಫೋಟೋ ಮುರಿದಿತ್ತು.

ಇದನ್ನು ಓದಿ : blankets for homeless : ಚಿಪ್ಸ್​ ಪ್ಯಾಕೆಟ್​ಗಳಿಂದ ಬೆಡ್​ಶೀಟ್​ಗಳನ್ನು ತಯಾರಿಸಿದ ಪೋರಿ

ಇದನ್ನೂ ಓದಿ : Shilpa Shetty: ಟ್ರೆಂಡಿ ಫ್ಯಾಷನ್‌ನಲ್ಲಿ ಕಂಗೊಳಿಸುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

Photo of egg posted 3 years ago is STILL most-liked image on Instagram – can you guess how many likes it has?

Comments are closed.