namma metro : ಕೊರೋನಾ ನಿಯಮಕ್ಕೆ ಡೋಂಟ್ ಕೇರ್ : ಒಂದು ವರ್ಷದಲ್ಲಿ 1 ಕೋಟಿ ದಂಡ ಸಂಗ್ರಹಿಸಿದ ನಮ್ಮ‌ಮೆಟ್ರೋ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಕೊರೋನಾ ನಿಯಂತ್ರಣಕ್ಕೆ ಸರ್ಕಾರ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಆದರೂ ಜನರು ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ಮೆಟ್ರೋ ಹೀಗೆ ಕೊರೋನಾ ನಿಯಮ ಮರೆತವರಿಂದ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ವಸೂಲಿ‌ಮಾಡಿದೆ. ಈ ವಿಚಾರವನ್ನು ಸ್ವತಃ ಮೆಟ್ರೋ (namma metro) ಖಚಿತಪಡಿಸಿದೆ.

ಬಿಎಮ್ಆರ್ಸಿಎಲ್ ಅಂಕಿಅಂಶ ಬಿಡುಗಡೆ ಮಾಡಿದ್ದು, ಅಂಕಿಅಂಶಗಳ‌ ಪ್ರಕಾರ ಮಾರ್ಚ್ 24 ರಿಂದ 2021 ರಿಂದ ಜನವರಿ 6 , 2022 ರವರೆಗೆ ಒಟ್ಟು 1 ಕೋಟಿ ದಂಡದ ಮೊತ್ತ ‌ಸಂಗ್ರಹಿಸಿದೆ. ನಗರ ರೈಲು ನಿಲ್ದಾಣದಿಂದ ಮೈಸೂರು ರಸ್ತೆಗೆ ಪಶ್ಚಿಮ ಮಾರ್ಗದಲ್ಲಿ 25,13,630 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇನ್ನು ರೀಚ್ 1 ರಲ್ಲಿ ಅಂದ್ರೇ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಪೂರ್ವಭಾಗದಲ್ಲಿ 22,44,420 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

2022 ರ ಜನವರಿ ೫5 ರವರೆಗೆ ಮೆಟ್ರೋದಲ್ಲಿ ಒಟ್ಟು 10,113 ಮಾಸ್ಕ್ ಧರಿಸದ ಪ್ರಕರಣಗಳು ದಾಖಲಾಗಿದ್ದು, ಜನವರಿ 1 ರಿಂದ 5ರವರೆಗೆ ಮೆಟ್ರೋ ರೈಲಿನಲ್ಲಿ 2,49,950 ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು ಗುರುವಾರ ರಾತ್ರಿ ವೇಳೆಗೆ ಮೆಟ್ರೋ ಒಟ್ಟು ಒಂದು ಕೋಟಿ ದಂಡ ವಸೂಲಿ ಮಾಡಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ‌ನೀಡಿದ ಮೆಟ್ರೋ ಅಧಿಕಾರಿ ಎ.ಎಸ್.ಶಂಕರ್, ಮೆಟ್ರೋ ಇದನ್ನು ಸಾಧನೆ ಎಂದು ಪರಿಗಣಿಸುವುದಿಲ್ಲ. ಆದರೆ ಕೊರೋನಾ ನಿಯಮ‌ ಪಾಲಿಸದ ಜನರಿಂದ ಸರ್ಕಾರ ಹಾಗೂ ಬಿಎಂಅರ್ ಸಿಎಲ್ ನಿಯಮದಂತೆ ದಂಡ ವನ್ನು ವಸೂಲಿ ಮಾಡಲಾಗಿದೆ ಎಂದಿದ್ದಾರೆ.

ಸರಾಸರಿ 3.2 ಲಕ್ಷದಿಂದ 3.5 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ಪೈಕಿ ಹಲವರು ಕೊರೋನಾ ನಿಯಮಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಮೆಟ್ರೋ ದಂಡ ವಿಧಿಸುತ್ತಿದ್ದು, ನಗದು, ಕಾರ್ಡ್ ರೂಪದಲ್ಲಿ ದಂಡ ಪಾವತಿಸಲು ಅವಕಾಶವಿದೆ. ವೀಕೆಂಡ್ ಕರ್ಪ್ಯೂ ಅವಧಿಯಲ್ಲೂ ಮೆಟ್ರೋ ಸಂಚರಿಸಲಿದ್ದು ನಿಗದಿತ ಸಮಯದಲ್ಲಿ ಬದಲಾವಣೆಯಾಗಿದ್ದು30 ನಿಮಿಷಗಳಿಗೊಂದರಂತೆ ಟ್ರೇನ್ ಸಂಚರಿಸಲಿದೆ. ಅಲ್ಲದೇ ಮೆಟ್ರೋದಲ್ಲಿ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಂಚರಿಸುವಂತೆ ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಮನವಿ‌ಮಾಡಿದೆ.

ಇದನ್ನೂ ಓದಿ : ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳ ಬಗ್ಗೆ ಆತಂಕ ಹೊರಹಾಕಿದ ತಜ್ಞರು

ಇದನ್ನೂ ಓದಿ : ಕಾಂಗ್ರೆಸ್ ಗಾಗಿ ಕರ್ಪ್ಯೂ ಸಡಿಲಿಕೆ : ರೆಸಾರ್ಟ್, ರೆಸ್ಟೋರೆಂಟ್ ಗೆ ಅವಕಾಶ ಕೊಟ್ಟ ಸರ್ಕಾರ

(Don’t Care for Corona Rules, namma metro collect 1cr fine)

Comments are closed.