ಭಾನುವಾರ, ಏಪ್ರಿಲ್ 27, 2025
HomeBreakingಜನವರಿ 16 ರ ನಂತರ ಬಿಎಸ್ವೈ ಸಿಎಂ ಸ್ಥಾನ ಕಳ್ಕೋತಾರೆ...! ಇದು ಸಿಗಂದೂರು ದೇವಿ ಶಾಪ...!!

ಜನವರಿ 16 ರ ನಂತರ ಬಿಎಸ್ವೈ ಸಿಎಂ ಸ್ಥಾನ ಕಳ್ಕೋತಾರೆ…! ಇದು ಸಿಗಂದೂರು ದೇವಿ ಶಾಪ…!!

- Advertisement -

ಶಿವಮೊಗ್ಗ: ಸಿಎಂ ಯಡಿಯೂರಪ್ಪನವರು ಸಂಕ್ರಾತಿ ನಂತರ ಅಂದ್ರೇ ಜನವರಿ16 ರ ನಂತರ ಸಿಎಂ ಆಗಿ ಉಳಿಯೋದಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.

ಸಿಎಂ ಬಿಎಸ್ವೈ ಗೆ ಸಿಗಂದೂರು ದೇವಿ ಶಾಪ ತಗುಲಿದೆ. ಹೀಗಾಗೇ ಅವರ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣದ ಕಂಟಕ ಎದುರಾಗಿದೆ‌ ಎಂದು ಗೋಪಾಲ್ ಕೃಷ್ಣ ಹೇಳಿದ್ದು, ಸಿಗಂದೂರು ದೇವಿ ಅವಕೃಪೆಯಿಂದಲೇ ಅವರ ಸ್ಥಾನ ಸಂಕಷ್ಟ ದಲ್ಲಿದೆ ಎಂದಿದ್ದಾರೆ.

ನಾನು ಸಿಎಂ ಬಿಎಸ್ವೈ ಗೆ ಮೊದಲೇ ಸಿಗಂದೂರು ವಿಚಾರಕ್ಕೆ ಹೋಗಬೇಡಿ ಎಂದಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ.ನನ್ನ ಮಾತು ಕೇಳದೇ ಸಮಿತಿ ರಚಿಸಿದರು. ಸಿಗಂದೂರು ವಿಚಾರಕ್ಕೆ ಕೈಹಾಕಿದ್ದರಿಂದ ಬಿಎಸ್ವೈ ಗೆ ಖಂಡಿತಾ ಒಳ್ಳೆದಾಗೋದಿಲ್ಲ ಎಂದು ಬೇಳೂರು ಹೇಳಿದ್ದಾರೆ.

ಸಿಎಂ ಮೇಲೆ ಡಿನೋಟಿಫಿಕೇಶನ್ ಆರೋಪ ಬಂದಿದೆ.ಹೀಗಾಗಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೇ ಅವರು ತಮ್ಮ ಪ್ರಭಾವ ಬಳಸಿ ದಾಖಲೆ ತಿದ್ದೋದಿಕ್ಕು ಅವಕಾಶವಿದೆ ಎಂದ ಬೇಳೂರು ಸಿಎಂ ಬಿಎಸ್ವೈ ರನ್ನು ಕೆಳಗಿಳಿಸೋಕೆ ಸ್ವ ಪಕ್ಷಿಯರೇ ಸಿದ್ಧರಿದ್ದಾರೆ‌.

ಉಮೇಶ್ ಕತ್ತಿ, ಸುಬ್ರಹ್ಮಣ್ಯ ನಾಯ್ಡು ಹಾಗೂ ಯತ್ನಾಳ್ ಬಿಎಸ್ವೈ ವಿರುದ್ಧ ಎಲ್ಲ ಸಿದ್ಧತೆ ನಡೆಸಿದ್ದಾರೆ. ಜನವರಿ ೧೬ ರ ನಂತರ ಜನತೆಗೆ ಹೊಸ ಸುದ್ದಿ ಸಿಗಲಿದೆ ಎಂದರು.

RELATED ARTICLES

Most Popular