ಶಿಕ್ಷಕರ ವಾಟ್ಸಾಪ್ ಗ್ರೂಪ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಶಿಕ್ಷಕ ..! ಡಿಡಿಪಿಐ ಕೊಟ್ಟ ಶಿಕ್ಷೆ ಏನು ಗೊತ್ತಾ ..?

ಕಾರವಾರ : ಶಿಕ್ಷಕರು ಶಿಕ್ಷಣಕ್ಕೆ ಸಂಬಂದಿಸಿದಂತೆ ಚರ್ಚೆ ನಡೆಸೋ ಸಲುವಾಗಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದರು. ಆದ್ರೆ ಇಲ್ಲೋರ್ವ ಶಿಕ್ಷಕ ಶಿಕ್ಷಣದ ಬಗ್ಗೆ ಚರ್ಚಿಸೋ ಬದಲು ಅಶ್ಲೀಲ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಶಿಕ್ಷಕರು ಡಿಡಿಪಿಐಗೆ ದೂರು ಕೊಟ್ಟಿದ್ದು, ಶಿಕ್ಷಕನಿಗೀಗ ಪನಿಶ್ಮೆಂಟ್ ಡೆಪ್ಯುಟೇಶನ್ ಶಿಕ್ಷೆ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶಿಕ್ಷಕರು ನಿಷ್ಠ ಅನ್ನೋ ಐದು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದರು. ಪ್ರತೀ ಗ್ರೂಪ್ ನಲ್ಲಿಯೂ ಇನ್ನೂರಕ್ಕೂ ಅಧಿಕ ಶಿಕ್ಷಕರಿದ್ದಾರೆ. ಆದರೆ ಈ ಶಿಕ್ಷಕ ಗ್ರೂಪ್ ಗೆ ಅಶ್ಲೀಲ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಕೆಲ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ವಿಚಾರಣೆಗೆ ಒಳಪಡಿಸಿ ಡಿಡಿಪಿಐ ಅವರಿಗೆ ಶಿಸ್ತು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದರು.

ಆರಂಭದಲ್ಲಿ ತಾನೇ ತಪ್ಪು ಮಾಡಿಲ್ಲ, ತನ್ನ ಮೊಬೈಲ್ ಪೋನ್ ಕಳೆದು ಹೋಗಿತ್ತು. ಹೀಗಾಗಿ ಪೋಟೋ ಅಪ್ಲೋಡ್ ಆಗಿದೆ ಎಂದು ಹೇಳಿದ್ದ. ನಂತರದಲ್ಲಿ ತನಗೆ ಮೊಬೈಲ್ ಸಿಕ್ಕಿದೆ ಅಂತಾನೂ ಹೇಳಿದ್ದಾರೆ. ಆದರೆರ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆಯೇ ಶಿಕ್ಷಕ ತಾನೇ ಪೋಟೋವನ್ನು ಕಳುಹಿಸಿದ್ದಾಗಿಯೂ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಡಿಪಿಐ ಶಿಕ್ಷಕನನ್ನು ಕಾಯ್ದಿರಿಸಿ ಡೆಪ್ಯುಟೇಶನ್‌ ಮಾಡಿದ್ದಾರೆ.

Comments are closed.