ದನದ ಮಾಂಸ‌ ತಿನ್ನೋದು ನನ್ನ ಹಕ್ಕು…! ಪುನರುಚ್ಛರಿಸಿದ ಮಾಜಿ ಸಿಎಂ ಸಿದ್ಧು….!!

ಬೆಂಗಳೂರು: ಸದಾ ಹಿಂದುವಿರೋಧಿ ಧೋರಣೆಯಿಂದಲೇ ವಿವಾದಕ್ಕಿಡಾಗುವ ಮಾಜಿಸಿಎಂ ಸಿದ್ಧರಾಮಯ್ಯ ಮತ್ತೊಮ್ಮೆ ತಮ್ಮ ಆಹಾರ ಹಕ್ಕಿನ ಹೆಸರಿನಲ್ಲಿ ಗೋಮಾಂಸ ಭಕ್ಷಣೆಯನ್ನು ಹೆಗ್ಗಳಿಕೆ ಎಂಬಂತೆ ಹೇಳಿಕೊಂಡಿದ್ದಾರೆ.

ಗ್ರಾ.ಪಂ‌ ಚುನಾವಣೆ ಮತದಾನಕ್ಕೆ ತೆರಳಿದ್ದ ಮಾಜಿ ಸಿಎಂ ಸಿದ್ಧು ಹನುಮನ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಮ್ಮೆ ನಾನು ದನದ ಮಾಂಸ ತಿನ್ನುತ್ತೇನೆ. ಅದು ನನ್ನ ಆಹಾರದ ಹಕ್ಕು ಎಂದು ಪುನರುಚ್ಛರಿಸಿದ್ದಾರೆ.

ನಾನು ದನದ ಮಾಂಸವನ್ನು ತಿನ್ನುತ್ತೇನೆ. ನನ್ನ ಆಹಾರ ಪದ್ಧತಿ ನನ್ನ ಹಕ್ಕು. ಅದನ್ನು ಕೇಳಲು ನೀವ್ಯಾರು? ನಾನು ಈ ವಿಚಾರವನ್ನು ಸಂಸತ್ತಿನಲ್ಲೇ ಮುಕ್ತವಾಗಿ ಹೇಳಿದ್ದೇನೆ ಎಂದಿದ್ದಾರೆ.

ಗೋಮಾಂಸ ಸೇವನೆಯನ್ನು ಕಾಂಗ್ರೆಸ್ಸಿಗರು ಸಮರ್ಥಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದ ಸಿದ್ಧರಾಮಯ್ಯ, ನಮ್ಮವರು ಕೆಲವರು ಇದನ್ನು ಗಟ್ಟಿಯಾಗಿ ಹೇಳಲ್ಲ. ಆದರೇ ಹೀಗಾಗಬಾರದು ನಮ್ಮ ಸಿದ್ಧಾಂತವನ್ನು ನಾವು ಸಮರ್ಥಿಸಿಕೊಳ್ಳಬೇಕು.


ಕಾಂಗ್ರೆಸ್ ನವರು ಉಳಿದ ಜಾತಿಯವರು ಏನಂದುಕೊಳ್ಳುತ್ತಾರೆ ಅಂತ ಯೋಚನೆ ಮಾಡೋದನ್ನು ಬಿಡಬೇಕು ಎಂದು ಪಕ್ಷದ ಇತರ ನಾಯಕರಿಗೆ ಟಾಂಗ್ ನೀಡಿದ್ರು.ಗೋವನ್ನು‌ಪೂಜಿಸುತ್ತೇವೆ ಎಂಬ ವಾದ ಸರಿ, ಆದರೇ ,ವಯಸ್ಸಾದ ಹಸು,ಗಂಡು ಕರುವನ್ನು ಏನು ಮಾಡಬೇಕು? ಈ ಬಗ್ಗೆಯೂ ಸರ್ಕಾರ ವಿಚಾರ ಮಾಡಬೇಕು ಎಂದಿದ್ದಾರೆ.

ಸದಾ ಹಿಂದೂ ಧರ್ಮದ ನಂಬಿಕೆ ಗಳನ್ನು ಟೀಕಿಸುವ ಸಿದ್ದರಾಮಯ್ಯ ಕುಂಕುಮಧಾರಣೆ, ಪೂಜೆಗಳ ವಿರುದ್ಧವೂ ಹಲವು ಭಾರಿ ಟೀಕಿಸಿ ವಿವಾದ ಸೃಷ್ಟಿಸಿದ್ದರು.

Comments are closed.