ಮಂಗಳವಾರ, ಏಪ್ರಿಲ್ 29, 2025
HomeBreakingನನ್ನ ಸಿಡಿ ಇದ್ದರೇ ರಾಷ್ಟ್ರಮಟ್ಟದಲ್ಲಿ ರಿಲೀಸ್ ಮಾಡಲಿ….! ಅಚ್ಚರಿ ಮೂಡಿಸಿದೆ ಬಿಜೆಪಿ ಶಾಸಕನ ಸವಾಲು…!!

ನನ್ನ ಸಿಡಿ ಇದ್ದರೇ ರಾಷ್ಟ್ರಮಟ್ಟದಲ್ಲಿ ರಿಲೀಸ್ ಮಾಡಲಿ….! ಅಚ್ಚರಿ ಮೂಡಿಸಿದೆ ಬಿಜೆಪಿ ಶಾಸಕನ ಸವಾಲು…!!

- Advertisement -

ಎಲ್ಲ ಶಾಸಕರು ,ಸಚಿವರು ಸಿಡಿ ಕಾಟ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗ್ತಿರೋ ಬೆನ್ನಲ್ಲೇ ಶಾಸಕರೊಬ್ಬರು ನನ್ನ ಸಿಡಿ ಇದ್ದರೇ ರಾಷ್ಟ್ರ ಮಟ್ಟದಲ್ಲೇ ಬಿಡುಗಡೆ ಮಾಡಿ ಎನ್ನುವ ಮೂಲಕ ಸವಾಲು ಹಾಕಿದ್ದಾರೆ.

ಆರ್.ಆರ್.ನಗರ ಶಾಸಕ ಮುನಿರತ್ನ ಸಿಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು ನಾನು ಯಾವುದೇ ಕಾರಣಕ್ಕೂ ನ್ಯಾಯಾಲಯಕ್ಕೆ ಹೋಗೋದಿಲ್ಲ. ನನಗೆ ಅಂತಹ ಯಾವುದೇ ಅಗತ್ಯವಿಲ್ಲ.

ರಾಜಕೀಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾದ ಸ್ಥಿತಿ ಇದೆ. ಆದರೆ ನನಗೆ ನನ್ನ ಬಗ್ಗೆ ಕಾನ್ಸಿಡೆನ್ಸ್ ಇದೆ. ಯಾವುದೇ ಕಾರಣ ಕ್ಕೂ ನಾನು ನ್ಯಾಯಾಲಯದ ಮೆಟ್ಟಿಲೇರೋದಿಲ್ಲ. ನನ್ನ ಬಗ್ಗೆ ಸಿಡಿ ಇದ್ದರೇ ರಾಷ್ಟ್ರಮಟ್ಟದಲ್ಲೇ ಬಿಡುಗಡೆ ಮಾಡಲಿ ಎಂದರು.ನನ್ನ ಸಿಡಿ ಇದೆ ಎಂದು ಯಾರಾದ್ರೂ ನನ್ನನ್ನು ಹೆದರಿಸಿದ್ರೂ ನಾನು ನ್ಯಾಯಾಲಯಕ್ಕೆ ಹೋಗಲ್ಲ. ಆದಷ್ಟು ಬೇಗ ರಿಲೀಸ್ ಮಾಡಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ಮುಂಬೈ ಹಾಗೂ ಪುಣೆಗೆ ಒಟ್ಟಿಗೆ ಹೋಗಿದ್ವಿ. ಒಟ್ಟಿಗೆ ಬಂದ್ವಿ. ಅಲ್ಲಿ ನಮ್ಮ ತೇಜೋವಧೆ ಮಾಡುವಂತಹ ಕೆಲಸ ಯಾರೂ ಮಾಡಿಲ್ಲ. ಯಾರೋ ಸಚಿವರ ದೌರ್ಬಲ್ಯ ಗೊತ್ತಿರೋರೆ ಈ ಕೆಲಸ ಮಾಡಿರಬೇಕು ಎಂದು ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದ್ದಾರೆ.

ಮಾಜಿ ಸಚಿವರ ಬಗ್ಗೆ ಗೊತ್ತಿರುವವರು ಹಾಗೂ ಹತ್ತಿರದವರೇ ಈ ಕೆಲಸ ಮಾಡಿದ್ದಾರೆ.‌ಆದರೆ‌ನನಗೆ ಯಾವುದೇ ಸಿಡಿ ಭಯವಿಲ್ಲ ಎಂದು ಮುನಿರತ್ನ ಹೇಳಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Most Popular