ತಮಿಳುನಾಡಿನಲ್ಲಿ ಮುಂದುವರಿದ ಮೈತ್ರಿ ಪರ್ವ…! ಡಿಎಂಕೆ ಜೊತೆ ಕೈ ಜೋಡಿಸಿದ ಕಾಂಗ್ರೆಸ್…!!

ತಮಿಳುನಾಡು: ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ತಮಿಳುನಾಡಿನ‌ರಾಜಕೀಯ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಚುನಾವಣೆಗಾಗಿ ಡಿಎಂಕೆ ಕಾಂಗ್ರೆಸ್ ಜೊತೆ ಮೈತ್ರಿಗೆ ಜೈ ಎಂದಿದೆ.

ಸುದೀರ್ಘ ಮಾತುಕತೆ ಬಳಿಕ ಈ ಒಪ್ಪಂದ ಏರ್ಪಟ್ಟಿದ್ದು, ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಡಿಎಂಕೆ‌ ಕಾಂಗ್ರೆಸ್ ಮೈತ್ರಿ ಮೂಲಕ ಸ್ಪರ್ಧಿಸಲಿದೆ.

ಡಿಎಂಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಮಾತ್ರವಲ್ಲದೇ ೨೫ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡಿದೆ. ಅಲ್ಲದೇ ಪಕ್ಷದ ಸಂಸದ ವಸಂತ ಕುಮಾರ್ ನಿಧನದಿಂದ ತೆರವಾದ ಕನ್ಯಾಕುಮಾರಿ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕೈನಾಯಕರಿಗೆ ಅವಕಾಶ ನೀಡಿದೆ.

ಮೈತ್ರಿ ಕುರಿತು ಕಾಂಗ್ರೆಸ್ ತಮಿಳುನಾಡು ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ವಿವರಣೆ ನೀಡಿದ್ದು ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಜೊತೆ ಕೈಜೋಡಿಸಿದೆ. ನಾವು ೨೫ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದೇವೆ.ಎರಡು ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಲಿದ್ದು, ಚುನಾವಣೆಯಲ್ಲಿ ನಾವು ಬಿಜೆಪಿ ಹಾಗೂ ಎಐಡಿಎಂಕೆಯನ್ನು ಕ್ಲೀನ್ ಸ್ವೀಪ್ ಮಾಡಲಿದ್ದೇವೆ ಎಂದಿದ್ದಾರೆ .

ಎಐಡಿಎಂಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋದೇ ಅದರ ವಿನಾಶಕ್ಕೆ ಕಾರಣವಾಗಲಿದೆ. ಮೋದಿ ಒಂದು ದೇಶ ಒಂದು ಪಕ್ಷ ಎಂಬಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಡಿಎಂಕೆ ಹಾಗೂ ಕಾಂಗ್ರೆಸ್ ಬಿಜೆಪಿ ಆಸೆ ಈಡೇರಿಸಲು ಬಿಡುವುದಿಲ್ಲ ಎಂದಿದ್ದಾರೆ.

Comments are closed.