Mekedatu Plan: ಕರ್ನಾಟಕ-ತಮಿಳುನಾಡು ಮೇಕೆದಾಟು ವಿವಾದ…!! ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮಂಡಳಿ…!!

ಬೆಂಗಳೂರು ರಾಜ್ಯದ ರಾಜಧಾನಿ ಬೆಂಗಳೂರಿಗೆ ನೀರು ಪೊರೈಸುವುದು ಸೇರಿದಂತೆ ಹಲವು ಉದ್ದೇಶಕ್ಕೆ ರೂಪಿಸಲಾದ ಮಹತ್ವಾಕಾಂಕ್ಷೆಯ ಮೇಕದಾಟು ಯೋಜನೆಯ ವಿವಾದಕ್ಕೆ  ಕೊನೆಗೂ ತೆರೆ ಬಿದ್ದಿದೆ. ಈ ವಿವಾದದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಪ್ರವೇಶಿಸುವುದಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ಹೇಳಿದೆ.

ಕಾವೇರಿಯ ಹೆಚ್ಚಿನ ಪ್ರಮಾಣದ ನೀರನ್ನು ಕರ್ನಾಟಕಕ್ಕೆ ಉಳಿಸಿಕೊಂಡು ಬೆಂಗಳೂರಿಗೆ ಹೆಚ್ಚಿನ ನೀರು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ರೂಪಿಸಿತ್ತು. ಆದರೆ ಈ ಯೋಜನೆಗೆ ತಮಿಳುನಾಡು ಆರಂಭದಿಂದಲೂ ವಿರೋಧಿಸಿತ್ತು. ಹೀಗಾಗಿ ಇದುವರೆಗೂ ಮೇಕೆದಾಟು ಕಾಮಗಾರಿ ಆರಂಭವಾಗಿರಲಿಲ್ಲ.

ಅಲ್ಲದೇ ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದ ತಮಿಳುನಾಡು ಪ್ರಧಾನಿಗೆ ಮನವಿ ಸಲ್ಲಿಸಿತ್ತು.

ಜೊತೆಗೆ ಮೇಕೆದಾಟು ಯೋಜನೆಗಾಗಿ ಕರ್ನಾಟಕ ಸರ್ಕಾರ ಅಪಾರ ಪ್ರಮಾಣದ ಹಸಿರು ನಾಶ ಮಾಡುತ್ತಿದೆ ಎಂದು ಆರೋಪಿಸಿ ತಮಿಳುನಾಡಿನ ಪತ್ರಿಕೆಗಳು ವರದಿ ಮಾಡಿದ್ದವು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

ಇದೀಗ ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ತಾನು ಯಾವುದೇ ಅಭಿಪ್ರಾಯ ನೀಡುವುದಿಲ್ಲ ಎಂದು ಮಂಡಳಿ ಹೇಳಿದೆ.

Comments are closed.