Weekend Curfew: ಕರುನಾಡಿಗೆ ವಿಕೇಂಡ್ ಬೀಗಮುದ್ರೆ….! ಸೋಮವಾರ ಮುಂಜಾನೆಯವರೆಗೆ ಸ್ತಬ್ಧವಾಗಲಿದೆ ರಾಜ್ಯ…!!

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಕೇಂಡ್ ಕರ್ಪ್ಯೂ ಜಾರಿಯಲ್ಲಿರಲಿದ್ದು, ಶುಕ್ರವಾರ ರಾತ್ರಿ 7 ಗಂಟೆಯಿಂದ ಕರ್ನಾಟಕ ಸ್ತಬ್ಧವಾಗಿದೆ. ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ತುರ್ತು ಸೇವೆ ಹೊರತುಪಡಿಸಿ ಬೇರಾವುದೇ ಓಡಾಟಕ್ಕೂ ಅವಕಾಶವಿಲ್ಲ ಎಂದು ಸರ್ಕಾರ ಹೇಳಿದೆ.

ಅಗತ್ಯ ವಸ್ತುಗಳ ಪೊರೈಕೆ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ನಿರ್ಭಂದಿಸಲಾಗಿದ್ದು, ಪೊಲೀಸ್ ಖಡಕ್ ಕಣ್ಗಾವಲು ನಡೆಸಿದ್ದು, ನಿಯಮ ಉಲ್ಲಂಘಿಸಿ ಸಂಚಾರ ನಡೆಸುವ ವಾಹನಗಳನ್ನು ವಶಕ್ಕೆ  ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಮಧ್ಯಾಹ್ನ 2 ಗಂಟೆಯವರೆಗೆ ಹಾಲು,ಹಣ್ಣು,ತರಕಾರಿ ಹಾಗೂ ಮಾಂಸ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಕರ್ನಾಟಕದ 11 ಜಿಲ್ಲೆಗಳಲ್ಲಿ ಈಗಲೂ ಲಾಕ್ ಡೌನ್ ಜಾರಿಯಲ್ಲಿದ್ದು, ಉಳಿದ 19 ಜಿಲ್ಲೆಗಳಲ್ಲಿ ವಿಕೇಂಡ್ ಕರ್ಪ್ಯೂ ಜಾರಿಯಾಗಿದೆ.

ಎಲ್ಲಾಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು,ಕೊವೀಡ್ ಸಂಬಂಧಿತ ಕೆಲಸ ಮಾಡುವ ಕಂಪನಿಗಳು, ಅಗತ್ಯವಸ್ತುಗಳನ್ನು ಉತ್ಪಾದಿಸುವ  ಸಂಸ್ಥೆಗಳು, ಟೆಲಿಕಾಂ ಹಾಗೂ ಇಂಟರ್ ನೆಟ್ ಪೊರೈಸುವ ಕೆಲಸಗಾರರು, ವಾಕ್ಸಿನೇಶನ್ ಪಡೆಯುವವರು ಹಾಗೂ ಅವರ ಜೊತೆಗೆ ತೆರಳುವವರು,ಮದ್ಯದಂಗಡಿಗಳು,ರೆಸ್ಟೋರೆಂಟ್ ಹೊಟೇಲ್ ಗಳಿಗೆ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಮೊದಲೇ ಅನುಮತಿ ಪಡೆದ ಮದುವೆಗಳಿಗೆ 40 ಜನರಿಗೆ ಅವಕಾಶವಿದ್ದು, ಅಂತ್ಯಕ್ರಿಯೆಯಲ್ಲಿ 5 ಜನರಿಗೆ ಪಾಲ್ಗೊಳ್ಳಲು ಅವಕಾಶವಿದೆ. ಇದನ್ನು ಹೊರತುಪಡಿಸಿ ವಿನಾಕಾರಣ ರಸ್ತೆಗಿಳಿದರೇ ಅಂತಹವರ ವಾಹನ ಜಪ್ತುಮಾಡಿ ಶಿಸ್ತುಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ಧವಾಗಿದೆ.

Comments are closed.