ಆರ್.ಆರ್.ನಗರದಲ್ಲಿ ಮುನಿರತ್ನ ಮುಡಿಗೇರಿದ ಗೆಲುವು…! ಬಾಡಿದ ” ಕೈ” ಕುಸುಮ…!!

ಬೆಂಗಳೂರು: ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ನೆಕ್ ಟೂ ನೆಕ್ ಫೈಟ್ ಗೆ ಸಾಕ್ಷಿಯಾಗಿದ್ದ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮತ್ತೊಮ್ಮೆ ಮುನಿರತ್ನ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕುಸುಮಾ ಎದುರು ದಾಖಲೆಯ ಮತಗಳಿಂದ ಗೆದ್ದಿರುವ ಮುನಿರತ್ನ ತಮ್ಮ ವಿಜಯವನ್ನು ಬಿಜೆಪಿ ಪಕ್ಷದ ಮುಡಿಗೇರಿಸಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಮುನಿರತ್ನ ಮೊದಲ ಚುನಾವಣೆಯಲ್ಲಿ 17 ಸಾವಿರ ಮತದಿಂದ ಗೆದ್ದಿದ್ದೆ. ಎರಡನೇ ಸಲ ಗೆಲುವಿನ ಅಂತರ 26 ಸಾವಿರ ಇತ್ತು. ಈ ಬಾರಿ ಗೆಲುವಿನ ಅಂತರ 57 ಸಾವಿರದಷ್ಟಿದೆ. ಇದು ನನ್ನ ಮೇಲೆ ಮತದಾರರಿಗಿರುವ ವಿಶ್ವಾಸದ ಸಂಕೇತ.

ಈ ಗೆಲುವನ್ನು ಸಿಎಂ ಬಿಎಸ್ವೈ, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ನನ್ನ ಶಾಸಕರಿಗೆ ಅರ್ಪಿಸುತ್ತೇನೆ. ಚಾಮುಂಡೇಶ್ವರಿ ತಾಯಿ ಮೇಲೆ ಆಣೆ  ಮಾಡಿ ಹೇಳುತ್ತಿದ್ದೇನೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ದುಡಿಯುತ್ತೇನೆ. ನನ್ನ ಮತದಾರರ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥೀ ಕುಸುಮಾ ವಿರುದ್ಧ ವಾಗ್ದಾಳಿ ನಡೆಸಿದ ಮುನಿರತ್ನ, ಜನರು ನಕಲಿ ಕಣ್ಣೀರಿಗೆ ಮರುಳಾಗುವುದಿಲ್ಲ. ಕೊನೆಕ್ಷಣದಲ್ಲಿ ಅವರು ನಾನು ಆಡದ ಮಾತುಗಳನ್ನು ಆಡಿದ್ದೇನೆ ಎನ್ನುವ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಇದು ಸರಿಯಲ್ಲ. ನಾನು ಎಂದೂ ಹೆಣ್ಣುಮಕ್ಕಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ ಎಂದರು.

ಆರ್.ಆರ್.ನಗರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ 26 ಸಾವಿರದಷ್ಟು ಮತ ಪಡೆದುಕೊಂಡಿದ್ದರೇ, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಂಡಿದ್ದ ಜೆಡಿಎಸ್ ಈ ಭಾರಿಯೂ ಹೀನಾಯವಾಗಿ ಸೋತಿದೆ. ಡಿ.ಕೆ.ರವಿ ಪತ್ನಿ ಕುಸುಮಾ ಇದೇ ಮೊದಲ ಬಾರಿಗೆ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕಾಂಗ್ರೆಸ್ ನಿಂದಸ ಗೆದ್ದು ಶಾಸಕಿಯಾಗುವ ಕನಸಿನಲ್ಲಿದ್ದರು. ಆದರೆ  ಅನುಕಂಪದ ಅಲೆಯಲ್ಲಿ ಗೆಲುವು ಪಡೆಯುವ ಕುಸುಮಾ  ಲೆಕ್ಕಾಚಾರ ಕೈತಪ್ಪಿದೆ.

Comments are closed.