ದೇಶ-ವಿದೇಶ ಸುತ್ತೋದು ಕೆಲವರಿಗೆ ಹವ್ಯಾಸ. ಆದರೆ ಕಾರ್‌ನಲ್ಲೇ ದೇಶ ಸುತ್ತಿ,ಕಾರಿನಲ್ಲೇನಿದ್ದೆಮಾಡಿದಿನಕಳೆಯೋ ಈ ಜೋಡಿಮಾತ್ರ ಬಲು ಅಪರೂಪ ನೋಡಿ. ಕೇರಳದಜೋಡಿಯೊಂದುಇಂಥಸಾಹಸಕ್ಕೆ ಮುನ್ನುಡಿ ಬರೆದಿದೆ.

ಕೇರಳದ ತ್ರಿಶೂರ್ ಮೂಲದ ಹರಿಕೃಷ್ಣ್ ಜೆ ಮತ್ತು ಲಕ್ಷ್ಮೀಕೃಷ್ಣ ಇಂತಹದೊಂದು ವಿಭಿನ್ನ ಹವ್ಯಾಸದ ಜೊತೆ ಜೀವನ ಕಳೆಯುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜೀನಿಯರ್ ಆಗಿದ್ದ ಹರಿಕೃಷ್ಣ ಹಾಗೂ ಗ್ರಾಫಿಕ್ ಡಿಸೈನರ್ ಆಗಿರೋ ಲಕ್ಷ್ಮೀ ಕೃಷ್ಣ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಕಾರ್‌ನಲ್ಲೇ ದೇಶವಿಡಿ ಸುತ್ತಾಡೋ ಪ್ಲ್ಯಾನ್ ಹಾಕಿದ್ದಾರೆ.

ಪ್ರಯಾಣ ಮಾಡೋಕೆ ಸದಾ ಸಿದ್ಧವಾಗಿರೋ ಈ ಜೋಡಿ ಹನಿಮೂನ್ ಗೆ ಬೈಕ್ ನಲ್ಲೇ ಹೋಗಿ ಅಚ್ಚರಿ ಮೂಡಿಸಿದ್ದರಂತೆ. ಈಗ ಸಧ್ಯಕ್ಕೆ ತಮ್ಮ ಹುಂಡೈ ಕ್ರೇಟಾ ಕಾರನ್ನು ಮಲಗೋ ಕೋಣೆಯನ್ನಾಗಿ ಬಳಸುವಂತೆ ಸಿದ್ಧಪಡಿಸಿಕೊಂಡಿರೋ ಜೋಡಿ ದೇಶ ಪರ್ಯಟನೆ ಆರಂಭಿಸಿದೆ.

ಅಕ್ಟೋಬರ್ ೨೦೨೦ ರಿಂದಜರ್ನಿ ಆರಂಭಿಸಿದ ಈ ಜೋಡಿ ಈಗಾಗಲೇ ಬೆಂಗಳೂರು,ಚಿಕ್ಕಮಗಳೂರು,ಹಂಪಿ,ಉಡುಪಿ ಸೇರಿದಂತೆ ಕರ್ನಾಟಕದ ಹಲವು ಸ್ಥಳಗಳನ್ನು ಕವರ್ ಮಾಡಿದೆ.

ತಮ್ಮ ಸಾಹಸಗಳನ್ನು ಹಂಚಿಕೊಳ್ಳೋಕೆ Tinpin stories ಅನ್ನೋ ಯೂಟ್ಯೂಬ್ ಚಾನೆಲ್ ಮಾಡ್ಕೊಂಡಿರೋ ಹರಿಕೃಷ್ಣ್ ಹಾಗೂ ಲಕ್ಷ್ಮೀ ಆರಂಭದಲ್ಲಿ ೬೦ ದಿನಗಳ ಟ್ರಿಪ್ ಫ್ಲ್ಯಾನ್ ಮಾಡಿದ್ದು ಈಗಾಗಲೇ ಅದು ೧೬೦ ದಿನ ದಾಟಿದೆಯಂತೆ.
ಪ್ರಯಾಣಕ್ಕೆ ತಮ್ಮ ಸೇವಿಂಗ್ಸ್ ಹಣ ಬಳಸೋ ಜೋಡಿ ಬಟ್ಟೆ,ವಾಟರ್ ಕ್ಯಾನ್, ಗ್ಯಾಸ್ ಸಿಲೆಂಡರ್, ಅಗತ್ಯ ಪಾತ್ರೆ ಹಾಗೂ ಅಡುಗೆ ಸಾಮಾಗ್ರಿಗಳನ್ನು ಬಳಸಿಕೊಂಡು ರಸ್ತೆ ಬದಿಯಲ್ಲೇ ಅಡುಗೆ ತಯಾರಿಸಿ ಸವಿಯುತ್ತಾರಂತೆ.

ರಾತ್ರಿ ಗಳನ್ನು ಪೆಟ್ರೋಲ್ ಬಂಕ್ ಗಳಲ್ಲೇ ಕಾರು ನಿಲ್ಲಿಸಿ ಕಾರಿನಲ್ಲೇ ಮಲಗಿ ಕಳೆಯುವ ಈ ಜೋಡಿ ಈಗಾಗಲೇ ಜಮ್ಮು ಕಾಶ್ಮೀರ ವನ್ನು ಸುತ್ತಾಡಿ ಬಂದಿದೆ.

ದೇಶದ ಎಲ್ಲ ಭಾಗಕ್ಕೂ ಓಡಾಡಿ ಸಂಸ್ಕೃತಿ,ಬದುಕಿನ ರೀತಿನೀತಿ ಅರಿಯುವ ಉದ್ದೇಶದಿಂದ ಈ ಪ್ರವಾಸ ಅಂತಿರೋ ಜೋಡಿಗೆ ಸೋಷಿಯಲ್ ಮೀಡಿಯಾ ಮಂದಿ ಫುಲ್ ಫಿದಾ ಆಗಿದ್ದು ನಿಮ್ಮ ಪ್ರವಾಸಕ್ಕೆ ಜೈಯವಾಗಲಿವಾಗಲಿ ಅಂತಿದ್ದಾರೆ.