ಮೇ 2 ರೊಳಗೆ ಸಿಎಂ ಬದಲಾವಣೆಯಾಗದಿದ್ದರೇ ಅನಾಹುತವಾಗುತ್ತೆ…! ಮತ್ತೊಮ್ಮೆ ಯತ್ನಾಳ್ ಎಚ್ಚರಿಕೆ…!!

ಈಶ್ವರಪ್ಪ-ಯಡಿಯೂರಪ್ಪ ವಾರ್ ಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ತುಪ್ಪ ಸುರಿದಿದ್ದಾರೆ. ಭಿನ್ನಮತದ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್,  ಮೇ 2 ರೊಳಗೆ ಸಿಎಂ ಬದಲಾವಣೆಯಾಗದಿದ್ದರೇ, ಇನ್ನಷ್ಟು  ದೊಡ್ಡ ಸ್ಪೋಟ ಪಕ್ಷದೊಳಗೆ ಆಗಲಿದೆ ಎಂದಿದ್ದಾರೆ.

ವಿಧಾನಸೌಧ ಹಾಗೂ ಶಕ್ತಿಸೌಧ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ್ ನ ಡೀಲಿಂಗ್ ಅಡ್ಡವಾಗಿ ಬದಲಾಗಿದೆ. ನಾವು ಬಿಜೆಪಿ ಕಟ್ಟಿದಾಗ ವಿಜಯೇಂದ್ರ್ ನಿಗೆ  ಚಡ್ಡಿ ಹಾಕಲು ಬರುತ್ತಿರಲಿಲ್ಲ. ಈಗ ಅವನನ್ನು ನಾವು ಸಾರ್ ಎಂದು ಕರೆಯಬೇಕಾ? ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.

ವಿಜಯೇಂದ್ರ್ ಮುಂದೇ ಕೈಕಟ್ಟಿ ನಿಂತು ಆಡಳಿತ ನಡೆಸಬೇಕಾದ ಸ್ಥಿತಿ ರಾಜ್ಯದ ಸಚಿವರಿಗಿದೆ. ಮೀಟಿಂಗ್ ನಲ್ಲಿ ಕೂರಲು ಕುರ್ಚಿ ಇಲ್ಲದ ಸ್ಥಿತಿ ಇದೆ. ವಿಜಯೇಂದ್ರ್ ನೆ ಆಡಳಿತ ನಡೆಸುತ್ತಿದ್ದಾನೆ. ಯಡಿಯೂರಪ್ಪನವರಿಗೆ ವಯೋಸಹಜ ಮರೆವು ಆರಂಭವಾಗಿದೆ. ಹೀಗಾಗಿ ಎಲ್ಲ ಮಗನೇ ಲೂಟಿ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ ಮೊದಲು ಲಿಂಗಾಯತ್ ನಾಯಕರನ್ನು ಮುಗಿಸಿದರು. ಈಗ ಈಶ್ವರಪ್ಪನವರಂತಹ ಹಿಂದುಳಿದ ನಾಯಕರನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಅಪ್ಪ ಮಕ್ಕಳ ವಿರುದ್ಧ ಕಿಡಿಕಾರಿದ್ದಾರೆ.  ಎಲ್ಲ ಸಚಿವ ಸ್ಥಾನವನ್ನು ವಿಜಯೇಂದ್ರನಿಗೆ ನೀಡಿ ಎಲ್ಲರೂ ಶಾಸಕರಾಗಿ ಉಳಿಯಲಿ.

ನಾನು ಅನಂತಕುಮಾರ್, ಈಶ್ವರಪ್ಪ ಹೋರಾಟ ಮಾಡಿ ಪಕ್ಷ ಕಟ್ಟಿದ್ದೇವೆ. ವಿಜಯೇಂದ್ರ್ ನ ನೇತೃತ್ವದಲ್ಲಿ ಚುನಾವಣೆ ನಡೆಸೋದಾದರೇ ಪಕ್ಷ ಯಾಕೆ ಬೇಕು ಎಂದು ಯತ್ನಾಳ ಪ್ರಶ್ನಿಸಿದ್ದಾರೆ. ಪಕ್ಷದೊಳಗಿನ ಅಸಮಧಾನ ಎಲ್ಲೇ ಮೀರುತ್ತಿದೆ. ಹೀಗಾಗಿ ಶೀಘ್ರವಾಗಿ ನಾಯಕತ್ವ ಬದಲಾವಣೆಯಾಗದಿದ್ದರೇ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಯತ್ನಾಳ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

Comments are closed.