ಅರ್ಧಬಿಚ್ಚಿದ ಸೀರೆ, ಜೊತೆಗೊಂದು ಝೀನ್ಸ್ ಚಡ್ಡಿ….! ವಿವಾದಕ್ಕೆ ಗುರಿಯಾಯ್ತು ಮತ್ತೊಂದು ಪೋಟೋಶೂಟ್…!!

ಫ್ರೀ ವೆಡ್ಡಿಂಗ್ ಪೋಟೋಶೂಟ್, ವೆಡ್ಡಿಂಗ್ ಪೋಟೋಶೂಟ್, ಬೇಬಿಬಂಪ್ ಪೋಟೋಶೂಟ್ ಗಳು ಈಗ ಮಾಮೂಲು. ಆದರೆ ಇದೆಲ್ಲವನ್ನು ಮೀರಿಸುವಂತ ಪೋಟೋ ಶೂಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪ್ರತಿಭಾರಿಯೂ ನೆಟ್ಟಿಗರ  ಆಕ್ರೋಶಕ್ಕೆ ಗುರಿಯಾಗುತ್ತಿದೆ.

ವಿ.ಸೂ : ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕರ

ಹಿಂದೂ ಸಂಸ್ಕೃತಿ, ಆಚಾರ-ವಿಚಾರಗಳನ್ನು ಲಘುವಾಗಿ ತೋರಿಸುವಂತೆ ಪೋಟೋಶೂಟ್ ಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಋಷಿಮುನಿಗಳ ಪೋಸ್ ನಲ್ಲಿ ವಿಕೃತವಾದ ಭಾವಾಭಿವ್ಯಕ್ತಿಯ ಪೋಟೋ ಶೂಟ್ ವೊಂದು ಜನರ ಕೆಂಗಣ್ಣಿಗೆ ಗುರಿಯಾಗಿತ್ತು.

ವಿ.ಸೂ : ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕರ

ಇದೀಗ ಮದುವೆ ವಧುವಿನ ವಸ್ತ್ರ ಹಾಗೂ ಅಲಂಕಾರದಲ್ಲಿ ಯುವತಿಯೊರ್ವಳು ಸಿಗರೇಟ್, ಮದ್ಯ ಸೇವಿಸುತ್ತಿರುವ ಪೋಟೋವೊಂದು ವೈರಲ್ ಆಗಿದೆ.

ವಿ.ಸೂ : ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕರ

ಮದುಮಗಳಂತೆ ಅಲಂಕೃತಗೊಂಡ ಹೆಣ್ಣುಮಗಳು ಸೀರೆಯ ಬ್ಲೌಸ್ ತೊಟ್ಟು, ಮುಡಿಗೆ ಮಲ್ಲಿಗೆ ಮುಡಿದು, ಕೊರಳಿನಲ್ಲಿ ಆಭರಣ ತೊಟ್ಟು ಸೀರೆ ಬದಲು ಝೀನ್ಸ್ ಚಡ್ಡಿ ಹಾಕಿ ಪೋಸು ನೀಡಿದ್ದಾಳೆ. ಇಷ್ಟೇ ಆದರೆ ಜನರು  ಸುಮ್ಮನಿರುತ್ತಿದ್ದರೇನೋ, ಆದರೆ ಹೀಗೆಲ್ಲ ಸಿದ್ಧವಾದ ಹೆಣ್ಣು ಮಗಳು ಕೈಯಲ್ಲಿ ಮದ್ಯದ ಬಾಟ್ಲಿ ಹಿಡಿದು,  ಸಿಗರೇಟ್ ಹೊಡೆಯುತ್ತ ಕುಳಿತು ಪೋಟೋಗೆ ಪೋಸ್ ನೀಡಿದ್ದಾಳೆ.

ಅಷ್ಟೇ ಅಲ್ಲ ಇನ್ನೊಂದು ಪೋಟೋದಲ್ಲಿ  ಸೀರೆಯನ್ನು ಅರ್ಧಮರ್ಧ ಬಿಚ್ಚಿ  ಮರಕ್ಕೆ ಸುತ್ತಿಕೊಂಡು ನಿಂತಿದ್ದು, ಇದೆಲ್ಲ ಹಿಂದೂ ಸಂಸ್ಕೃತಿಗೆ ಮಾಡಿರುವ ಅವಮಾನ ಎಂಬ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.

ಮದುವೆಯ ಹೆಣ್ಣುಮಗಳ ಅಲಂಕಾರ ಮಂಗಳಕರವಾಗಿದ್ದು, ಆದರೆ ಈ ರೀತಿ ವಸ್ತ್ರಾಭರಣದಲ್ಲಿ ಸಿದ್ಧವಾಗಿ ಮದ್ಯ,ಸಿಗರೇಟ್ ಸೇದೋ ಮೂಲಕ ಸಂಸ್ಕೃತಿ ಧಕ್ಕೆ ತರುವಂತೆ ವರ್ತಿಸಿದ್ದಾರೆ ಎಂಬುದು ನೆಟ್ಟಿಗರ ಆಕ್ರೋಶ.

ವಧುವಿನಂತೆ ಶೃಂಗಾರಗೊಂಡು ಮದ್ಯದ ಅಮಲಿನಲ್ಲಿ ಪೋಸು ಕೊಟ್ಟಿರುವ ಹೆಣ್ಣುಮಗಳ ವಿರುದ್ಧ ದೂರು ದಾಖಲಿಸಬೇಕು. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆರೋಪಿಸಿದ್ದು,  ತೀವ್ರ ಟೀಕೆಗೆ ಗುರಿಯಾಗಿದೆ ಪೋಟೋಶೂಟ್. ಇತ್ತೀಚಿಗೆ  ಪೋಟೋಶೂಟ್ ಹೆಸರಿನಲ್ಲಿ ಹಿಂದೂಧರ್ಮದ ಅವಹೇಳನವೇ ಸಂಪ್ರದಾಯವಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಆದರೆ ಈ ಪೋಟೋಶೂಟ್ ನ್ನು ಯಾವ ಕಾರಣಕ್ಕೆ ಮಾಡಲಾಗಿದೆ, ರೂಪದರ್ಶಿಯಾರು? ಕಾನ್ಸೆಪ್ಟ್ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರು ಇಂತಹ ಪೋಟೋಶೂಟ್ ಮಾಡಿದವರ ವಿರುದ್ಧ ಕ್ರಮಜರುಗಿಸಬೇಕೆಂಬ ಒತ್ತಡ ವ್ಯಕ್ತವಾಗಿದೆ.

Comments are closed.