ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿ ಭಾಗದ ಜನತೆ ಮಂಗನಕಾಯಿಲೆಯ ಆತಂಕದಲ್ಲಿದ್ದಾರೆ. ಜಿಲ್ಲೆಯ ಎನ್.ಆರ್.ಪುರದಲ್ಲಿ ಮತ್ತೆ ಕೆಎಫ್ ಡಿ ಸೋಂಕು ಪತ್ತೆಯಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಅಸ್ಸಾಂ ಮೂಲದ ಕಾರ್ಮಿಕರಿಗೆ ಕಾಣಿಸಿಕೊಂಡಿದ್ದ ಕೆಎಫ್ ಡಿ ಸೋಂಕು ಇದೀಗ ಗ್ರಾಮದಲ್ಲಿ ಹಲವರಿಗೆ ತಗುಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಮಂಗನಕಾಯಿಲೆ ಇದೀಗ ಜಿಲ್ಲೆಗೆ ಕೂಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಹಾಗೂ ಮಧ್ಯಪ್ರದೇಶ ಮೂಲಕ ಸುಮಾರು 5 ಮಂದಿಗೆ ಉಲ್ಬಣಿಸಿದೆ.

ಜಿಲ್ಲೆಯಲ್ಲಿ ದಿಢೀರ್ ಕೆಎಫ್ ಡಿ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಮಲೆನಾಡಿಗರು ಆತಂಕಕ್ಕೆ ಒಳಗಾಗಿದ್ದಾರೆ. ಕಾಫಿ ತೋಟದ ಕೂಲಿ ಕಾರ್ಮಿಕರಲ್ಲಿ ವೈರಸ್ ಪತ್ತೆಯಾಗಿರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ಧೃಢಪಡಿಸಿದೆ.

ಕಳೆದ ಬಾರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮಸ್ಥರನ್ನು ಕಾಡಿದ್ದ ಮಂಗನಕಾಯಿಲೆ ಇದೀಗ ಕಾಫಿನಾಡಿನ ಜನರನ್ನು ಚಿಂತೆಗೀಡು ಮಾಡಿದೆ.