ಬದಲಾಯ್ತು ಆರ್ ಸಿಬಿ ಜೆರ್ಸಿ : ಬಿಡುಗಡೆಯಾಯ್ತು ಹೊಸ ಟೀಮ್ ವಿಡಿಯೋ

0

ಬೆಂಗಳೂರು : ಐಪಿಎಲ್ 2020 ಸಮೀಪಿಸುತ್ತಿದ್ದಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೋಗೋ ಬದಲಾಯಿಸಿಕೊಂಡ ಬೆನ್ನಲ್ಲೇ ಹೊಸ ಜರ್ಸಿ ಬಿಡುಗಡೆ ಮಾಡಿದೆ.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ವಿರಾಟ್ ಕೊಯ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡ ಶತಾಯಗತಾಯ ಕಪ್ ಗೆಲ್ಲಲೇ ಬೇಕೆಂಬ ಪಣತೊಟ್ಟಿದೆ.

ತನ್ನ ತಂಡವನ್ನು 6 ವಿದೇಶಿ ಆಟಗಾರರು ಸೇರಿದಂತೆ ಹಲವು ಆಟಗಾರರನ್ನು ಈ ಬಾರಿ ಕೈಬಿಟ್ಟಿರೋ ತಂಡ, ಬಲಿಷ್ಠ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ತಂಡದ ಲೋಗೋವನ್ನು ಬದಲಾಯಿಸಿಕೊಂಡಿರೋ ಆರ್ ಸಿಬಿ ಇದೀಗ ಹೊಸ ಜರ್ಸಿಯನ್ನು ಬಿಡುಗಡೆ ಮಾಡಿದ್ದು, ನಾಯಕ ವಿರಾಟ್ ಕೊಯ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಚಹಲ್ ಹೊಸ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ.

ಹೊಸ ಜರ್ಸಿಯ ಪೋಟೋವನ್ನು ಆರ್ ಸಿಬಿ ತನ್ನ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, Got To LOOk Bold to Play Bold ಅಂತಾ ಬರೆದುಕೊಂಡಿದೆ. ಮಾತ್ರವಲ್ಲ ಈ ಬಾರಿ ಮುತ್ತೂಟ್ ಪಿನ್ ಕ್ರಾಪ್ ತಂಡದ ಪ್ರಧಾನ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಕೆಂಪು, ಕಪ್ಪು ಹಾಗೂ ಗೋಲ್ಡನ್ ಬಣ್ಣದ ಜರ್ಸಿ ತಂಡಕ್ಕೆ ಹೊಸ ಲುಕ್ ನೀಡಿದೆ.

ಟ್ವಿಟ್ಟರ್ ಪೇಜ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಎರಡು ಹೊಸ ವಿಟಿಯನ್ನು ಬಿಡುಗಡೆ ಮಾಡಿದ್ದು, ಆರ್ ಸಿಬಿ 2020 ಐಪಿಎಲ್ ತಂಡಕ್ಕೆ ತನ್ನ ತಂಡದ ಸ್ಟ್ರೆಂಥ್ ಏನು ಅನ್ನೋದನ್ನು ವಿವರಿಸುತ್ತಿದೆ.

ಇನ್ನೊಂದು ವಿಡಿಯೀ ಐಪಿಎಲ್ ಆರಂಭದಿಂದ ಇಲ್ಲಿಯವರೆಗೆ ಬೆಳೆದು ರಾಯಲ್ ಚಾಲೆಂಜರ್ಸ್ ತಂಡ ಬೆಳೆದು ಬಂದಿರೋ ಬಗೆ ಹಾಗೂ ಬದಲಾಗಿರುವ ಹೊಸ ಲೋಗೋದ ಬಗೆಯನ್ನು ವಿವರಿಸುವಂತಿದೆ.

Leave A Reply

Your email address will not be published.