ಭಾನುವಾರ, ಏಪ್ರಿಲ್ 27, 2025
HomeBreakingJyothika: ಇನ್ ಸ್ಟಾಗ್ರಾಂಗೆ ಬಂದ್ರು ಬಹುಭಾಷಾ ನಟಿ: ಗಂಟೆಯಲ್ಲೇ ಸಂಪಾದಿಸಿದ್ರು 1.3 ಮಿಲಿಯನ್ ಫಾಲೋವರ್ಸ್

Jyothika: ಇನ್ ಸ್ಟಾಗ್ರಾಂಗೆ ಬಂದ್ರು ಬಹುಭಾಷಾ ನಟಿ: ಗಂಟೆಯಲ್ಲೇ ಸಂಪಾದಿಸಿದ್ರು 1.3 ಮಿಲಿಯನ್ ಫಾಲೋವರ್ಸ್

- Advertisement -

ಬಹುಭಾಷಾ ನಟಿ ಜ್ಯೋತಿಕಾ ಹಲವು ಭಾಷೆಗಳಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿದ್ರೂ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ದಿಢೀರ್ ಸೋಷಿಯಲ್ ಮೀಡಿಯಾಗೆ ಎಂಟ್ರಿಕೊಟ್ಟ ಜ್ಯೋತಿಕಾ ಒಂದು ಗಂಟೆಯಲ್ಲಿ 1.3 ಮಿಲಿಯನ್ ಪಾಲೋವರ್ಸ್ ಸಂಪಾದಿಸಿದ್ದಾರೆ.

ನಟ ಸೂರ್ಯ ಪತ್ನಿಯಾಗಿರೋ ಜ್ಯೋತಿಕಾ ಸೋಷಿಯಲ್ ಮೀಡಿಯಾದಿಂದ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದರು. ಆದರೆ ಅಗಸ್ಟ್ 31 ರಂದು ಜ್ಯೋತಿಕಾ ಇನ್ ಸ್ಟಾಗ್ರಾಂ ಅಕೌಂಟ್ ತೆರೆದಿದ್ದು, ತಮ್ಮ ಸ್ವಾತಂತ್ರ್ಯೋತ್ಸವದ ಸ್ಪೆಶಲ್ ಟ್ರಿಪ್ ಪೋಟೋ ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ನೆನಪಿಗಾಗಿ ನಟಿ ಜ್ಯೋತಿಕಾ ಹಿಮಾಲಯ ಪ್ರವಾಸ ಕೈಗೊಂಡಿದ್ದು, ಸ್ನೇಹಿತೆಯರ ಜೊತೆ 70 ಕಿಲೋಮೀಟರ್ ಟ್ರೆಕ್ಕಿಂಗ್ ಮಾಡಿದ್ದಾರಂತೆ. ಇದನ್ನು ಅದ್ಭುತ ಅನುಭವ ಎಂದಿರುವ ಜ್ಯೋತಿಕಾ, ಜೀವನವನ್ನು ಆಸ್ವಾಧಿಸದ ಹೊರತು ಹೊಸತನ ಅರಿವಾಗುವುದಿಲ್ಲ. ಇದೊಂದು ಸುಂದರ ದೇಶ .ಜೈ ಹಿಂದ್ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಪ್ರವೇಶಿಸಿದ್ದೇನೆ ಎಂದಿರುವ ಜ್ಯೋತಿಕಾ, ನನ್ನ ಬದುಕಿನ ಮದುರ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಹಿಮಾಲಯದಲ್ಲಿ ಬಾವುಟ ಹಿಡಿದು ನಿಂತ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ತಮಿಳು,ತೆಲುಗು,ಕನ್ನಡ ಚಿತ್ರಗಳಲ್ಲಿ ನಟಿಸಿರುವ ಜ್ಯೋತಿಕಾ ಸದ್ಯ ಅದನ್ ಪಿರಪ್ಪೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜ್ಯೋತಿಕಾ ಇನ್ ಸ್ಟಾಗ್ರಾಂಗೆ ಬರುತ್ತಿದ್ದಂತೆ 1.3 ಮಿಲಿಯನ್ ಫಾಲೋವರ್ಸ್ ಪಡೆದಿದ್ದು, ಅವರ  ಹೊಸ ಪೋಸ್ಟ್ ಗೆ ಲಕ್ಷಾಂತರ ಜನರು ಲೈಕ್ಸ್ ಒತ್ತಿದ್ದಾರೆ.

ಇದನ್ನೂ ಓದಿ : ದಕ್ಷಿಣ ಭಾರತದಲ್ಲಿಅತೀ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಟ ಯಾರು ಗೊತ್ತಾ

ಇದನ್ನೂ ಓದಿ : ಪಾಪ್ ಕಾರ್ನ್ ಮಂಕಿ ಟೈಗರ್ ಸುಂದರಿ ಈಗ ಕರಾವಳಿ ಹುಡುಗಿ: ಕಾಂತಾರಕ್ಕೆ ನಾಯಕಿಯಾದ ಸಪ್ತಮಿ ಗೌಡ

( Actress Jyotika surya makes entry into social media )

RELATED ARTICLES

Most Popular