ರಾಮಮಂದಿರಕ್ಕೆ ದೇಣಿಗೆ ಸಮರ್ಪಣೆ….! 6 ಕೋಟಿ ಸಂಗ್ರಹಿಸಿ ದಾಖಲೆ ಬರೆದ ಕೆ.ಆರ್.ಪುರಂ ಕ್ಷೇತ್ರ…! 51 ಲಕ್ಷ ರೂಪಾಯಿ ನೀಡಿದ ಸಚಿವರು..!!

ರಾಜ್ಯದೆಲ್ಲೆಡೆ ಪವಿತ್ರ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದೆ. ಮಾಜಿಸಿಎಂ ಸಿದ್ಧರಾಮಯ್ಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ನಿರಾಕರಿಸಿದ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗುತ್ತಿರುವಾಗಲೇ ಅತಿ ಹೆಚ್ಚು ದೇಣಿಗೆ ನೀಡುವ ಮೂಲಕ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರವೊಂದು ಆಸ್ತಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಜೋರಾಗಿದ್ದು,  ಮನೆ-ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ.ಆರ್.ಪುರಂ ಕ್ಷೇತ್ರ ಬರೋಬ್ಬರಿ 6 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸುವ ಮೂಲಕ ಅಗ್ರಸ್ಥಾನದಲ್ಲಿದೆ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6.01 ಕೋಟಿ ದೇಣಿಗೆ ಸಂಗ್ರಹಿಸಲಾಗಿದ್ದು, ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜು ನೇತೃತ್ವದಲ್ಲಿ  ದೇಣಿಗೆ ಸಂಗ್ರಹಿಸುವ ಅಭಿಯಾನ ನಡೆಸಲಾಗಿತ್ತು. ಕ್ಷೇತ್ರದ ಜನತೆಯಿಂದ ಬರೋಬ್ಬರಿ 5.5 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ.

ಇನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಸ್ವಯಂ ಪ್ರೇರಣೆಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದುವರೆಗಿನ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿದ ಖ್ಯಾತಿಗೆ ಕೆ.ಆರ್.ಪುರಂ ಪಾತ್ರವಾಗಿದೆ.

Comments are closed.