ಭಾನುವಾರ, ಏಪ್ರಿಲ್ 27, 2025
HomeBreakingಕೊರೋನಾದಿಂದ ನಲುಗಿದ ಶಾಸಕರ ಕುಟುಂಬ….! ಅಗಲಿದ ತಾಯಿಗೆ ಹೃದಯಸ್ಪರ್ಶಿ ವಿದಾಯ ಕೋರಿದ ಎಮ್ಎಲ್ಎ…!!

ಕೊರೋನಾದಿಂದ ನಲುಗಿದ ಶಾಸಕರ ಕುಟುಂಬ….! ಅಗಲಿದ ತಾಯಿಗೆ ಹೃದಯಸ್ಪರ್ಶಿ ವಿದಾಯ ಕೋರಿದ ಎಮ್ಎಲ್ಎ…!!

- Advertisement -

ಬೆಳಗಾವಿ: ಕೊರೋನಾ ಎರಡನೇ ಅಲೆ ಎಲ್ಲರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಬೆಳಗಾವಿ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಸಂಪೂರ್ಣ ಕುಟುಂಬಕ್ಕೆ ಸೋಂಕು ತಗುಲಿದೆ. ಅಷ್ಟೇ ಅಲ್ಲ ಸೋಂಕಿನ ತೀವ್ರತೆಯಿಂದ ಶಾಸಕ ಪಿ.ರಾಜೀವ್ ತಾಯಿಯನ್ನು ಕಳೆದುಕೊಂಡಿದ್ದು, ಹೃದಯಸ್ಪರ್ಶಿ ಸಾಲುಗಳ ಮೂಲಕ ವಿದಾಯ ಕೋರಿದ್ದಾರೆ.

https://kannada.newsnext.live/oximeter-sale-black-market-price-hike/

ಫೇಸ್ ಬುಕ್ ನಲ್ಲಿ ಕೊರೋನಾದಿಂದ ತಾಯಿ ಅಗಲಿರುವ ಸಂಗತಿಯನ್ನು ಹಂಚಿಕೊಂಡಿರುವ ಪಿ.ರಾಜೀವ್ ಸ್ವತಃ ನಾನು,ಪತ್ನಿ ಹಾಗೂ ಮಕ್ಕಳಿಗೂ ಕೊರೋನಾ ತಗುಲಿದೆ. ಚೇತರಿಸಿಕೊಂಡಿದ್ದೇವೆ. ಆದರೆ ನನ್ನ ಅಕ್ಕ ಹಾಗೂ ಆಕೆಯ ಮಗನಿಗೂ ಸೋಂಕಿದೆ. ಮನೆಯಲ್ಲೇ ಚಿಕಿತ್ಸೆ ನಡೆದಿದೆ.

ಹೀಗಾಗಿ ಸಾಂತ್ವನ ಹೇಳಲು ಯಾರು ಮನೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ನಾನು ಕೊರೋನಾದಿಂದ ಚೇತರಿಸಿಕೊಂಡಿದ್ದೆ. ಆದರೆ ಅಮ್ಮನಿಗೆ ಸೋಂಕು ತಗುಲಿದ ಬಳಿಕ ಅವರ ಆರೈಕೆಯಲ್ಲಿ ನಾನು ತೊಡಗಿದ್ದೆ. ಇಂದು ತಾಯಿಯವರು ನನ್ನನ್ನು ಅಗಲಿದ್ದಾರೆ. ಸರ್ಕಾರಿ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

https://kannada.newsnext.live/the-priest-who-theft-mangalasutra-at-marriage-telangana/

ಅಷ್ಟೇ ಅಲ್ಲ, ಜನ್ಮನೀಡಿ,ಎದೆ ಹಾಲುಣಿಸಿ,ಕೈತುತ್ತು ನೀಡಿ, ಸೆರಗಿನಿಂದ ಮೈಒರೆಸಿ ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು  ತಿಳಿಸಿದ ನನ್ನಮ್ಮ ಕೊರೋನಾಗೆ ಬಲಿಯಾಗಿ ಇಂದು ನಮ್ಮನ್ನು ಅನಾಥರನ್ನಾಗಿಸಿದಳು. ಆಕೆಯ ಅಗಲುವಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ ಎಂದು ಬರೆದಿದ್ದಾರೆ.

ನನ್ನ ಮನೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದರಿಂದ ಯಾರೂ ದಯಮಾಡಿ ಮನೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಫೇಸ್ ಬುಕ್ ನಲ್ಲಿ ತಾಯಿ ಬಗ್ಗೆ ಮನಕರಗುವ ಸಾಲುಗಳನ್ನು ಬರೆದಿರುವ ಶಾಸಕ ರಾಜೀವ್, ತಾಯಿಯೊಂದಿಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ.

RELATED ARTICLES

Most Popular