ಆಕ್ಸಿ ಮೀಟರ್ ಖರೀದಿಗೆ ಮುಗಿಬಿದ್ದ ಜನ : 3 ಪಟ್ಟು ದುಬಾರಿಯಾಯ್ತು ಬೆಲೆ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದಂತೆಯೇ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅದ್ರಲ್ಲೂ ಉಸಿರಾಟದ ಸಮಸ್ಯೆ, ಆಕ್ಸಿಜನ್ ಲೆವೆಲ್ ಚೆಕ್ ಮಾಡೋದಕ್ಕೆ ಆಕ್ಸಿ ಮೀಟರ್ ಖರೀದಿ ಸಾಮಾನ್ಯವಾಗುತ್ತಿದೆ. ಬೇಡಿಕೆ ಹೆಚ್ಚುತ್ತಿದ್ದಂತೆಯೇ ಆಕ್ಸಿ ಮೀಟರ್ ಬೆಲೆ ಮಾರುಕಟ್ಟೆಯಲ್ಲಿ ಮೂರು ಪಟ್ಟು ದುಬಾರಿಯಾಗಿದೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಕೊರೊನಾ ಸೋಂಕಿತರಲ್ಲಿ ಉಸಿರಾಟದ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ. ಆದರೆ ಎರಡನೇ ಅಲೆಯಲ್ಲಿ ಸೋಂಕು ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಒಂದೆಡೆ ಬೆಡ್ ಸಮಸ್ಯೆ ಎದುರಾದ್ರೆ, ಇನ್ನೊಂದೆಡೆ ಆಕ್ಸಿಜನ್ ಕೊರತೆಯೂ ಹೆಚ್ಚಾಗಿದೆ. ಹೀಗಾಗಿ ಮನೆಯಲ್ಲಿಯೇ ಆಕ್ಸಿಜನ್ ಲೆವೆಲ್ ಚೆಕ್ ಮಾಡಿಕೊಳ್ಳುವ ಸಲುವಾಗಿ ಇದೀಗ ಜನರೇ ಖುದ್ದು ಆಕ್ಸಿ ಮೀಟರ್ ಖರೀದಿಸುತ್ತಿದ್ದಾರೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 500 ರಿಂದ 600ರೂಪಾಯಿಗೆ ಮಾರಾಟವಾಗುತ್ತಿದ್ದ ಪಲ್ಸರ್ ಸಿ ಮೀಟರ್ ಬೆಲೆ ಇದೀಗ 3000 ದಿಂದ 4000 ರೂಪಾಯಿಗೆ ಏರಿಕೆಯಾಗಿದೆ. ಅಲ್ದಲೇ ಥರ್ಮಾಮೀಟರ್ ಬೆಲೆಯಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಆದರೆ ಗ್ರಾಹಕರು ದುಬಾರಿ ಬೆಲೆ ಕೊಟ್ಟು ಆಕ್ಸಿ ಮೀಟರ್ ಖರೀದಿ ಮಾಡುತ್ತಿರೋದು ಸಾಮಾನ್ಯವಾಗಿದೆ. ದುಬಾರಿ ಬೆಲೆಗೆ ಆಕ್ಸಿ ಮೀಟರ್ ಮಾರಾಟ ಮಾಡುವವರ ವಿರುದ್ದ ಕ್ರಮಕೈಗೊಳ್ಳಬೇಕಾಗಿದೆ.

https://kannada.newsnext.live/the-priest-who-theft-mangalasutra-at-marriage-telangana/

Comments are closed.