ಕುಂದಾಪುರ : ವಿದೇಶದಿಂದ ಬಂದಿದ್ದ ವ್ಯಕ್ತಿಯೋರ್ವ ಐಸೋಲೇಶನ್ ಗೆ ಅಂತಾ ಕುಂದಾಪುರ ಆಸ್ಪತ್ರೆಗೆ ಬಂದಿದ್ದ. ಆಸ್ಪತ್ರೆಯ ವೈದ್ಯರು ಸಿಬ್ಬಂಧಿಗಳು ಸೂಚಿಸಿದ್ದರೂ ಕೂಡ ವ್ಯಕ್ತಿ ಐಸೋಲೇಶನ್ ಗೆ ಒಳಪಡದೇ ಮಂಗಳೂರಿಗೆ ಹೋಗುವುದಾಗಿ ಹೇಳಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ. ಈ ಕುರಿತು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾವುಂದ ಗ್ರಾಮದ ಶಾಹುಲ್ ಹಮೀದ್ ಎಂಬವರ ಮಗ 32 ವರ್ಷದ ಮೊಹಮ್ಮದ್ ಮಝಾಮಿಲ್ ಎಂಬಾತ ವಿದೇಶದಿಂದ ಊರಿಗೆ ವಾಪಾಸಾಗಿದ್ದ. ಮಾರ್ಚ್ 19 (ಇಂದು) ವೈದ್ಯಕೀಯ ತಪಾಸಣೆಗೆ ಅಂತಾ ಕುಂದಾಪುರ ತಾಲೂಕು ಆಸ್ಪತ್ರೆಗೆ ಬಂದಿದ್ದ. ಈ ವೇಳೆಯಲ್ಲಿ ಆಸ್ಪತ್ರೆಯ ಸಹಾಯವಾಣಿ ಸಿಬ್ಬಂಧಿ ಹಾಗೂ ಫಿಜೀಶಿಯನ್ ಡಾ.ನಾಗೇಶ್ ಮೊಹಮ್ಮದ್ ಮಝಾಮಿಲ್ ಗೆ ಐಸೋಲೇಶನ್ ವಾರ್ಡ್ ಗೆ ತೆರಳುವಂತೆ ಸೂಚಿಸಿದ್ದಾರೆ. ಆದರೆ ವ್ಯಕ್ತಿ ತಾನು ಮಂಗಳೂರಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿರುತ್ತಾನೆ. ಹೀಗಂತೆ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ ಐಸೋಲೇಶನ್ ಗೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸದೇ ಬಿಟ್ಟು ಕಳುಹಿಸಿರೋ ವೈದ್ಯ ನಾಗೇಶ್ ಅವರ ಕ್ರಮದ ವಿರುದ್ದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ. ವಿದೇಶದಿಂದ ಬಂದಿದ್ದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಬೇಕಿದೆ ಅಂತಾ ಖುದ್ದು ವೈದ್ಯರೇ ಪೊಲೀಸರಿಗೆ ದೂರು ನೀಡಿದ್ದಾರೆ.

ಒಂದೊಮ್ಮೆ ಮೊಹಮ್ಮದ್ ಮಝಾಮಿಲ್ ಗೆ ಶಂಕಿತ ಕೊರೊನಾ ಲಕ್ಷಣಗಳಿವೆಯಾ ಅನ್ನೋದು ತಿಳಿದು ಬಂದಿಲ್ಲ. ಎಲ್ಲೆಡೆ ಕೊರೊನಾ ವಿರುದ್ದ ಮುನ್ನೆಚ್ಚರಿಕೆಯ ಕ್ರಮಕೈಗೊಳ್ಳುತ್ತಿರೋ ಬೆನ್ನಲ್ಲೇ ಕುಂದಾಪುರದ ವೈದ್ಯರ ನಿರ್ಲಕ್ಷ್ಯದ ವಿರುದ್ದ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ ಅಂತಾ ಜನರು ಆಗ್ರಹಿಸುತ್ತಿದ್ದಾರೆ.

ಕುಂದಾಪುರ ತಾಲೂಕಿ ಆಸ್ಪತ್ರೆಯ ವೈದ್ಯರಾಗಿರೋ ಡಾ.ನಾಗೇಶ್ ಅವರ ವಿರುದ್ದ ಹಿಂದಿನಿಂದಲೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಾಗೇಶ್ ಅವರ ವಿರುದ್ದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕುಂದಾಪುರ ಆಸ್ಪತ್ರೆಗೆ ವರ್ಗಾವಣೆಯಾದ ಮೇಲೂ ಡಾ.ನಾಗೇಶ್ ನಿರ್ಲಕ್ಷ್ಯ ವಹಿಸಿದ್ದಾರೆ. ಅದ್ರಲ್ಲೂ ವಿಶ್ವವೇ ಕೊರೊನಾ ವಿಚಾರದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ವೈದ್ಯ ನಾಗೇಶ್ ನಿರ್ಲಕ್ಷ್ಯವಹಿಸಿರೋದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಕುಂದಾಪುರದ ಜನತೆ ಆಗ್ರಹಿಸುತ್ತಿದ್ದಾರೆ.