ಮಾರ್ಚ್ 22ಕ್ಕೆ ದೇಶದಾದ್ಯಂತ ಜನತಾ ಕರ್ಪ್ಯೂ ಜಾರಿ : ಬೆಳಗ್ಗೆ 7 ರಿಂದ 9ರ ವರೆಗೆ ಜನತಾ ಕರ್ಪ್ಯೂಗೆ ಕರೆ ನೀಡಿದ ನಮೋ

0

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನತಾ ಕರ್ಪ್ಯೂಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಭಾನುವಾರದಿಂದಲೇ ಜನತಾ ಕರ್ಪ್ಯೂ ಜಾರಿಗೆ ಬರಲಿದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಜನರ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಇಡೀ ವಿಶ್ವವೇ ಕೊರೊನಾ ಸಂಕಷ್ಟದಲ್ಲಿದೆ. ಕೊರೊನಾ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಕೆಲವು ವಾರಗಳ ಕಾಲ ದೇಶದ ಜನತೆ ತ್ಯಾಗಕ್ಕೆ ಸಿದ್ದರಾಗಬೇಕೆಂದು ಮೋದಿ ಮನವಿ ಮಾಡಿದ್ದಾರೆ. ಪ್ರಾಯೋಗಿಕವಾಗಿ ಭಾನುವಾರ ಜನತಾ ಕರ್ಪ್ಯೂ ಜಾರಿ ಮಾಡಲಾಗುತ್ತಿದ್ದು, ಜನರಿಂದ ಜನರಿಗಾಗಿ ಜನತಾ ಕರ್ಪ್ಯೂ ಜಾರಿ ಮಾಡಲಾಗುತ್ತಿದೆ. ಈ ವೇಳೆಯಲ್ಲಿ ಯಾರೂ ಮನೆಯಿಂದ ಹೊರಗೆ ಬರಬೇಡಿ. ಯಾರು ಕೂಡ ರಸ್ತೆಗೆ ಇಳಿಯಬೇಡಿ. ಮನೆಯಲ್ಲಿದ್ದುಕೊಂಡೇ ಸ್ವಯಂ ಕರ್ಪ್ಯೂ ಅಳವಡಿಸಿಕೊಳ್ಳಿ ಅಂತಾ ಮೋದಿ ಮನವಿ ಮಾಡಿದ್ದಾರೆ.

ವಿಶ್ವವೇ ಇಂದು ಕೊರೊನಾ ಸಂಕಷ್ಟದಲ್ಲಿದೆ. ದೇಶದ ಜನತೆ ಇಂದು ಕೊರೊನಾ ವಿರುದ್ದ ಹೋರಾಟ ನಡೆಸಬೇಕಿದೆ. ಕೊರೊನಾ ತಡೆಗೆ ಕೇಂದ್ರ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಬಗ್ಗೆ ದೇಶದ ಜನರು ಭಯ ಪಡುವುದು ಬೇಡ. ಕೊರೊನಾ ಮೊದಲ ಹಾಗೂ 2ನೇ ಮಹಾಯುದ್ದಕ್ಕಿಂತಲೂ ಗಂಭೀರವಾಗಿದೆ. ಯಾರೂ ಕೂಡ ಕೊರೊನಾ ವೈರಸ್ ವಿರುದ್ದ ಲಘುವಾಗಿ ಪರಿಗಣಿಸಬೇಡಿ.

ಕೊರೊನಾಗೆ ಲಸಿಕೆ ಸಿಗುವವರೆಗೂ ಭಾರತೀಯರು ಕೆಲವೊಂದು ತ್ಯಾಗಕ್ಕೆ ಸಿದ್ದರಾಗಲೇ ಬೇಕಿದೆ. ಪ್ರತಿಯೊಬ್ಬರೂ ಅನ್ಯರಿಗೆ ಕೊರೊನಾ ಮುಟ್ಟಿಸದಿರುವ ಸಂಕಲ್ಪವನ್ನು ಮಾಡಿ. ಕೆಲವು ವಾರಗಳ ಕಾಲ ಮನೆಯಿಂದ ಹೊರಗೆ ಬರಲೇ ಬೇಡಿ. ಅದ್ರಲ್ಲೂ 10 ವರ್ಷದೊಳಗಿನ ಮಕ್ಕಳಯ ಹಾಗೂ 65 ವರ್ಷ ಮೇಲ್ಪಟ್ಟವರನ್ನು ಮನೆಯಿಂದ ಹೊರಬಿಡಬೇಡಿ. ದೇಶದ ಎಲ್ಲಾ ರಾಜ್ಯಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕೆಂದು ಆದೇಶಿಸಿದ್ದಾರೆ.

ಕೊರೊನಾ ವಿರುದ್ದ ದುಡಿಯುತ್ತಿರುವ ವೈದ್ಯರು, ನರ್ಸ್, ವಿಮಾನ ಸಿಬ್ಬಂಧಿ ಹಾಗೂ ಮಾಧ್ಯವರಿಗೆ ಮೋದಿ ಮನವಿ ಮಾಡಿದ್ದಾರೆ. ಪ್ರತೀ ಭಾನುವಾರ ಸಂಜೆ 5 ಗಂಟೆಗೆ ಕೊರೊನಾ ವಿರುದ್ದ ದುಡಿಯುತ್ತಿರುವವರಿಗೆ ಮನೆಯಲ್ಲಿಯೇ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞೆಯನ್ನು ಸಲ್ಲಿಸಿ ಅಂತಾ ಮನವಿ ಮಾಡಿದ್ದಾರೆ. ಮಾತ್ರವಲ್ಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಜನತಾ ಕರ್ಪ್ಯೂ ಬಗ್ಗೆ 10 ಜನರಿಗೆ ಮಾಹಿತಿಯನ್ನು ನೀಡಿ ಅಂತಾ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

Leave A Reply

Your email address will not be published.