ಕೇಂದ್ರದ ವಿರುದ್ಧ ಜೈವಿಕ ಅಸ್ತ್ರ ಆರೋಪ…! ನಟಿ ವಿರುದ್ಧದೇಶದ್ರೋಹದ ಪ್ರಕರಣ ದಾಖಲು…!!

ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವನ್ನು ವಿನಾಕಾರಣ ಕೆಟ್ಟದಾಗಿ ಟೀಕೆ ಮಾಡಿದ ನಟಿ ಸಂಕಷ್ಟಕ್ಕೆ ಸಿಲುಕಿದ್ದು, ನಟಿಮಣಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.

A1 21
ಕೇಂದ್ರದ ವಿರುದ್ಧ ಜೈವಿಕ ಅಸ್ತ್ರ ಆರೋಪ…! ನಟಿ ವಿರುದ್ಧದೇಶದ್ರೋಹದ ಪ್ರಕರಣ ದಾಖಲು…!! 5

ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಕೇಂದ್ರ ಸರ್ಕಾರ, ಕೇಂದ್ರಾಳಡಳಿತ ಪ್ರದೇಶವಾದ ಲಕ್ಷದ್ವೀಪದ ಮೇಲೆ ಜೈವಿಕ ಅಸ್ತ್ರ ಪ್ರಯೋಗಿಸಿದೆ ಎಂದು ಆರೋಪಿಸಿದ್ದ ನಟಿ ಆಯಿಷಾ ಸುಲ್ತಾನಾ ವಿರುದ್ಧ  ದೇಶದ್ರೋಹದ ಪ್ರಕರಣ ದಾಖಲಾಗಿದೆ.

A2 21
ಕೇಂದ್ರದ ವಿರುದ್ಧ ಜೈವಿಕ ಅಸ್ತ್ರ ಆರೋಪ…! ನಟಿ ವಿರುದ್ಧದೇಶದ್ರೋಹದ ಪ್ರಕರಣ ದಾಖಲು…!! 6

ಸ್ಥಳೀಯ ಚಾನೆಲ್ ವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನಟಿ ಆಯಿಷಾ ಸುಲ್ತಾನಾ, ಫ್ರಪುಲ್ ಪಟೇಲ್ ನೇತೃತ್ವದ ಸರ್ಕಾರ ಲಕ್ಷದ್ವೀಪದಲ್ಲಿ ಕೈಗೊಂಡ ನಿರ್ಧಾರದ ವಿರುದ್ಧ ಟೀಕಿಸಿದ್ದರು .ಕೇಂದ್ರ ಸರ್ಕಾರ ಲಕ್ಷದ್ವೀಪದ ವಿರುದ್ಧ ಜೈವಿಕ ಶಸ್ತ್ರಾಸ್ತ ಬಳಸಿದೆ ಎಂದು ಆರೋಪಿಸಿದ್ದ ಆಯಿಷಾ, ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳೇ ಇರಲಿಲ್ಲ. ಆದರೆ ಕೇಂದ್ರ ಸರ್ಕಾರ ಜೈವಿಕ ಅಸ್ತ್ರಗಳನ್ನು ಬಳಸಿ ಪ್ರಕರಣ ಹೆಚ್ಚುವಂತೆ ಮಾಡಿದೆ ಎಂದಿದ್ದರು.

A4 6
ಕೇಂದ್ರದ ವಿರುದ್ಧ ಜೈವಿಕ ಅಸ್ತ್ರ ಆರೋಪ…! ನಟಿ ವಿರುದ್ಧದೇಶದ್ರೋಹದ ಪ್ರಕರಣ ದಾಖಲು…!! 7

ಈ ಮಾತುಗಳಿಗಾಗಿ ಆಯಿಷಾ ಸುಲ್ತಾನಾ ವಿರುದ್ಧ ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ, 153 ಬಿ ದ್ವೇಷಪೂರಿತ ಭಾಷಣದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಲಕ್ಷದ್ವೀಪದ ಕವರತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

A6 10
ಕೇಂದ್ರದ ವಿರುದ್ಧ ಜೈವಿಕ ಅಸ್ತ್ರ ಆರೋಪ…! ನಟಿ ವಿರುದ್ಧದೇಶದ್ರೋಹದ ಪ್ರಕರಣ ದಾಖಲು…!! 8

ಸಿನಿಮಾ ನಟಿ,ಮಾಡೆಲ್ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಯಿಷಾ ಸುಲ್ತಾನಾ ಲಕ್ಷದ್ವೀಪದ ಚೆತಿಯಾತ್ ದ್ವೀಪದ ನಿವಾಸಿ.

Comments are closed.